ನೇಪಾಳದ ಅನ್ನಪೂರ್ಣ ಪರ್ವತದಲ್ಲಿ ಕಾಣೆಯಾಗಿದ್ದ ಭಾರತೀಯ ಪರ್ವತಾರೋಹಿ ಬಲ್ಜೀತ್ ಕೌರ್ ಪತ್ತೆ

|

Updated on: Apr 18, 2023 | 8:49 PM

ಶೆರ್ಪಾ ಪ್ರಕಾರ, ವೈಮಾನಿಕ ಶೋಧ ತಂಡವು ಬಲ್ಜೀತ್ ಕೌರ್ ಕ್ಯಾಂಪ್ IV ಕಡೆಗೆ ಏಕಾಂಗಿಯಾಗಿ ಇಳಿಯುತ್ತಿರುವುದನ್ನು ನೋಡಿದೆ. ಭಾರತೀಯ ಮಹಿಳಾ ಪರ್ವತಾರೋಹಿ ಇಂದು ಬೆಳಗ್ಗೆವರೆಗೆ ರೇಡಿಯೊ ಸಂಪರ್ಕದಿಂದ ಹೊರಗುಳಿದಿದ್ದರು ಎಂದು ವರದಿ ತಿಳಿಸಿದೆ.

ನೇಪಾಳದ ಅನ್ನಪೂರ್ಣ ಪರ್ವತದಲ್ಲಿ ಕಾಣೆಯಾಗಿದ್ದ ಭಾರತೀಯ ಪರ್ವತಾರೋಹಿ ಬಲ್ಜೀತ್ ಕೌರ್  ಪತ್ತೆ
ಬಲ್ಜೀತ್ ಕೌರ್
Follow us on

ಕಠ್ಮಂಡು: ಮೌಂಟ್ ಅನ್ನಪೂರ್ಣ ಕ್ಯಾಂಪ್ (Mt Annapurna) IV ಬಳಿ ಶಿಖರ ಸ್ಥಳದಿಂದ ಇಳಿಯುವಾಗ ನಾಪತ್ತೆಯಾದ 27 ವರ್ಷದ ಭಾರತೀಯ ಮಹಿಳಾ ಪರ್ವತಾರೋಹಿ ಬಲ್ಜೀತ್ ಕೌರ್ (Baljeet Kaur) ಅವರನ್ನು ಒಂದು ದಿನದ ನಂತರ ಇಂದು ರಕ್ಷಿಸಲಾಗಿದೆ ಎಂದು ಸಂಘಟಕರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಮವಾರ ಪೂರಕ ಆಮ್ಲಜನಕವನ್ನು ಬಳಸದೆ ವಿಶ್ವದ 10 ನೇ ಅತ್ಯುನ್ನತ ಶಿಖರವನ್ನು ಏರಿದ ಬಲ್ಜೀತ್ ಕೌರ್ ಅವರನ್ನು 7,363 ಮೀಟರ್ ಎತ್ತರದಿಂದ ರಕ್ಷಿಸಲಾಯಿತು, ನಂತರ ವೈಮಾನಿಕ ಶೋಧ ತಂಡವು ಪಯೋನೀರ್ ಅಡ್ವೆಂಚರ್ ಪಸಾಂಗ್ ಶೆರ್ಪಾದ ಚೇರ್‌ಪಾ ಕ್ಯಾಂಪ್ IV ಮೇಲೆ ಅವರನ್ನು ಪತ್ತೆ ಮಾಡಿದೆ ಎಂದು ಹಿಮಾಲಯನ್ ಟೈಮ್ಸ್ ಪತ್ರಿಕೆ ಉಲ್ಲೇಖಿಸಿದೆ.

ಅವಳು ಫ್ರಾಸ್ಟ್‌ಬೈಟ್‌ನಿಂದ ಬಳಲುತ್ತಿದ್ದಳು. ಈಗ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ CIWEC ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ಶೆರ್ಪಾ ಹೇಳಿದ್ದಾರೆ. ಶೆರ್ಪಾ ಪ್ರಕಾರ, ವೈಮಾನಿಕ ಶೋಧ ತಂಡವು ಬಲ್ಜೀತ್ ಕೌರ್ ಕ್ಯಾಂಪ್ IV ಕಡೆಗೆ ಏಕಾಂಗಿಯಾಗಿ ಇಳಿಯುತ್ತಿರುವುದನ್ನು ನೋಡಿದೆ. ಭಾರತೀಯ ಮಹಿಳಾ ಪರ್ವತಾರೋಹಿ ಇಂದು ಬೆಳಗ್ಗೆವರೆಗೆ ರೇಡಿಯೊ ಸಂಪರ್ಕದಿಂದ ಹೊರಗುಳಿದಿದ್ದರು ಎಂದು ವರದಿ ತಿಳಿಸಿದೆ.

ತಕ್ಷಣದ ಸಹಾಯ ಕೇಳುವ ರೇಡಿಯೊ ಸಿಗ್ನಲ್ ಅನ್ನು ಕಳುಹಿಸುವಲ್ಲಿ ಯಶಸ್ವಿಯಾದ ನಂತರವೇ ಇಂದು ಬೆಳಿಗ್ಗೆ ವೈಮಾನಿಕ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಶೆರ್ಪಾ ಪ್ರಕಾರ ಆಕೆಯ ಜಿಪಿಎಸ್ ಸ್ಥಳವು 7,375 ಮೀ (24,193 ಅಡಿ) ಎತ್ತರವನ್ನು ಸೂಚಿಸಿದೆ. ಅವರು ಸೋಮವಾರ ಸಂಜೆ 5:15 ರ ಸುಮಾರಿಗೆ ಇಬ್ಬರು ಶೆರ್ಪಾ ಮಾರ್ಗದರ್ಶಿಗಳೊಂದಿಗೆ ಅನ್ನಪೂರ್ಣ ಪರ್ವತವನ್ನು ಏರಿದರು. ಅವಳನ್ನು ಪತ್ತೆಹಚ್ಚಲು ಕನಿಷ್ಠ ಮೂರು ಹೆಲಿಕಾಪ್ಟರ್‌ಗಳನ್ನು ಸಜ್ಜುಗೊಳಿಸಲಾಯಿತು.

ಕಳೆದ ವರ್ಷ ಮೇ ತಿಂಗಳಲ್ಲಿ, ಹಿಮಾಚಲ ಪ್ರದೇಶದ ಬಲ್ಜೀತ್ ಕೌರ್ ಅವರು ಮೌಂಟ್ ಲೊಟ್ಸೆಯನ್ನು ಏರಿದ್ದು,ಒಂದೇ ಋತುವಿನಲ್ಲಿ ನಾಲ್ಕು 8000-ಮೀಟರ್ ಶಿಖರಗಳನ್ನು ಏರಿದ ಮೊದಲ ಭಾರತೀಯ ಪರ್ವತಾರೋಹಿಯಾಗಿದ್ದಾರೆ.

ಇದನ್ನೂ ಓದಿVande Bharat Express: ಕೇರಳದ ವಂದೇ ಭಾರತ್ ಎಕ್ಸ್‌ಪ್ರೆಸ್ ಕಾಸರಗೋಡಿಗೂ ವಿಸ್ತರಣೆ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ

ಸೋಮವಾರ, ರಾಜಸ್ಥಾನದ ಕಿಶನ್‌ಗಡ್‌ನ ನಿವಾಸಿ ಅನುರಾಗ್ ಮಾಲು, ಅನ್ನಪೂರ್ಣ ಮೌಂಟ್ III ರ ಕ್ಯಾಂಪ್‌ನಿಂದ ಇಳಿಯುವಾಗ ನಾಪತ್ತೆಯಾಗಿದ್ದರು. ಐವರು ಶೆರ್ಪಾ ಪರ್ವತಾರೋಹಿಗಳ ತಂಡವು ಮಾಲುಗಾಗಿ ಹುಡುಕಾಟ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ