Watch ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ರ ಕರವಸ್ತ್ರ ಹೆಕ್ಕಿ ಕೊಟ್ಟ ಪ್ರಧಾನಿ ಮೋದಿ
ವಿಡಿಯೊದ ಆರಂಭದಲ್ಲಿ ಪ್ರಧಾನಿ ಮೋದಿ ಅವರು ಮಾಜಿ ರಾಷ್ಟ್ರಪತಿ ಪಕ್ಕದಲ್ಲಿ ಕುಳಿತು ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವುದು ಕಾಣುತ್ತದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ಆರಂಭವಾಗುವ ವೇಳೆಗೆ ಸಭಾಂಗಣದಲ್ಲಿ...
ಜುಲೈ 25 ರಂದು ಸಂಸತ್ನ ಸೆಂಟ್ರಲ್ ಹಾಲ್‌ನಲ್ಲಿ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೆಲವೇ ಕ್ಷಣಗಳು ಬಾಕಿ ಇರುವಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ (Pratibha Patil) ಪಕ್ಕ ನಿಂತಿರುವುದು ಕಾಣುತ್ತದೆ. ಕುಳಿತುಕೊಳ್ಳುವ ಹೊತ್ತಲ್ಲಿ ಪ್ರತಿಭಾ ಅವರ ಕೈಯಿಂದ ಕರವಸ್ತ್ರ ಜಾರಿ ಬಿದ್ದೆದೆ. ಆಗ ಮೋದಿ ಆ ಕರವಸ್ತ್ರವನ್ನು ಹೆಕ್ಕಿ ಪ್ರತಿಭಾ ಪಾಟೀಲ್ ಅವರಿಗೆ ಕೊಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಜನಮನಸ್ಸು ಗೆದ್ದಿದೆ. ವಿಡಿಯೊದ ಆರಂಭದಲ್ಲಿ ಪ್ರಧಾನಿ ಮೋದಿ ಅವರು ಮಾಜಿ ರಾಷ್ಟ್ರಪತಿ ಪಕ್ಕದಲ್ಲಿ ಕುಳಿತು ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವುದು ಕಾಣುತ್ತದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ಆರಂಭವಾಗುವ ವೇಳೆಗೆ ಸಭಾಂಗಣದಲ್ಲಿ ಗಣ್ಯರೆಲ್ಲರೂ ಎದ್ದು ನಿಂತಾಗ ಪ್ರತಿಭಾ ಅವರ ಕೈಯಿಂದ ಬಿಳಿ ಬಣ್ಣದ ಕರವಸ್ತ್ರ ಕೆಳಗೆ ಬಿದ್ದಿದೆ. ನಂತರ ಪ್ರಧಾನಿ ಮೋದಿ ಅದನ್ನು ಹೆಕ್ಕಿ ಪ್ರತಿಭಾ ಅವರಿಗೆ ಕೊಟ್ಟಿದ್ದಾರೆ.
No one can match PM’s gesture & courtesy…Today in central hall of parliament, PM @narendramodi warm gesture of picking X President Pratibha Patil’s handkerchief. pic.twitter.com/nEatKCns84
— Devendra Parashar (@DParashar17) July 25, 2022
ಪ್ರತಿಭಾ ದೇವಿಸಿಂಗ್ ಪಾಟೀಲ್ ಅವರು ಜುಲೈ 25, 2007 ರಿಂದ ಜುಲೈ 25, 2012 ರವರೆಗೆ ಭಾರತದ 12 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ಪ್ರತಿಭಾ ಪಾಟೀಲ್ ಅವರು ಭಾರತದ ಮೊದಲ ಮಹಿಳಾ ರಾಷ್ಟ್ರಪತಿಯಾಗಿದ್ದರು. ಕಾಂಗ್ರೆಸ್ ಸದಸ್ಯೆಯಾಗಿದ್ದ ಪ್ರತಿಭಾ ಪಾಟೀಲ್ ಜುಲೈ 21, 2007 ರಂದು ಚುನಾವಣೆಯಲ್ಲಿ ಗೆದ್ದಿದ್ದು 2004 ರಿಂದ 2007 ರವರೆಗೆ ರಾಜಸ್ಥಾನದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.