ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು 71ನೇ ಹುಟ್ಟುಹಬ್ಬದ ಸಂಭ್ರಮ (Prime Minister Narendra Modi Birthday). ಇಡೀ ದೇಶಾದ್ಯಂತ ಬಿಜೆಪಿ ಮಾತ್ರವಲ್ಲದೆ, ಜನಸಾಮಾನ್ಯರೂ ಕೂಡ ಆಚರಣೆ ಮಾಡುತ್ತಿದ್ದಾರೆ. ಅದರಲ್ಲಿ ಬಿಜೆಪಿಯಂತೂ ನೂರೆಂಟು ಸೇವಾ ಕಾರ್ಯಕ್ರಮ ಹಮ್ಮಿಕೊಂಡಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಜಾರಿಗೊಳಿಸಿದ ಯೋಜನೆಗಳನ್ನು ದೊಡ್ಡ ಪರದೆಗಳ ಮೇಲೆ ತೋರಿಸುವುದು, ಮೋದಿಯವರ ಜೀವನವನ್ನು ಸಾರುವ ವಸ್ತುಪ್ರದರ್ಶನ, ರಕ್ತದಾನ ಶಿಬಿರಗಳು, ಕೊವಿಡ್ 19 ಲಸಿಕಾ ಸೇವಾ ಅಭಿಯಾನ, ಸ್ವಚ್ಛತಾ ಅಭಿಯಾನಗಳನ್ನು ಬಿಜೆಪಿ ಆಯೋಜಿಸಿದ್ದು, ಇಡೀ ದಿನ ದೇಶಾದ್ಯಂತ ಕಾರ್ಯಕ್ರಮಗಳು ನಡೆಯಲಿವೆ.
ಅಂದಹಾಗೆ ಈ ಕಾರ್ಯಕ್ರಮಗಳನ್ನು ಇಂದಿನಿಂದ ಅಕ್ಟೋಬರ್ 7ರವರೆಗೆ ನಡೆಸಲು ಕಾರ್ಯಕರ್ತರು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 25ರಂದು ಪಂಡಿತ್ ದೀನ್ ದಯಾಳ್ ಜನ್ಮದಿನ, ಅಕ್ಟೋಬರ್ 2ರಂದು ಗಾಂಧೀ ಜಯಂತಿ ಹಾಗೂ ಅಕ್ಟೋಬರ್ 7ಕ್ಕೆ ಸರಿಯಾಗಿ ನರೇಂದ್ರ ಮೋದಿಯವರು ಸರ್ಕಾರಗಳ ಮುಖ್ಯಸ್ಥರಾಗಿ 20ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಮೂರು ವಾರಗಳ ಕಾಲ ಸೇವಾ ಅಭಿಯಾನ ನಡೆಯಲಿದೆ.
ಇಂದು 71ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಹಲವು ಗಣ್ಯರು ಶುಭಕೋರಿದಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ‘ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮಗೆ ದೇವರು ಆಯುರಾರೋಗ್ಯ ನೀಡಲಿ. ಹಾಗೇ, ನಿಮ್ಮ ಅಹರ್ನಿಶಂ ಸೇವಾಮಹೆ (ಸ್ವಂತಕ್ಕಿಂತ ಸೇವೆ ಮೊದಲು) ಎಂಬ ಜಟಿಲ ಮಂತ್ರದೊಂದಿಗೆ ದೇಶಸೇವೆಯನ್ನು ಮುಂದುವರಿಸಿ ಎಂದು ಹಾರೈಸುತ್ತೇನೆ’ ಎಂದು ಹೇಳಿದ್ದಾರೆ.
भारत के प्रधानमंत्री श्री @narendramodi को जन्मदिन की हार्दिक बधाई और शुभकामनाएं। मेरी शुभेच्छा है कि आप स्वस्थ रहें और दीर्घायु प्राप्त कर ‘अहर्निशं सेवामहे’ की अपनी सर्वविदित भावना के साथ राष्ट्र सेवा का कार्य करते रहें।
— President of India (@rashtrapatibhvn) September 17, 2021
ಗೃಹ ಸಚಿವರ ಅಮಿತ್ ಶಾ ಅವರು ಮೂರು ಟ್ವೀಟ್ ಮಾಡಿ ಪ್ರಧಾನಿ ಮೋದಿಯವರನ್ನು ಹೊಗಳಿದ್ದಾರೆ. ‘ನಮ್ಮ ದೇಶವು ಪ್ರಧಾನಿ ಮೋದಿಯವರ ರೂಪದಲ್ಲಿಅತ್ಯಂತ ಶಕ್ತಿಯುತ ಮತ್ತು ನಿರ್ಣಾಯಕ ನಾಯಕತ್ವವನ್ನು ಪಡೆದಿದೆ. ದಶಕಗಳಿಂದ ತಮ್ಮ ಹಕ್ಕುಗಳಿಂದ ವಂಚಿತರಾದ ಬಡ ಜನರಿಗೆ ಅದನ್ನು ಒದಗಿಸಿಕೊಡುವ ಮೂಲಕ ಒಂದು ಘನತೆಯುಕ್ತ ಜೀವನ ಒದಗಿಸಿಕೊಟ್ಟಿದ್ದಾರೆ. ಹಾಗೇ, ತಮ್ಮ ದಣಿವರಿಯದ ಕೆಲಸ ಮೂಲಕವೇ ಪ್ರಸಿದ್ಧರಾಗಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರವೆಂದರೆ ಏನೆಂದು ಇಡೀ ಜಗತ್ತಿಗೆ ತೋರಿಸಿದ್ದಾರೆ’ ಎಂದು ಒಂದು ಟ್ವೀಟ್ನಲ್ಲಿ ಅಮಿತ್ ಶಾ ಹೇಳಿದ್ದಾರೆ. ಹಾಗೇ, ಭದ್ರತೆ, ಬಡವರ ಕಲ್ಯಾಣ, ಅಭಿವೃದ್ಧಿ ಮತ್ತು ಐತಿಹಾಸಿಕ ಸುಧಾರಣೆಗಳನ್ನು ಸಮನ್ವಯತೆಯಿಂದ ಹೇಗೆ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ. ಮೋದಿಯವರ ದೃಢ ನಿಶ್ಚಯಗಳು ದೇಶವಾಸಿಗಳಲ್ಲಿ ಕೂಡ ಹೊಸ ಶಕ್ತಿ ಸೃಷ್ಟಿಸಿವೆ. ಹೀಗಾಗಿ ದೇಶವು ಹೊಸ ದಾಖಲೆಗಳನ್ನು ನಿರ್ಮಿಸುವಲ್ಲಿ, ಸ್ವಾವಲಂಬಿಯಾಗುವತ್ತ ಮುನ್ನಡೆದಿದೆ ಎಂದೂ ಅಮಿತ್ ಶಾ ಹೇಳಿದರು.
मोदी जी के रूप में देश को एक ऐसा सशक्त व निर्णायक नेतृत्व मिला है, जिसने दशकों से अपने अधिकारों से वंचित करोड़ों गरीबों को विकास की मुख्यधारा से जोड़कर न सिर्फ उन्हें समाज में गरिमामयी जीवन दिया बल्कि अपने अथक परिश्रम से विश्वभर को यह दिखाया कि एक प्रजावत्सल नेतृत्व कैसा होता है।
— Amit Shah (@AmitShah) September 17, 2021
मोदी जी ने सुरक्षा, गरीब-कल्याण, विकास व ऐतिहासिक सुधारों के समांतर समन्वय का अद्वितीय उदाहरण प्रस्तुत किया है।@narendramodi जी के संकल्प व समर्पण ने देशवासियों में एक नई ऊर्जा व आत्मविश्वास पैदा किया है, जिससे आज देश नित नए कीर्तिमान स्थापित कर आत्मनिर्भरता की ओर अग्रसर है।
— Amit Shah (@AmitShah) September 17, 2021
मोदी जी के जीवन का क्षण-क्षण गरीबों, किसानों व वंचितों की सेवा में समर्पित है।
मैं सभी कार्यकर्ताओं से अपील करता हूँ कि आप मोदी जी के जन्मदिवस पर @BJP4India के #SevaSamarpan के अंतर्गत सेवा कार्यों में भाग लें और साथ ही भाजपा सरकारों की कल्याणकारी योजनाओं को जन-जन तक पहुंचाएं।
— Amit Shah (@AmitShah) September 17, 2021
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಹೀಗಿದೆ:
ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು. ಪ್ರಧಾನಿ ಮೋದಿಯವರು ದೃಢ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಕಲ್ಪನಾ ಶೀಲತೆ ಮತ್ತು ದೂರದೃಷ್ಟಿಗೆ ಹೆಸರಾದವರು. ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಹೊರಟಿರುವ ಅವರ ಸಂಕಲ್ಪ, ಮೋದಿಯವರ ದೂರದೃಷ್ಟಿ, ಇಚ್ಛಾಶಕ್ತಿಯ ಸಂಕೇತವಾಗಿದೆ’ .
भारत के यशस्वी प्रधानमंत्री श्री @narendramodi को जन्मदिवस की हार्दिक शुभकामनाएँ। अपने निर्णय लेने की क्षमता, कल्पनाशीलता और दूरदृष्टि के लिए विख्यात मोदीजी ने भारत को एक ‘आत्मनिर्भर भारत’ का स्वरूप देने का जो संकल्प लिया है, वह उनके विज़न और प्रबल इच्छाशक्ति का प्रतीक है।
— Rajnath Singh (@rajnathsingh) September 17, 2021
ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿ, ಕಷ್ಟದ ಸಮಯದಲ್ಲಿ ಸಿಕ್ಕ ಸೂಕ್ತ ನಾಯಕ ನರೇಂದ್ರ ಮೋದಿ. ಭಾರತ ಮಾತೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ..ಹಾಗೇ, ಭಾರತ ಮಾತೆಯ ಮಾರ್ಗದರ್ಶನ ಅವರಿಗೆ ಇದೆ. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಡಿ ಕೆಲಸ ಮಾಡಲು ನಮಗೆ ಹೆಮ್ಮೆಯಾಗುತ್ತದೆ. ಅವರಿಗೆ ದೀರ್ಘ ಆಯುಷ್ಯ, ಆರೋಗ್ಯವನ್ನು ದೇವರು ಪ್ರಾರ್ಥಿಸಲಿ ಎಂದು ಹೇಳಿದ್ದಾರೆ. ಹಾಗೇ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿ, ಸ್ವಾವಲಂಬಿ ಭಾರತದ ಮಹಾನ್ ಸಂಕಲ್ಪ ಹೊತ್ತ ಮೋದಿಯವರು ಅತ್ಯಂತ ಯಶಸ್ವಿ ಪ್ರಧಾನಿ. ಅವರಿಗೆ ನನ್ನ ಹೃದಯಾಂತರಾಳದ ಶುಭಾಶಯಗಳು ಎಂದು ಹೇಳಿದ್ದಾರೆ.
‘अंत्योदय से आत्मनिर्भर भारत’ की दिव्य संकल्पना को साकार कर रहे यशस्वी प्रधानमंत्री श्री @narendramodi जी को जन्मदिन की हृदयतल से बधाई।
प्रभु श्री राम की कृपा से आपको दीर्घायु व उत्तम स्वास्थ्य की प्राप्ति हो। आजीवन माँ भारती की सेवा का परम सौभाग्य आपको प्राप्त होता रहे। pic.twitter.com/GVmq1N3JjM
— Yogi Adityanath (@myogiadityanath) September 16, 2021
ಹಾಗೇ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, ಸ್ವಾತಂತ್ರ್ಯದ ನಂತರ ಭಾರತಕ್ಕೆ ದೊರೆತ ಒಬ್ಬ ದಿಟ್ಟ ಸ್ಪಷ್ಟ, ಸಮರ್ಥ ನಾಯಕ. ಜನರಲ್ಲಿ ರಾಷ್ಟ್ರಾಭಿಮಾನವನ್ನು ಮೂಡಿಸಿ ಹೊಸ ಭಾರತ ಕಟ್ಟಲು ಅಣಿಯಾಗಿರುವಂತಹ ನೆಚ್ಚಿನ ಪ್ರಧಾನಿ ಮೋದಿಜೀ ಅವರಿಗೆ ಶುಭಾಶಯಗಳು ಎಂದು ಹೇಳಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮೂಲಕ ಶುಭ ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಯೋಜನೆಗಳು, ಅವರ ಜೀವನದ ಹಾದಿ ತೋರಿಸುವ ಸಣ್ಣ ವಿಡಿಯೋ ಕೂಡ ಶೇರ್ ಮಾಡಿದ್ದಾರೆ. ಇನ್ನುಳಿದಂತೆ ಎಲ್ಲ ಕೇಂದ್ರ ಸಚಿವರೂ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ವಿಶ್ ಮಾಡಿದ್ದಾರೆ.
Assam is forever blessed with your generosity & love. Your visionary leadership has given a new impetus to peace & prosperity in Assam, and the North East.
On your birthday Adarniya Pradhan Mantri Sri @narendramodi, I wish you good health & many more years of service to nation. pic.twitter.com/WuIKKe63ZG
— Himanta Biswa Sarma (@himantabiswa) September 17, 2021
ಇದನ್ನೂ ಓದಿ: PM Modi Birthday, Karnataka LIVE News: 71ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿ
Published On - 8:36 am, Fri, 17 September 21