Kannada News National Photo Gallery: ಅಸ್ಸಾಂ ಚಹಾ ತೋಟದಲ್ಲಿ ಪ್ರಿಯಾಂಕಾ ಗಾಂಧಿ; ಕಾರ್ಮಿಕರ ಕಷ್ಟ-ಸುಖ ಅರಿತ ಕಾಂಗ್ರೆಸ್ ನಾಯಕಿ
Photo Gallery: ಅಸ್ಸಾಂ ಚಹಾ ತೋಟದಲ್ಲಿ ಪ್ರಿಯಾಂಕಾ ಗಾಂಧಿ; ಕಾರ್ಮಿಕರ ಕಷ್ಟ-ಸುಖ ಅರಿತ ಕಾಂಗ್ರೆಸ್ ನಾಯಕಿ
guruganesh bhat | Updated By: ಸಾಧು ಶ್ರೀನಾಥ್
Updated on:
Mar 02, 2021 | 3:47 PM
Assam Assembly Elections 2021: ‘ಚಹಾ ತೋಟದ ಕಾರ್ಮಿಕರು ಸರಳತೆ ಮತ್ತು ಸತ್ಯದ ಪ್ರತಿಪಾದಕರು. ಅವರು ಪಡೆಯಬೇಕಾದ ಹಕ್ಕುಗಳಿಗಾಗಿ ನಾನು ಧ್ವನಿ ಎತ್ತುತ್ತೇನೆ. ಅವರ ಪರವಾಗಿ ಹೋರಾಡುತ್ತೇನೆ’ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
1 / 10
ಮಾರ್ಚ್ 27ರಿಂದ ಜರುಗಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಬೆಳಗ್ಗೆ ಅಸ್ಸಾಂನ ಬಿಸ್ವನಾಥ್ ಜಿಲ್ಲೆಯ ಚಹಾ ತೋಟದ ಕಾರ್ಮಿಕರ ಜತೆ ಚಹಾ ಗಿಡಗಳ ಕುಡಿಗಳನ್ನು ಬಿಡಿಸಿದ್ದಾರೆ.
2 / 10
ಚಹಾ ತೋಟದಲ್ಲಿ ಚಹಾ ಗಿಡಗಳ ಕುಡಿಗಳನ್ನು ಬಿಡಿಸುವ ಕೆಲಸ ನಿರ್ವಹಿಸುವ ಮಹಿಳೆಯರ ಜತೆ ಸಂವಾದ ನಡೆಸುತ್ತ ಚಹಾ ಗಿಡಗಳ ಕುಡಿಗಳನ್ನು ಬಿಡಿಸಿದ ಅವರು ನಂತರ ಚಹಾ ಸವಿದಿದ್ದಾರೆ.
3 / 10
ಟೀ ಪ್ಲಾಂಟೇಶನ್ ಕಾರ್ಮಿಕರ ಜೀವನ ಕ್ರಮವನ್ನು ಪ್ರಿಯಾಂಕಾ ಗಾಂಧಿ ವಿವರವಾಗಿ ತಿಳಿದುಕೊಂಡಿದ್ದಾರೆ.
4 / 10
ನೆಲದ ಮೇಲೆ ಕುಳಿತು ಟೀ ಕಾರ್ಮಿಕರ ಸುಖ ದುಃಖಗಳನ್ನು ಆಲಿಸಿದ್ದಾರೆ ಕಾಂಗ್ರೆಸ್ ವರಿಷ್ಠೆ.
5 / 10
ಚಹಾ ತೋಟದಲ್ಲಿ ಕೆಲಸ ಮಾಡುವ ಮಹಿಳೆಯರ ಜತೆ ನಿನ್ನೆಯಿಂದಲೂ ಬೆರೆಯುತ್ತಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನಿನ್ನೆ ಅಸ್ಸಾಂನ ಸಾಂಪ್ರದಾಯಿಕ ನೃತ್ಯ ಝುಮುರ್ಗೆ ಹೆಜ್ಜೆ ಹಾಕಿದ್ದರು.
6 / 10
ಇಂದು ಸಹ ಚಹಾ ತೋಟದ ಮಹಿಳಾ ಕಾರ್ಮಿಕರ ಜತರೆ ಸಾಂಪ್ರದಾಯಿಕವಾಗಿ ಹೆಜ್ಜೆ ಹಾಕಿದ ಅವರು, ಚಹಾ ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರ ಶ್ರಮವನ್ನು ಶ್ಲಾಘಿಸಿದ್ದಾರೆ.
7 / 10
ಚಹಾ ಗಿಡಗಳ ಕುಡಿಗಳನ್ನು ಸ್ವತಃ ಬಿಡಿಸಲು ಮುಂದಾದ ಅವರು, ಕೆಲಸದ ಜವಾಬ್ದಾರಿಗಳನ್ನು ತಿಳಿದುಕೊಂಡಿದ್ದಾರೆ.
8 / 10
‘ಚಹಾ ತೋಟದ ಕಾರ್ಮಿಕರು ಸರಳತೆ ಮತ್ತು ಸತ್ಯದ ಪ್ರತಿಪಾದಕರು. ಅವರು ಪಡೆಯಬೇಕಾದ ಹಕ್ಕುಗಳಿಗಾಗಿ ನಾನು ಧ್ವನಿ ಎತ್ತುತ್ತೇನೆ. ಅವರ ಪರವಾಗಿ ಹೋರಾಡುತ್ತೇನೆ’ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
9 / 10
ಅಸ್ಸಾಂಗೆ ಪ್ರಚಾರ ನಿಮಿತ್ತ ಆಗಮಿಸಿದ್ದ ಅವರಿಗೆ ಭವ್ಯ ಸ್ವಾಗತ ದೊರೆತಿತ್ತು.
10 / 10
ಟೀ ಕಾರ್ಮಿಕರ ಮನೆಗೆ ಬೇಟಿ ನೀಡಿದ ಅವರು, ಕಾರ್ಮಿಕ ಜೀವನಕ್ರಮವನ್ನು ಅವಲೋಕಿಸಿದ್ದಾರೆ. ಟೀ ಕಾರ್ಮಿಕರ ಅಭಿವೃದ್ಧಿಗಾಗಿ ಧ್ವನಿ ಎತ್ತುವುದಾಗಿ ಅವರು ಹೇಳಿದ್ದಾರೆ.