ದೆಹಲಿಯ ಐದು ಮೆಟ್ರೋ ನಿಲ್ದಾಣಗಳಲ್ಲಿ ಖಲಿಸ್ತಾನಿ ಪರ ಬರಹ, ತನಿಖೆ ಶುರು

ಜಿ20 ಶೃಂಗಸಭೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿದೆ. ಈ ಸಮ್ಮೇಳನವನ್ನು ಯಶಸ್ವಿಗೊಳಿಸಲು ಭರದ ಸಿದ್ಧತೆಗಳೂ ನಡೆಯುತ್ತಿವೆ. ಇದೇ ವೇಳೆ ದೆಹಲಿಯ ಐದು ಮೆಟ್ರೋ ನಿಲ್ದಾಣಗಳಲ್ಲಿ ಖಲಿಸ್ತಾನಿ ಸಂಬಂಧಿತ ಘೋಷಣೆಗಳನ್ನು ಬರೆಯಲಾಗಿದ್ದು, ತನಿಖೆ ಶುರುವಾಗಿದೆ.

ದೆಹಲಿಯ ಐದು ಮೆಟ್ರೋ ನಿಲ್ದಾಣಗಳಲ್ಲಿ ಖಲಿಸ್ತಾನಿ ಪರ ಬರಹ, ತನಿಖೆ ಶುರು
ಮೆಟ್ರೋ ನಿಲ್ದಾಣಗಳಲ್ಲಿ ಖಲಿಸ್ತಾನಿಗಳ ಪರ ಬರಹImage Credit source: ANI
Follow us
ನಯನಾ ರಾಜೀವ್
|

Updated on:Aug 27, 2023 | 1:06 PM

ಜಿ20 ಶೃಂಗಸಭೆಯು  ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿದೆ. ಈ ಸಮ್ಮೇಳನವನ್ನು ಯಶಸ್ವಿಗೊಳಿಸಲು ಭರದ ಸಿದ್ಧತೆಗಳೂ ನಡೆಯುತ್ತಿವೆ. ಇದೇ ವೇಳೆ ದೆಹಲಿಯ ಐದು ಮೆಟ್ರೋ ನಿಲ್ದಾಣಗಳಲ್ಲಿ ಖಲಿಸ್ತಾನಿ ಸಂಬಂಧಿತ ಘೋಷಣೆಗಳನ್ನು ಬರೆಯಲಾಗಿದ್ದು, ತನಿಖೆ ಶುರುವಾಗಿದೆ.

ದೆಹಲಿಯು ಖಲಿಸ್ತಾನವಾಗಲಿದೆ, ಖಲಿಸ್ತಾನ್ ಜಿಂದಾಬಾದ್ ಎಂದು ಘೋಷಣೆಯನ್ನು ಬರೆಯಲಾಗಿದೆ. ಜಿ20 ಶೃಂಗಸಭೆಗೂ ಮುನ್ನ ಈ ಘಟನೆ ದೆಹಲಿಯಲ್ಲಿ ಸಂಚಲನ ಮೂಡಿಸಿದೆ. ಇದರ ವಿರುದ್ಧ ದೆಹಲಿ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ, ಇದಲ್ಲದೇ ಗುಪ್ತಚರ ಸಂಸ್ಥೆಗಳೂ ತನಿಖೆ ಆರಂಭಿಸಿವೆ.

ದೆಹಲಿಯ ಶಿವಾಜಿ ಪಾರ್ಕ್‌ನಿಂದ ಪಂಜಾಬಿ ಬಾಗ್‌ವರೆಗೆ ಹಲವಾರು ಮೆಟ್ರೋ ನಿಲ್ದಾಣಗಳಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆಯಲಾಗಿದೆ. ಸೆಪ್ಟೆಂಬರ್ 9 ಮತ್ತು 10 ರಂದು ರಾಷ್ಟ್ರ ರಾಜಧಾನಿಯಲ್ಲಿ ಶೃಂಗಸಭೆ ನಡೆಯಲಿದೆ. ಯುರೋಪಿಯನ್ ಒಕ್ಕೂಟದ 30 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಉನ್ನತ ಅಧಿಕಾರಿಗಳು ಮತ್ತು ಆಹ್ವಾನಿತ ಅತಿಥಿ ದೇಶಗಳು ಮತ್ತು 14 ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸುವ ನಿರೀಕ್ಷೆಯಿದೆ.

G20 ಶೃಂಗಸಭೆಯನ್ನು ಯಶಸ್ವಿಗೊಳಿಸಲು ಸಹಾಯ ಮಾಡುವಂತೆ ಪ್ರಧಾನಿ ಮೋದಿ ಶನಿವಾರ ದೆಹಲಿ ಜನತೆಗೆ ಮನವಿ ಮಾಡಿದ್ದಾರೆ.

ಮತ್ತಷ್ಟು ಓದಿ: ಅಮೆರಿಕದಲ್ಲಿ ಭಾರತದ ರಾಯಭಾರ ಕಚೇರಿ ಮೇಲೆ ಖಲಿಸ್ತಾನಿಗಳ ದಾಳಿ, ಕಚೇರಿ ಧ್ವಂಸ

ಸಂಚಾರ ನಿಯಮಗಳ ಬದಲಾವಣೆಯಿಂದಾಗಿ ದೆಹಲಿ ನಿವಾಸಿಗಳು ಅನಾನುಕೂಲತೆಯನ್ನು ಎದುರಿಸಬೇಕಾಗಬಹುದು. ಸೆಪ್ಟೆಂಬರ್ 5 ರಿಂದ ಸೆಪ್ಟೆಂಬರ್ 15 ರವರೆಗೆ ಸಾಕಷ್ಟು ಅನಾನುಕೂಲತೆ ಉಂಟಾಗಲಿದೆ ಮತ್ತು ಅದಕ್ಕಾಗಿ ನಾನು ಮುಂಚಿತವಾಗಿ ಕ್ಷಮೆಯಾಚಿಸುತ್ತೇನೆ ಎಂದು ಪ್ರಧಾನಿ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:05 pm, Sun, 27 August 23