ಸುಡಾನ್‌ನಲ್ಲಿರುವ ಭಾರತೀಯರ ಬಗ್ಗೆ ಟ್ವೀಟ್ ಮಾಡಿದ ಸಿದ್ದರಾಮಯ್ಯ ವಿರುದ್ಧ ಗುಡುಗಿದ ವಿದೇಶಾಂಗ ಸಚಿವ ಎಸ್ ಜೈಶಂಕರ್
ಕೇಂದ್ರದ ಬಿಜೆಪಿ ಸರ್ಕಾರವು ತಕ್ಷಣವೇ ರಾಜತಾಂತ್ರಿಕ ಚರ್ಚೆಗಳನ್ನು ಮಾಡಬೇಕು. ಹಕ್ಕಿ-ಪಿಕ್ಕಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಅಂತರರಾಷ್ಟ್ರೀಯ ಏಜೆನ್ಸಿಗಳನ್ನು ತಲುಪಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದರು.
ದೆಹಲಿ: ಸಂಘರ್ಷ ಪೀಡಿತ ಸುಡಾನ್‌ನಲ್ಲಿ (Sudan) ಸಿಲುಕಿರುವ ಕರ್ನಾಟಕದ 31 ಬುಡಕಟ್ಟು ಜನಾಂಗದವರ ಬಗ್ಗೆ ಮಾಡಿದ ಹೇಳಿಕೆಗಾಗಿ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು, ದಕ್ಷಿಣ ರಾಜ್ಯದ ಬುಡಕಟ್ಟು ಸಮುದಾಯಕ್ಕೆ ಸೇರಿದ ಜನರನ್ನು ಮರಳಿ ಕರೆತರುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದ್ದರು. ಸುಡಾನ್‌ನಲ್ಲಿರುವ ಹಕ್ಕಿ ಪಿಕ್ಕಿಗಳು ಕಳೆದ ಕೆಲವು ದಿನಗಳಿಂದ ಆಹಾರವಿಲ್ಲದೆ ಸಿಲುಕಿಕೊಂಡಿದ್ದಾರೆ ಮತ್ತು ಅವರನ್ನು ಮರಳಿ ಕರೆತರಲು ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ ಎಂದಿದ್ದರು ಸಿದ್ದರಾಮಯ್ಯ. ಇದಕ್ಕೆ ಪ್ರತಿಕ್ರಿಯಿಸಿದ ಜೈಶಂಕರ್ ನೀವು ಅವರ ಪರಿಸ್ಥಿತಿಯನ್ನು ರಾಜಕೀಯಗೊಳಿಸುವುದು ಅತ್ಯಂತ ಬೇಜವಾಬ್ದಾರಿಯ ಸಂಗತಿ. ಯಾವುದೇ ಚುನಾವಣಾ ಗುರಿಯು ವಿದೇಶದಲ್ಲಿರುವ ಭಾರತೀಯರಿಗೆ ಅಪಾಯವನ್ನುಂಟುಮಾಡುವುದನ್ನು ಸಮರ್ಥಿಸುವುದಿಲ್ಲ.
ನಿಮ್ಮ ಟ್ವೀಟ್ ನೋಡಿ ದಿಗಿಲುಗೊಂಡೆ. ಅಲ್ಲಿ ಜೀವಗಳು ಅಪಾಯದಲ್ಲಿದೆ. ರಾಜಕೀಯ ಮಾಡಬೇಡಿ ಎಂದಿದ್ದಾರೆ ಜೈಶಂಕರ್. ಏಪ್ರಿಲ್ 14 ರಂದು ಹೋರಾಟ ಪ್ರಾರಂಭವಾದಾಗಿನಿಂದ, ಖಾರ್ಟೂಮ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಸುಡಾನ್‌ನಲ್ಲಿರುವ ಹೆಚ್ಚಿನ ಭಾರತೀಯ ಪ್ರಜೆಗಳು ಮತ್ತು ಪಿಐಒಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ.
ಆಫ್ರಿಕನ್ ರಾಷ್ಟ್ರದ ನಿಯಂತ್ರಣಕ್ಕಾಗಿ ಆಡಳಿತಾರೂಢ ಮಿಲಿಟರಿ ಆಡಳಿತದ ಪ್ರತಿಸ್ಪರ್ಧಿ ಬಣಗಳು ಹೋರಾಡುತ್ತಿರುವ ಸುಡಾನ್‌ನಲ್ಲಿ ಸರ್ಕಾರದ ಪ್ರಯತ್ನಗಳನ್ನು ವಿವರಿಸುವ ಥ್ರೆಡ್ ಅನ್ನು ಕೇಂದ್ರ ಸಚಿವರು ಪೋಸ್ಟ್ ಮಾಡಿದ್ದಾರೆ. ಭದ್ರತಾ ಕಾರಣಗಳಿಗಾಗಿ ಅವರ ವಿವರಗಳು ಮತ್ತು ಸ್ಥಳಗಳನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ. ಅವರ ಚಲನವಲನವು ನಡೆಯುತ್ತಿರುವ ಉಗ್ರ ಹೋರಾಟದಿಂದ ನಿರ್ಬಂಧಿತವಾಗಿದೆ. ಅವರಿಗೆ ಸಂಬಂಧಿಸಿದ ಯೋಜನೆಗಳು ಅತ್ಯಂತ ಸಂಕೀರ್ಣವಾದ ಭದ್ರತಾ ಸನ್ನಿವೇಶವನ್ನು ಗಣನೆಗೆ ತೆಗೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ರಾಯಭಾರ ಕಚೇರಿಯು ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದೆ.
Simply appalled at your tweet! There are lives at stake; don’t do politics.
Since the fighting started on April 14th, the Embassy of India in Khartoum has been continuously in touch with most Indian Nationals and PIOs in Sudan. https://t.co/MawnIwStQp
— Dr. S. Jaishankar (@DrSJaishankar) April 18, 2023
ಕೇಂದ್ರದ ಬಿಜೆಪಿ ಸರ್ಕಾರವು ತಕ್ಷಣವೇ ರಾಜತಾಂತ್ರಿಕ ಚರ್ಚೆಗಳನ್ನು ಮಾಡಬೇಕು. ಹಕ್ಕಿ-ಪಿಕ್ಕಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಅಂತರರಾಷ್ಟ್ರೀಯ ಏಜೆನ್ಸಿಗಳನ್ನು ತಲುಪಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದರು.
ಇದನ್ನೂ ಓದಿ: Sudan conflict: ಸಂಘರ್ಷಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಕನ್ನಡಿಗರಿಂದ ನೆರವಿಗಾಗಿ ಮೊರೆ
ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮಂಗಳವಾರ ಭಾರತೀಯ ನಾಗರಿಕರಿಗೆ ಹೊರಹೋಗದಂತೆ ಮುನ್ನೆಚ್ಚರಿಕೆ ಸಲಹೆಯನ್ನು ನೀಡಿದೆ. ಪರಿಸ್ಥಿತಿ ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯಬಹುದು ಎಂದು ಪಡಿತರ ಪೂರೈಕೆಗೆ ಸೂಚಿಸಿದೆ. ನಾವು ಲೂಟಿ ಮಾಡುವ ಅನೇಕ ನಿದರ್ಶನಗಳನ್ನು ಕಂಡಿದ್ದೇವೆ. ಎಲ್ಲಾ ಭಾರತೀಯ ಪ್ರಜೆಗಳು ದಯವಿಟ್ಟು ಹೊರಗೆ ಹೋಗಬೇಡಿ ಎಂದು ಸೂಚಿಸಲಾಗಿದೆ. ಪರಿಸ್ಥಿತಿ ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯಬಹುದು. ದಯವಿಟ್ಟು ನಿಮ್ಮ ನೆರೆಹೊರೆಯವರಿಂದ ಸಹಾಯ ಪಡೆಯಲು ಪ್ರಯತ್ನಿಸಿ. ದಯವಿಟ್ಟು ಮನೆಯಲ್ಲಿಯೇ ಇರಿ ಮತ್ತು ಸುರಕ್ಷಿತವಾಗಿರಿ” ಎಂದು ಖಾರ್ಟೂಮ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ