Sudan: ಸೇನೆ-ಅರೆಸೇನೆ ನಡುವೆ ಘರ್ಷಣೆ, ಸುಡಾನ್‌ನಲ್ಲಿರುವ ಭಾರತೀಯರು ಮನೆಯೊಳಗೆ ಇರುವಂತೆ ರಾಯಭಾರ ಕಚೇರಿ ಸೂಚನೆ

ಸುಡಾನ್​​ನಲ್ಲಿ ಸೇನೆ-ಅರೆಸೇನೆ ನಡುವೆ ಘರ್ಷಣೆ ಉಂಟಾಗಿದೆ. ಎಲ್ಲಾ ಭಾರತೀಯರು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ, ಯಾರು ಮನೆಯಿಂದ ಹೊರಗೆ ಬರಬೇಡಿ, ಸುಡಾನ್‌ನಲ್ಲಿರುವ ಭಾರತೀಯರು ಮನೆಯೊಳಗೆ ಇರವಂತೆ ರಾಯಭಾರ ಕಚೇರಿ ಸೂಚನೆ ನೀಡಿದೆ.

Sudan: ಸೇನೆ-ಅರೆಸೇನೆ ನಡುವೆ ಘರ್ಷಣೆ, ಸುಡಾನ್‌ನಲ್ಲಿರುವ ಭಾರತೀಯರು ಮನೆಯೊಳಗೆ ಇರುವಂತೆ ರಾಯಭಾರ ಕಚೇರಿ ಸೂಚನೆ
ಸುಡಾನ್​​ನಲ್ಲಿ ಸೇನೆ-ಅರೆಸೇನೆ ನಡುವೆ ಘರ್ಷಣೆ
Follow us
|

Updated on:Apr 15, 2023 | 5:17 PM

ಸುಡಾನ್: ಸುಡಾನ್‌ (Sudan) ದೇಶದಲ್ಲಿ ಅರೆಸೇನಾಪಡೆಗಳು ಮತ್ತು ನಿಯಮಿತ ಸೈನ್ಯವು ಪರಸ್ಪರರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ಸುಡಾನ್‌ ರಾಜಧಾನಿಯಲ್ಲಿ ಅನೇಕ ಸ್ಫೋಟಗಳು ಮತ್ತು ಗುಂಡಿನ ದಾಳಿ ನಡೆಯುತ್ತಿರುವ ಕಾರಣ ಆಫ್ರಿಕನ್ ರಾಷ್ಟ್ರದಲ್ಲಿ ಆಶ್ರಯ ಪಡೆಯಲು ಸುಡಾನ್‌ನಲ್ಲಿರುವ ಭಾರತೀಯರನ್ನು ಕೇಳಲಾಗಿದೆ. ಸುಡಾನ್​​ನಲ್ಲಿ ನಡೆಯುತ್ತಿರುವ ಈ ದಾಳಿಯಿಂದ ಎಲ್ಲಾ ಭಾರತೀಯರು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ, ಯಾರು ಮನೆಯಿಂದ ಹೊರಗೆ ಬರಬೇಡಿ, ಮನೆಯೊಳಗೆ ಇರಿ. ಯಾರು ಭಯಪಡುವ ಅವಶ್ಯಕತೆ ಇಲ್ಲ. ದಯವಿಟ್ಟು ಶಾಂತವಾಗಿರಿ, ಸೂಚನೆ ಬರುವವರೆಗೆ ಯಾರು ಮನೆಯಿಂದ ಹೊರಗಡೆ ಬರಬೇಡಿ ಎಂದು ಖಾರ್ಟೂಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಟ್ವೀಟ್​​ನಲ್ಲಿ ತಿಳಿಸಿದೆ. ಸುಡಾನ್ ಸೇನೆಯ ನಾಯಕ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಅರೆಸೈನಿಕ ಕಮಾಂಡರ್ ಮೊಹಮ್ಮದ್ ಹಮ್ದಾನ್ ಡಾಗ್ಲೋ ನಡುವೆ ವಾರಗಳ ಹಿಂದೆ ಭಾರಿ ಉದ್ವಿಗ್ನತೆ ಸ್ಥಿತಿಯನ್ನು ಉಂಟಾಗಿತ್ತು. ಆದರೆ ಇದೀಗ ಈ ಉದ್ವಿಗ್ನತೆ ಹಿಂಸಾಚಾರವಾಗಿ ಸ್ಫೋಟಗೊಂಡಿದೆ.

ಈ ಘರ್ಷಣೆದಿಂದ ಅನೇಕ ಸ್ಫೋಟಗಳು ಮತ್ತು ದಕ್ಷಿಣ ಖಾರ್ಟೌಮ್‌ನ ಆರ್‌ಎಸ್‌ಎಫ್ ಬೇಸ್ ಬಳಿ ಗುಂಡೇಟುಗಳು ವರದಿಯಾಗಿದೆ. ಸುಡಾನ್ ವಿಮಾನ ನಿಲ್ದಾಣದ ಕಾಂಪೌಂಡ್‌ಗೆ ಟ್ರಕ್‌ಲೋಡ್‌ಗಳ ಫೈಟರ್‌ಗಳು ದಾಳಿ ಮಾಡಿತ್ತಿದೆ. ಇದೀಗ ತನ್ನ ಒಂದು ಸೇನೆ ಪಡೆಗಳು ಖಾರ್ಟೌಮ್ ವಿಮಾನ ನಿಲ್ದಾಣವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ಆರ್‌ಎಸ್‌ಎಫ್ ಹೇಳಿದೆ.

ವಿಮಾನ ನಿಲ್ದಾಣದ ಬಳಿ, ಹಾಗೆಯೇ ಬುರ್ಹಾನ್ ನಿವಾಸದ ಬಳಿ ಮತ್ತು ಖಾರ್ತೌಮ್ ಉತ್ತರದಲ್ಲಿ ಗುಂಡಿನ ದಾಳಿ ನಡೆಯುತ್ತಿದೆ. ಒಂದು ಕಡೆ ಗುಂಡಿನ ದಾಳಿಯುತ್ತಿದ್ದರೆ, ಇನ್ನೊಂದು ಕಡೆ ನಾಗರಿಕ ರಕ್ಷಣೆ ಕಾರ್ಯ ನಡೆಯುತ್ತಿದೆ ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ. ಕ್ಷಿಪ್ರ ಬೆಂಬಲ ಪಡೆಗಳ ಯೋಧರು ಖಾರ್ಟೌಮ್ ಮತ್ತು ಸುಡಾನ್ ಸುತ್ತಮುತ್ತಲಿನ ಹಲವಾರು ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ನಬಿಲ್ ಅಬ್ದಲ್ಲಾ ಎಎಫ್‌ಪಿಗೆ ತಿಳಿಸಿದರು.

ಇದೀಗ ಸುಡಾನ್ ಘರ್ಷಣೆಗಳು ನಡೆಯುತ್ತಿವೆ ಮತ್ತು ದೇಶವನ್ನು ರಕ್ಷಿಸಲು ಸೇನೆಯು ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದೆ. ಸೈನಿಕರು ನೈಲ್ ನದಿಗೆ ಅಡ್ಡಲಾಗಿ ಖಾರ್ಟೂಮ್ ಅನ್ನು ಅದರ ಉಪ ನಗರಗಳಾದ ಓಮ್‌ಡರ್ಮನ್ ಮತ್ತು ಖಾರ್ಟೂಮ್ ನಾರ್ತ್‌ನೊಂದಿಗೆ ಸಂಪರ್ಕಿಸುವ ಸೇತುವೆಗಳನ್ನು ನಿರ್ಬಂಧಿಸಿದರು.

ಇದನ್ನೂ ಓದಿ: Sudan Crisis: ಸುಡಾನ್​ನಲ್ಲಿ ಮಿಲಿಟರಿಯಿಂದ ಕ್ಯಾಬಿನೆಟ್ ವಿಸರ್ಜನೆ; ಪ್ರಧಾನಿ ಬಂಧನ, ತುರ್ತು ಪರಿಸ್ಥಿತಿ ಘೋಷಣೆ

ಮಿಲಿಟರಿ ನಾಯಕ ಬುರ್ಹಾನ್ ಅವರು ದೇಶವನ್ನು ಮತ್ತೆ ಮೊದಲಿನಂತೆ ಮಾಡಬೇಕು, ದೇಶದಲ್ಲಿ ಶಾಂತಿ ನೆಲೆಸಬೇಕು ಎಂದು ಅವರು 2021ರ ದಂಗೆಯಿಂದ ಉಂಟಾದ ಬಿಕ್ಕಟ್ಟನ್ನು ಕೊನೆಗೊಳಿಸಲು ಒಪ್ಪಂದ ಮಾತುಕತೆಯ ಮೂಲಕ ಸರಿ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಆರ್ಎಸ್ಎಫ್ ಅನ್ನು ಸಾಮಾನ್ಯ ಸೈನ್ಯಕ್ಕೆ ಸಂಯೋಜಿಸುವ ಯೋಜನೆಯ ಕುರಿತು ಈ ವಿವಾದದ ಉಂಟಾಗಿತ್ತು ಎಂದು ವಿಶ್ಲೇಷಕರು ಹೇಳಿದ್ದಾರೆ. ಈ ವಿಚಾರ ಕುರಿತು ಇಬ್ಬರು ಸೈನ್ಯ ನಾಯಕರ ಮಧ್ಯೆ ನಡೆದ ಜಗಳ ಇದೀಗ ಯುದ್ಧಕ್ಕೆ ಕಾರಣವಾಗಿದೆ. ಈ ಕುರಿತು ಒಂದು ಒಪ್ಪಂದ ಕೂಡ ನಡೆಸಲಾಗಿತ್ತು , ಆದರೆ ಇದಕ್ಕೆ ಇಬ್ಬರು ಒಪ್ಪಿಗೆ ನೀಡಿಲ್ಲ ಎಂದು ಹೇಳಲಾಗಿದೆ ಎಂದು ಹೇಳಲಾಗಿಲ್ಲ.

ಆರ್‌ಎಸ್‌ಎಫ್ ಕಮಾಂಡ್ ರಾಜಧಾನಿ ಮತ್ತು ಇತರ ನಗರಗಳಲ್ಲಿ ಪಡೆಗಳನ್ನು ಸಜ್ಜುಗೊಳಿಸಿದ್ದರಿಂದ ಅಪಾಯಗಳು ಹೆಚ್ಚುತ್ತಿವೆ ಎಂದು ಸೇನೆ ಹೇಳಿದೆ. ಸಶಸ್ತ್ರ ಪಡೆಗಳ ಕಮಾಂಡ್‌ನ ಅನುಮೋದನೆಯಿಲ್ಲದೆ ಅಥವಾ ಅದರೊಂದಿಗೆ ಸಮನ್ವಯವಿಲ್ಲದೆ ನಡೆದ ನಿಯೋಜನೆಯು ಭದ್ರತಾ ಅಪಾಯಗಳನ್ನು ಉಲ್ಬಣಗೊಳಿಸಿದೆ ಮತ್ತು ಭದ್ರತಾ ಪಡೆಗಳ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ ಎಂದು ಅದು ಹೇಳಿದೆ.

ಆರ್‌ಎಸ್‌ಎಫ್ ತನ್ನ ನಿಯೋಜನೆಯನ್ನು ಸಮರ್ಥಿಸಿಕೊಂಡಿದೆ. 2013ರಲ್ಲಿ ರಚಿಸಲಾದ, ಆರ್‌ಎಸ್‌ಎಫ್ ಜಂಜಾವೀಡ್ ಮಿಲಿಟಿನಿಂದ ಹೊರಬಂದಿತ್ತು. ನಂತರ ಅಧ್ಯಕ್ಷ ಒಮರ್ ಅಲ್-ಬಶೀರ್ ಒಂದು ದಶಕದ ಹಿಂದೆ ಪಶ್ಚಿಮ ಡಾರ್ಫುರ್ ಪ್ರದೇಶದಲ್ಲಿ ಅರಬ್ ಅಲ್ಲದ ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧ ಯುದ್ಧ ಅಪರಾಧಗಳ ಆರೋಪಗಳನ್ನು ಹೊರಿಸಿದರು.

Published On - 5:15 pm, Sat, 15 April 23