ಅಮೆರಿಕದ ಜೈಲಿನೊಳಗೆ ತಿಗಣೆ ಮುತ್ತಿಕೊಂಡ ಸ್ಥಿತಿಯಲ್ಲಿ ಕೈದಿಯೊಬ್ಬನ ಮೃತದೇಹ ಪತ್ತೆ
ಮೂರು ತಿಂಗಳ ನಂತರ ಥಾಂಪ್ಸನ್ ಕೀಟಗಳು ಮತ್ತು ತಿಗಣೆಗಳಿಗೆ ಆಹಾರವಾಗಿದ್ದು ಹೊಲಸಾದ ಜೈಲಿನ ಕೋಣೆಯಲ್ಲಿ ಸತ್ತು ಬಿದ್ದಿದ್ದರು. ಬಂಧನದ ಅಧಿಕಾರಿಗಳಲ್ಲಿ ಒಬ್ಬರು ಸಿಪಿಆರ್ ಅನ್ನು ನಿರ್ವಹಿಸಲು ನಿರಾಕರಿಸಿದ್ದರು ಎನ್ನಲಾಗುತ್ತಿದೆ.
ಅಮೆರಿಕದ (US) ಅಟ್ಲಾಂಟಾದ (Atlanta )ಜೈಲಿನಲ್ಲಿದ್ದ 35 ವರ್ಷದ ವ್ಯಕ್ತಿಯೊಬ್ಬರನ್ನು ಕೀಟಗಳು ಮತ್ತು ತಿಗಣೆ ತಿಂದು ಹಾಕಿದೆ ಎಂದು ಸಂತ್ರಸ್ತರ ಕುಟುಂಬದ ವಕೀಲರು ಆರೋಪಿಸಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ ಮೃತ ವ್ಯಕ್ತಿಯ ಕುಟುಂಬವು ಈಗ ಅವರ ಸಾವಿನ ಬಗ್ಗೆ ಕ್ರಿಮಿನಲ್ ತನಿಖೆಗೆ ಒತ್ತಾಯಿಸುತ್ತಿದ್ದು ಜೈಲನ್ನು ಮುಚ್ಚಬೇಕು ಮತ್ತು ಅದನ್ನು ಅಲ್ಲಿಂದ ಬದಲಿಸಬೇಕೆಂದು ಒತ್ತಾಯಿಸುತ್ತಿದೆ. ಪೋಲೀಸರ ಪ್ರಕಾರ ಜೂನ್ 12, 2022 ರಂದು ಅಟ್ಲಾಂಟಾದಲ್ಲಿ ಬ್ಯಾಟರಿಯ ಆರೋಪದ ಮೇಲೆ ಲಾಶಾನ್ ಥಾಂಪ್ಸನ್ ಎಂಬಾತನನ್ನು ಬಂಧಿಸಲಾಗಿತ್ತು. ನಂತರ ಆತನನ್ನು ಫುಲ್ಟನ್ ಕೌಂಟಿ ಜೈಲಿಗೆ ಕರೆದೊಯ್ಯಲಾಯಿತು. ಅಲ್ಲಿ ಆತ ಮಾನಸಿಕ ಅಸ್ವಸ್ಥ ಎಂದು ಅಧಿಕಾರಿಗಳು ನಿರ್ಧರಿಸಿದ ನಂತರ ಅವರನ್ನು ಮನೋವೈದ್ಯಕೀಯ ವಿಭಾಗದಲ್ಲಿ ಇರಿಸಲಾಯಿತು. ಸೆಪ್ಟೆಂಬರ್ 13, 2022 ರಂದು, ಥಾಂಪ್ಸನ್ ಅವರ ಜೈಲು ಕೋಣೆಯಲ್ಲಿ ಪ್ರತಿಕ್ರಿಯೆ ನೀಡಲಿಲ್ಲ. ಅವರಿಗೆ CPR ನೀಡುವ ಪ್ರಯತ್ನ ಮಾಡಿದರೂ ಪ್ರಯೋಜನ ಆಗಲಿಲ್ಲ.
ಮೂರು ತಿಂಗಳ ನಂತರ ಥಾಂಪ್ಸನ್ ಕೀಟಗಳು ಮತ್ತು ತಿಗಣೆಗಳಿಗೆ ಆಹಾರವಾಗಿದ್ದು ಹೊಲಸಾದ ಜೈಲಿನ ಕೋಣೆಯಲ್ಲಿ ಸತ್ತು ಬಿದ್ದಿದ್ದರು. ಬಂಧನದ ಅಧಿಕಾರಿಗಳಲ್ಲಿ ಒಬ್ಬರು ಸಿಪಿಆರ್ ಅನ್ನು ನಿರ್ವಹಿಸಲು ನಿರಾಕರಿಸಿದ್ದರು ಎನ್ನಲಾಗುತ್ತಿದೆ. ಥಾಂಪ್ಸನ್ ಇದ್ದ ಜೈಲು ಜೀವಿಗಳಿರುವ ಕೋಣೆಯಾಗಿತ್ತು. ಅವರು ಇದಕ್ಕೆ ಅರ್ಹರಾಗಿರಲಿಲ್ಲ. ಅವರ ಸಾವಿಗೆ ಯಾರನ್ನಾದರೂ ಹೊಣೆಗಾರರನ್ನಾಗಿ ಮಾಡಬೇಕು ಎಂದು ಥಾಂಪ್ಸನ್ ಅವರ ಕುಟುಂಬದ ವಕೀಲ ಮೈಕೆಲ್ ಡಿ ಹಾರ್ಪರ್ ಹೇಳಿದ್ದಾರೆ.
ಅವರು ಫುಲ್ಟನ್ ಕೌಂಟಿ ಜೈಲ್ ಕೊಳಕು ಪರಿಸ್ಥಿತಿಯೇ ಆತನ ಸಾವಿಗೆ ಕಾರಣವೆಂದು ಉಲ್ಲೇಖಿಸಿದ್ದಾರೆ. ಥಾಂಪ್ಸನ್ ಕುಸಿದುಹೋಗುತ್ತಿರುವುದನ್ನು ಜೈಲು ಸಿಬ್ಬಂದಿ ಗಮನಿಸಿದರು ಆದರೆ ಅವರಿಗೆ ಸಹಾಯ ಮಾಡಲು ಏನನ್ನೂ ಮಾಡಲಿಲ್ಲ ಎಂದು ಅವರು ಆರೋಪಿಸಿದರು.
ಜೈಲಿನ ಒಳಗಿನ ಚಿತ್ರಗಳು ಥಾಂಪ್ಸನ್ ಅವರ ದೇಹ ಮತ್ತು ಜೈಲು ಕೋಣೆಯ ಭಯಾನಕ ಮತ್ತು ಕೊಳಕು ಪರಿಸ್ಥಿತಿಗಳನ್ನು ತೋರಿಸುತ್ತವೆ. ಅಲ್ಲಿ ಕೊಳಕು ತುಂಬಿಕೊಂಡಿದೆ.
ಇದನ್ನೂ ಓದಿ: Sudan: ಸೇನೆ-ಅರೆಸೇನೆ ನಡುವೆ ಘರ್ಷಣೆ, ಸುಡಾನ್‌ನಲ್ಲಿರುವ ಭಾರತೀಯರು ಮನೆಯೊಳಗೆ ಇರುವಂತೆ ರಾಯಭಾರ ಕಚೇರಿ ಸೂಚನೆ
ಕೌಂಟಿ ವೈದ್ಯಕೀಯ ಪರೀಕ್ಷಕರ ಕಚೇರಿಯ ವರದಿಯು ಅವರ ದೇಹದಲ್ಲಿ ದೈಹಿಕ ಗಾಯದ ಯಾವುದೇ ಲಕ್ಷಣಗಳಿಲ್ಲ ಎಂದು ಹೇಳಿದೆ. ಆದರೆ ಯುಎಸ್ಎ ಟುಡೆ ಪ್ರಕಾರ ಅವರ ದೇಹಕ್ಕೆ ತಿಗಣೆ ಮುತ್ತಿರುವುದನ್ನು ಗಮನಿಸಿದೆ. ಆದಾಗ್ಯೂ, ಸಾವಿನ ಕಾರಣವನ್ನು ನಿರ್ಧರಿಸಲಾಗಿಲ್ಲ ಎಂದು ಅದು ಹೇಳಿದೆ.
ಮೃತದೇಹ ಮೇಲೆ ಆಘಾತದ ಯಾವುದೇ ಸ್ಪಷ್ಟ ಲಕ್ಷಣಗಳು ಕಂಡುಬಂದಿಲ್ಲ. ಮೃತನ ದೇಹವನ್ನು ತಿಗಣೆ ಮುಚ್ಚಿಕೊಂಡಿತ್ತು ಎಂದು ವೈದ್ಯಕೀಯ ಪರೀಕ್ಷಕರ ವರದಿ ತಿಳಿಸಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ