Sudan conflict: ಸಂಘರ್ಷಪೀಡಿತ ಸುಡಾನ್​ನಲ್ಲಿ ಸಿಲುಕಿರುವ ಕನ್ನಡಿಗರಿಂದ ನೆರವಿಗಾಗಿ ಮೊರೆ

ಸೇನೆ ಮತ್ತು ಅರೆಸೇನಾ ಪಡೆಗಳ ಮಧ್ಯೆ ಸಂಘರ್ಷ ನಡೆಯುತ್ತಿರುವ ಸುಡಾನ್​​ನ ನಗರ ಎಲ್ ಫಾಷರ್​​ನಲ್ಲಿ ಮಹಿಳೆಯರೂ ಸೇರಿದಂತೆ ಕರ್ನಾಟಕದ 31 ಮಂದಿ ಸಿಲುಕಿದ್ದಾರೆ.

Sudan conflict: ಸಂಘರ್ಷಪೀಡಿತ ಸುಡಾನ್​ನಲ್ಲಿ ಸಿಲುಕಿರುವ ಕನ್ನಡಿಗರಿಂದ ನೆರವಿಗಾಗಿ ಮೊರೆ
ಎಲ್ ಫಾಷರ್​​ನಲ್ಲಿ ಕನ್ನಡಿಗರು
Follow us
Ganapathi Sharma
|

Updated on: Apr 17, 2023 | 3:23 PM

ಬೆಂಗಳೂರು: ಸೇನೆ ಮತ್ತು ಅರೆಸೇನಾ ಪಡೆಗಳ ಮಧ್ಯೆ ಸಂಘರ್ಷ ನಡೆಯುತ್ತಿರುವ ಸುಡಾನ್​​(Sudan) ನಗರ ಎಲ್ ಫಾಷರ್​​ನಲ್ಲಿ (El Fasher) ಮಹಿಳೆಯರೂ ಸೇರಿದಂತೆ ಕರ್ನಾಟಕದ 31 ಮಂದಿ ಸಿಲುಕಿದ್ದಾರೆ. ಈ ಪೈಕಿ ಹಲವು ಮಂದಿ ತಮ್ಮ ಪರಿಸ್ಥಿತಿಯನ್ನು ವಿವರಿಸಿ ‘ಟಿವಿ9’ ಗೆ ವಿಡಿಯೋಗಳನ್ನು ಕಳುಹಿಸಿದ್ದು, ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. ನಾವಿಲ್ಲಿ ಬಾಡಿಗೆ ಮನೆಯಲ್ಲಿ ಸಿಲುಕಿದ್ದೇವೆ. ಶಿವಮೊಗ್ಗದ 7 ಮಂದಿ, ಮೈಸೂರು ಹಾಗೂ ಇತರ ಕಡೆಗಳ 19 ಮಂದಿ ಇಲ್ಲಿ ಸಿಲುಕಿದ್ದೇವೆ. ನಗರದ ವಿವಿಧ ಕಡೆಗಳಲ್ಲಿ ಹಲವಾರು ಮಂದಿ ಕನ್ನಡಿಗರು ಸಿಲುಕಿದ್ದೇವೆ. ರಸ್ತೆಗಳಲ್ಲಿ ಮೃತದೇಹಗಳು ಕಾಣಿಸುತ್ತಿವೆ ಎಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಮೂಲದ ಎಸ್​ ಪ್ರಭು ಎಂಬವರು ತಿಳಿಸಿದ್ದಾರೆ.

ಪ್ರಭು ಅವರು ನಗರದಲ್ಲಿನ ಪರಿಸ್ಥಿತಿಯ ಬಗ್ಗೆ ವಿವರಿಸುವಾಗ ಹಿನ್ನೆಲೆಯಲ್ಲಿ ನಿರಂತರ ಗುಂಡಿನ ಚಕಮಕಿ, ಶೆಲ್ ದಾಳಿಯ ಸದ್ದು ಮೊಳಗುತ್ತಿರುವುದು ಅವರು ಕಳುಹಿಸಿರುವ ವಿಡಿಯೋದಿಂದ ತಿಳಿದುಬಂದಿದೆ.

ತಕ್ಷಣವೇ ಈ ಪ್ರದೇಶದಿಂದ ಜಾಗ ಖಾಲಿ ಮಾಡಿ. ರಾಕೆಟ್ ದಾಳಿ ನಡೆಯುವ ಸಾಧ್ಯತೆಯೂ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸಲಹೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಆಹಾರ, ಕುಡಿಯುವ ನೀರಿಗೂ ಸಮಸ್ಯೆಯಾಗಿದೆ ಎಂದು ಅವರು ಹೇಳಿದ್ದಾರೆ. ಗುಂಡಿನ ದಾಳಿಯಿಂದಾಗಿ ಕಟ್ಟಡಗಳಿಗೆ ಹಾನಿಯಾಗಿರುವ ಚಿತ್ರಗಳನ್ನೂ ಅವರು ಕಳುಹಿಸಿದ್ದಾರೆ.

ಮೂರು ದಿನಗಳ ನಂತರ, ಇಲ್ಲಿ ಒಂದು ಅಂಗಡಿ ತೆರೆಯುತ್ತಿದ್ದಂತೆ ನಾವು ಪಡಿತರವನ್ನು ಸ್ವೀಕರಿಸಿದ್ದೇವೆ. ಇಲ್ಲಿನ ಪರಿಸ್ಥಿತಿ ಬಹಳ ಅಪಾಯಕಾರಿಯಾಗಿದೆ ಎಂದು ಪ್ರಭು ಅವರು ಸೋಮವಾರ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ.

ಎಲ್ ಫಾಷರ್​​ನಲ್ಲಿ ಕರ್ನಾಟಕದ ಅನೇಕರು ಸಿಲುಕಿದ್ದು ಈ ಪೈಕಿ ಹೆಚ್ಚಿನವರು ಅಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಕಳೆದ ಕಲವು ವರ್ಷಗಳಲ್ಲಿ ಸುಡಾನ್​​ಗೆ ವಲಸೆ ಹೋದವರು ಇವರಾಗಿದ್ದಾರೆ.

ಇದನ್ನೂ ಓದಿ: Sudan Clashes: ಸುಡಾನ್​ ಮಿಲಿಟರಿ ಮತ್ತು ಪ್ಯಾರಾ ಮಿಲಿಟರಿ ನಡುವೆ ಗುಂಡಿನ ದಾಳಿ; ಸಂಕಷ್ಟದಲ್ಲಿ ಕನ್ನಡಿಗರು

ಈ ಮಧ್ಯೆ, ಸುಡಾನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮನೆಯೊಳಗೇ ಇರುವಂತೆಯೂ ಹೊರ ಹೋಗದಂತೆಯೂ ಅಲ್ಲಿರುವ ಭಾರತೀಯರಿಗೆ ಸೂಚನೆ ನೀಡಿದೆ.

ಸುಡಾನ್‌ನಲ್ಲಿರುವ ಆತ್ಮೀಯ ಭಾರತೀಯ ಪ್ರಜೆಗಳೇ, ಸಂಘರ್ಷವು ಎರಡು ದಿನಗಳಿಂದ ಕಡಿಮೆಯಾಗಿಲ್ಲ. ನಾವು ಎಲ್ಲಾ ಭಾರತೀಯರನ್ನು ಅವರು ಇರುವಲ್ಲಿಯೇ ಮತ್ತು ಹೊರಗೆ ಹೋಗದಂತೆ ಇರಲು ವಿನಂತಿಸುತ್ತೇವೆ. ದಯವಿಟ್ಟು ಶಾಂತವಾಗಿ. ಬಾಲ್ಕನಿಗಳು ಅಥವಾ ಟೆರೇಸ್‌ನಂತಹ ತೆರೆದ ಸ್ಥಳಗಳಿಂದ ದೂರವಿರಿ. ಅಗತ್ಯ ವಸ್ತುಗಳಾದ ಔಷಧಿ, ನೀರು, ಹಣ, ಪಾಸ್‌ಪೋರ್ಟ್, ಒಸಿಐ ಕಾರ್ಡ್ ಜತೆಗೆ ಇಟ್ಟುಕೊಳ್ಳಿ. ಯಾವುದೇ ಕ್ಷಣ ಸಂಚಾರಕ್ಕೆ ಅನುವಾಗುವಂತೆ ಆಹಾರವನ್ನು ಸಿದ್ಧಪಡಿಸಿಟ್ಟುಕೊಳ್ಳಿ ಎಂದು ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ಏನಾಗುತ್ತಿದೆ ಸುಡಾನ್​ನಲ್ಲಿ?

ಏಪ್ರಿಲ್ 15ರಂದು ಸುಡಾನ್​ನ ಸೇನೆ ಮತ್ತು ತುರ್ತು ಬೆಂಬಲ ಪಡೆಗಳ (RSF) ಮಧ್ಯೆ ಘರ್ಷಣೆ ಆರಂಭವಾಗಿತ್ತು. ಸೇನೆಯು ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ನೇತೃತ್ವದಲ್ಲಿದ್ದರೆ ಆತನ ನಂತರದ ಸ್ಥಾನದಲ್ಲಿರುವ ಮೊಹಮ್ಮದ್ ಹಮ್ದಾನ್ ಡಗ್ಲೊ ನೇತೃತ್ವದಲ್ಲಿ ಆರ್​ಎಸ್​​ಎಫ್​ ಕಾರ್ಯನಿರ್ವಹಿಸುತ್ತಿದೆ ಎಂದು ‘ಎಎಫ್​ಪಿ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಇಬ್ಬರೂ ಜನರಲ್​​ಗಳು 2021ರಲ್ಲಿ ದಂಗೆಯೆದ್ದು ದೇಶದ ಆಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. 2019ರಲ್ಲಷ್ಟೇ ಸುಡಾನ್​ನಲ್ಲಿ ಒಮರ್ ಅಲ್ ಬಶೀರ್ ನೇತೃತ್ವದ ನಾಗರಿಕ ಆಡಳಿತ ಅಸ್ತಿತ್ವಕ್ಕೆ ಬಂದಿತ್ತು.

ಎರಡು ಬಣಗಳ ನಡುವಿನ ಘರ್ಷಣೆಯು ರಾಜಧಾನಿ ಖಾರ್ಟೂಮ್‌ನಲ್ಲಿ ಪ್ರಾರಂಭವಾಗಿದ್ದು ಮತ್ತು ಎಲ್ ಫಾಷರ್ ಸೇರಿದಂತೆ ನೆರೆಯ ನಗರಗಳಿಗೆ ಹರಡಿದೆ.

ಭಾರತೀಯರೂ ಸೇರಿ ನೂರು ಸಾವು

ಈವರೆಗೆ ಭಾರತೀಯರೂ ಸೇರಿದಂತೆ ನೂರು ಮಂದಿ ಮೃತಪಟ್ಟಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಅನೇಕ ವರದಿಗಳು ಹೇಳಿವೆ. ತಕ್ಷಣವೇ ಕದನ ವಿರಾಮ ಘೋಷಿಸುವಂತೆ ವಿಶ್ವಸಂಸ್ಥೆ, ಅಮೆರಿಕ, ಬ್ರಿಟನ್​ ಸೇರಿದಂತೆ ಅನೇಕ ರಾಷ್ಟ್ರಗಳು ಸುಡಾನ್​ ಅನ್ನು ಒತ್ತಾಯಿಸಿವೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ