ಪ್ರಧಾನಿ ಬಾಯಲ್ಲಿ ಬೈಂದೂರಿನ ದಂಪತಿ, ಯುವಾ ಬ್ರಿಗೇಡ್ ಪ್ರಸ್ತಾಪ: ಯಾರಿವರು? ಏನಿವರ ಯಶೋಗಾಥೆ?

ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್​ನಲ್ಲಿ ಕರ್ನಾಟಕದ ಶ್ರೀರಂಗಪಟ್ಟಣದ ಯುವಾ ಬ್ರಿಗೇಡ್ ತಂಡ ಮತ್ತು ಉಡುಪಿಯ ದಂಪತಿಗಳನ್ನು ಪ್ರಸ್ತಾಪಿಸಿದ್ದಾರೆ. ಯಾರವರು? ಏನವರ ಯಶೋಗಾಥೆ? ಇಲ್ಲಿದೆ ವಿವರ

ಪ್ರಧಾನಿ ಬಾಯಲ್ಲಿ ಬೈಂದೂರಿನ ದಂಪತಿ, ಯುವಾ ಬ್ರಿಗೇಡ್ ಪ್ರಸ್ತಾಪ: ಯಾರಿವರು? ಏನಿವರ ಯಶೋಗಾಥೆ?
ಶ್ರೀರಂಗಪಟ್ಟಣದ ಸಮೀಪ ಪಾಳುಬಿದ್ದಿದ್ದ ಶಿವ ದೇಗುಲ
Edited By:

Updated on: Dec 28, 2020 | 8:38 AM

ಈ ವರ್ಷದ ಕೊನೆಯ ಮನ್ ಕೀ ಬಾತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಹೆಸರನ್ನು ಎರಡು ಬಾರಿ ಪ್ರಸ್ತಾಪಿಸಿದ್ದಾರೆ. ಸುಮಾರು 40 ವರ್ಷಗಳಿಂದ ಪಾಳು ಬಿದ್ದಿದ್ದ ದೇವಸ್ಥಾನವನ್ನು ಜೀರ್ಣೋದ್ಧಾರಗೈದ ಯುವಾ ಬ್ರಿಗೇಡ್ ತಂಡವನ್ನು ಪ್ರಧಾನಿ ನೆನೆಸಿಕೊಂಡಿದ್ದಾರೆ. ಜೊತೆಗೆ, ಸೋಮೇಶ್ವರ ಕಡಲ ತೀರವನ್ನು ಸ್ವಚ್ಛಗೊಳಿಸಿದ ಅನುದೀಪ್-ಮಿನುಷಾ ದಂಪತಿಯ ಕಾರ್ಯವನ್ನೂ ಪ್ರಸ್ತಾಪಿಸಿದ್ದಾರೆ.

ನವ ವಿವಾಹಿತರ ಪರಿಸರ ಪ್ರೀತಿ
ಉಡುಪಿಯ ಬೈಂದೂರಿನ ಅನುದೀಪ್ ಹೆಗ್ಡೆ ಮತ್ತು ಮಿನುಷಾ ಕಾಂಚನ್​ರದ್ದು ಇನ್ನೊಂದು ಸ್ಪೂರ್ತಿದಾಯಕ ಕಥೆ. ಈ ನವ ವಿವಾಹಿತ ಜೋಡಿ ತಮ್ಮ ಮಧುಚಂದ್ರವನ್ನು ಆಚರಿಸಿಕೊಂಡ ಬಗೆಯೇ ವಿಭಿನ್ನ. ಪರಿಸರದ ಬಗೆಗಿನ ಕಾಳಜಿಯಿಂದಾಗಿ ಇಡೀ ದೇಶವೇ ಇವರತ್ತ ತಿರುಗಿ ನೋಡುತ್ತಿದೆ.

ಆರು ವರ್ಷಗಳ ಪ್ರೇಮಿಸಿ ಮದುವೆಯಾದ ಈ ಜೋಡಿ ಆಗಾಗ ಸೋಮೇಶ್ವರ ಕಡಲ ಕಿನಾರೆಯಲ್ಲಿ ವಿಹರಿಸುತ್ತಿದ್ದರು. ಅಲ್ಲಿ ಚದುರಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಗಮನಿಸಿದ್ದ ಅನುದೀಪ್ ಮತ್ತು ಮಿನುಷಾ ಮಧುಚಂದ್ರಕ್ಕೆ ಬೇರೆಲ್ಲೋ ತೆರಳುವ ಬದಲು ಸೋಮೇಶ್ವರ ಕಡಲ ತೀರವನ್ನು ಸ್ವಚ್ಛಗೊಳಿಸಿ, 8 ಕ್ವಿಂಟಲ್​ಗೂ ಹೆಚ್ಚು ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಿದರು. ಈಗ ಈ ಜೋಡಿಯ ಯಶೋಗಾಥೆ ಇಡೀ ದೇಶಕ್ಕೇ ತಲುಪಿದೆ.

ಪ್ರಧಾನಿ ಮನ್ ಕೀ ಬಾತ್​ನಲ್ಲಿ ತಮ್ಮ ಕಾರ್ಯ ಪ್ರಸ್ತಾಪ ಮಾಡಿದ್ದು ಇನ್ನಷ್ಟು ಶ್ರಮದಾನ ಚಟುವಟಿಕೆ ನಡೆಸಲು ಸ್ಫೂರ್ತಿ ನೀಡಿದೆ ಎಂದು ದಂಪತಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ಮನ್ ಕೀ ಬಾತ್​ನಲ್ಲಿ ಈ ಜೋಡಿಯ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ ಅನುದೀಪ್ ಮತ್ತು ಮಿನುಷಾ ದಂಪತಿ ಮನೆಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸನ್ಮಾನಿಸಿದರು.

ಅನುದೀಪ್ ಮತ್ತು ಮಿನುಷಾ ಜೋಡಿ

ಶಿಥಿಲ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಯುವಾ ಬ್ರಿಗೇಡ್​
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಂ ಸಮೀಪ ಕೃಷ್ಣದೇವರಾಯರ ಕಾಲದಲ್ಲಿ ಶಿವನ ದೇವಾಲಯ ನಿರ್ಮಾಣವಾಗಿತ್ತು. ಕಳೆದ 45 ವರ್ಷಗಳ ಹಿಂದೆ ಪೂಜೆ ಸಲ್ಲಿಸುತ್ತಿದ್ದ ಮರಿಯಪ್ಪ ಎಂಬುವವರು ಮೃತಪಟ್ಟರು. ಆನಂತರ ದೇಗುಲ ಪಾಳುಬಿದ್ದಿತ್ತು. ದೇವಾಲಯದ ಗೋಡೆಗಳು ಶಿಥಿಲಾವಸ್ಥೆ ತಲುಪಿ, ಗಿಡಗಂಟೆಗಳು ಬೆಳೆದು, ವಿಷ ಜಂತುಗಳ ತಾಣವಾಗಿ ಪರಿವರ್ತನೆಗೊಂಡಿತ್ತು.

ಇದನ್ನು ಗಮನಿಸಿದ ಶ್ರೀರಂಗಪಟ್ಟಣದ ಯುವಾ ಬ್ರಿಗೇಡ್  ತಂಡ ಎರಡು ತಿಂಗಳುಗಳ ಕಾಲ ಪ್ರತಿ ಭಾನುವಾರ ಬೆಳಗ್ಗೆ 6 ರಿಂದ 9 ರವರೆಗೆ ಶ್ರಮದಾನ ಮಾಡುವ ಮೂಲಕ ದೇವಾಲಯವನ್ನು ಸಂಪೂರ್ಣ ಜೀರ್ಣೋದ್ಧಾರ ಮಾಡಿದರು. ಬಳಿಕ ಹೊಸ ಶಿವಲಿಂಗ ಪ್ರತಿಷ್ಠಾಪಿಸಿ, ನಿತ್ಯ ಪೂಜೆ ಪುನಸ್ಕಾರ ನೆರವೇರಿಸುತ್ತಿದ್ದಾರೆ. ಪ್ರತಿ ಸೋಮವಾರ ಅಭಿಷೇಕ ನಡೆಸಲಾಗುತ್ತಿದೆ.

ಪಾಳುಬಿದ್ದಿದ್ದ ದೇಗುಲ

ಜೀರ್ಣೋದ್ಧಾರ ಪ್ರಕ್ರಿಯೆ

ಜೀರ್ಣೋದ್ಧಾರದ ನಂತರ ಶಿವ ಮಂದಿರ

ದೇಗುಲ ಪುನರುಜ್ಜೀವನಗೊಳಿಸಿದ ಯುವಾ ಬ್ರಿಗೇಡ್ ತಂಡ

ಕಡಲ ತೀರ ಸ್ವಚ್ಛತೆಗೆ ಸಂದ ಗೌರವ

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅನುದೀಪ್- ಮಿನುಷಾ ದಂಪತಿಗಳನ್ನು ಸನ್ಮಾನಿಸಿದರು.

ಕಡಲ ತೀರ ಸ್ವಚ್ಛತೆಯಲ್ಲಿ ಮಿನುಷ ಖುಷಿ

Mann Ki Baat | ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ: ನರೇಂದ್ರ ಮೋದಿ

ಹನಿಮೂನ್​ಗೆ ಹೋಗದೆ.. ಬೀಚ್​ ಕ್ಲೀನ್ ಮಾಡ್ತಾ ಸಮಾಜ ಸೇವೆ ಮಾಡಿದ ನವ ವಧು-ವರ

 

Published On - 6:33 am, Mon, 28 December 20