ಅಹಮದಾಬಾದ್: ಆಟವಾಡುತ್ತಾ ಸಣ್ಣ ಎಲ್​ಇಡಿ ಬಲ್ಬ್​ ನುಂಗಿದ ಮಗು

ಮಧ್ಯಪ್ರದೇಶದ ರತ್ಲಾಮ್ ಮೂಲದ 9 ತಿಂಗಳ ಮಗುವೊಂದು ಆಕಸ್ಮಿಕವಾಗಿ ಸಣ್ಣ ಎಲ್​ಇಡಿ ಬಲ್ಬ್​ ನುಂಗಿರುವ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ. ಇದೀಗ ಮಗುವನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ. ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಮಗು ಆಟಿಕೆ ಮೊಬೈಲ್ ಫೋನ್​ನೊಂದಿಗೆ ಆಟವಾಡುತ್ತಿತ್ತು, ಅದರಲ್ಲಿರುವ ಆಂಟೆನಾದಲ್ಲಿ ಎಲ್​ಇಡಿ ಬಲ್ಬ್​ ಇತ್ತು, ಆ ಬಲ್ಬ್​ ಅನ್ನು ಬಾಯಿಗೆ ಹಾಕಿಕೊಂಡಿತ್ತು.

ಅಹಮದಾಬಾದ್: ಆಟವಾಡುತ್ತಾ ಸಣ್ಣ ಎಲ್​ಇಡಿ ಬಲ್ಬ್​ ನುಂಗಿದ ಮಗು
ಮಗುImage Credit source: Yahoo
Follow us
ನಯನಾ ರಾಜೀವ್
|

Updated on: Aug 27, 2023 | 10:33 AM

ಮಧ್ಯಪ್ರದೇಶದ ರತ್ಲಾಮ್ ಮೂಲದ 9 ತಿಂಗಳ ಮಗುವೊಂದು ಆಕಸ್ಮಿಕವಾಗಿ ಸಣ್ಣ ಎಲ್​ಇಡಿ ಬಲ್ಬ್​ ನುಂಗಿರುವ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ. ಇದೀಗ ಮಗುವನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ. ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಮಗು ಆಟಿಕೆ ಮೊಬೈಲ್ ಫೋನ್​ನೊಂದಿಗೆ ಆಟವಾಡುತ್ತಿತ್ತು, ಅದರಲ್ಲಿರುವ ಆಂಟೆನಾದಲ್ಲಿ ಎಲ್​ಇಡಿ ಬಲ್ಬ್​ ಇತ್ತು, ಆ ಬಲ್ಬ್​ ಅನ್ನು ಬಾಯಿಗೆ ಹಾಕಿಕೊಂಡಿತ್ತು.

ನಂತರ ಉಸಿರಾಟದ ತೊಂದರೆ ಅನುಭವಿಸಿತು, ಆಗ ಪೋಷಕರು ಮಗುವಿಗೆ ಏನೋ ಆಗಿದೆ ಎಂದು ಭಾವಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಎಕ್ಸ್​ ರೇ ಮಾಡಿದ ಬಳಿಕ, ಮಗು ಎಲ್​ಇಡಿ ಬಲ್ಬ್​ ನುಂಗಿರುವುದು ಗೊತ್ತಾಗಿದೆ, ಶ್ವಾಸಕೋಶದಲ್ಲಿ ಆ ವಸ್ತು ಪತ್ತೆಯಾಗಿತ್ತು. ತಕ್ಷಣ ಮಗುವಿನ ಪೋಷಕರು ತಮ್ಮ ಸ್ನೇಹಿತರಿಗೆ ಮಾಹಿತಿ ನೀಡಿದರು, ತಕ್ಷಣ ಶಸ್ತ್ರ ಚಿಕಿತ್ಸೆ ನಡೆಸಿ ಮಗುವಿನ ಶ್ವಾಸಕೋಶದಿಂದ ಬಲ್ಬ್​ ಅನ್ನು ಹೊರ ತೆಗೆಯಲಾಯಿತು.

ಮತ್ತಷ್ಟು ಓದಿ: 8 ತಿಂಗಳ ಮಗು ನುಂಗಿದ್ದ ಬಾಟಲ್‌ ಮುಚ್ಚಳವನ್ನು ಯಶಸ್ವಿಯಾಗಿ ಹೊರತೆಗೆದ ಬೆಂಗಳೂರಿನ ವೈದ್ಯರು

ಬ್ರಾಂಕೋಸ್ಕೋಪ್ ಬಳಸಿ ವಸ್ತುವನ್ನು ಹೊರತೆಗೆಯಲು ಪ್ರಯತ್ನಿಸಿದರು, ಆರಂಭಿಕ ಹಂತದಲ್ಲಿ ಆ ವಸ್ತುವು ಶ್ವಾಸಕೋಶದಲ್ಲಿ ಕಾಣಿಸಿತಾದರೂ ಅನನ್ನು ಸುರಕ್ಷಿತವಾಗಿ ತೆಗೆಯಲು ಸಾಧ್ಯವಾಗಿಲ್ಲ. ನಾಲ್ಕು ದಿನಗಳ ಬಳಿಕ ಎರಡನೇ ಪ್ರಯತ್ನ ನಡೆಸಲಾಯಿತು, ಅಂತಿಮವಾಗಿ ಬಲ್ಬ್ ಹೊರತೆಗೆಯುವುದರಲ್ಲಿ ವೈದ್ಯರು ಯಶಸ್ವಿಯಾದರು.

ಗಣನೀಯ ಊತ ಮತ್ತು ಅತಿಯಾದ ರಕ್ತಸ್ರಾವದಿಂದ ಆರಂಭಿಕ ಪ್ರಯತ್ನ ವಿಫಲವಾಗಿತ್ತು. ಹರ್ಯಾಣದ ನುಹ್​ನಲ್ಲಿ ನಾಲ್ಕು ವರ್ಷದ ಬಾಲಕನಿಗೆ ಈದ್​ಗಾಗಿ ನೀಡಲಾಗಿದ್ದ ಹೊಸ ಶೂನಲ್ಲಿದ್ದ ಸೀಟಿಯನ್ನು ನುಂಗಿ ಸಮಸ್ಯೆ ಂಆಡಿಕೊಂಡಿದ್ದ, ಬಳಿಕ ಶಸ್ತ್ರ ಚಿಕಿತ್ಸೆ ಬಳಿಕ ಸೀಟಿಯನ್ನು ಹೊರಹಾಕಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ