Why PM Modi Is Popular: ಪ್ರಧಾನಿ ಮೋದಿ ಏಕೆ ಇಷ್ಟು ಜನಪ್ರಿಯರು ಎಂಬುದಕ್ಕೆ ಕಾರಣಕೊಟ್ಟ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮಂಡೊ

ಪ್ರಧಾನಿ ನರೇಂದ್ರ ಮೋದಿ(Narendra Modi) ಬಗ್ಗೆ ವಿಶ್ವದೆಲ್ಲೆಡೆ ಚರ್ಚೆ ನಡೆಯುತ್ತಿದೆ, ಅವರು ವಿಶ್ವದ ಅತ್ಯಂತ ಜನಪ್ರಿಯ ನಾಯಕರೂ ಹೌದು. ಮೋದಿಯವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೋದಿಗಿರುವಂತಃ ಜನಪ್ರಿಯತೆ ಬೇರೆ ಯಾವೊಬ್ಬ ನಾಯಕರಿಗೂ ಇಲ್ಲ ಹೀಗೆ  ಅಮೆರಿಕ ಸರ್ಕಾರದ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮಂಡೊ ಅವರು ಮೋದಿ ವ್ಯಕ್ತಿತ್ವವನ್ನು ಹೊಗಳಿದ್ದಾರೆ. ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಏಕೆ ಎಂದು ಗಿನಾ ವಿವರಿಸಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ವಿನಾಶದಲ್ಲಿದೆ ಎಂದು ಇಲ್ಲಿನ ಪ್ರತಿಪಕ್ಷಗಳು ಪ್ರಧಾನಿ ಮೋದಿಯನ್ನು […]

Why PM Modi Is Popular: ಪ್ರಧಾನಿ ಮೋದಿ ಏಕೆ ಇಷ್ಟು ಜನಪ್ರಿಯರು ಎಂಬುದಕ್ಕೆ ಕಾರಣಕೊಟ್ಟ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮಂಡೊ
ಪ್ರಧಾನಿ ನರೇಂದ್ರ ಮೋದಿ ಹಾಗೂ ಗಿನಾ ರೈಮಂಡೊ
Follow us
|

Updated on:Apr 16, 2023 | 12:38 PM

ಪ್ರಧಾನಿ ನರೇಂದ್ರ ಮೋದಿ(Narendra Modi) ಬಗ್ಗೆ ವಿಶ್ವದೆಲ್ಲೆಡೆ ಚರ್ಚೆ ನಡೆಯುತ್ತಿದೆ, ಅವರು ವಿಶ್ವದ ಅತ್ಯಂತ ಜನಪ್ರಿಯ ನಾಯಕರೂ ಹೌದು. ಮೋದಿಯವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೋದಿಗಿರುವಂತಃ ಜನಪ್ರಿಯತೆ ಬೇರೆ ಯಾವೊಬ್ಬ ನಾಯಕರಿಗೂ ಇಲ್ಲ ಹೀಗೆ  ಅಮೆರಿಕ ಸರ್ಕಾರದ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮಂಡೊ ಅವರು ಮೋದಿ ವ್ಯಕ್ತಿತ್ವವನ್ನು ಹೊಗಳಿದ್ದಾರೆ. ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಏಕೆ ಎಂದು ಗಿನಾ ವಿವರಿಸಿದ್ದಾರೆ.

ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ವಿನಾಶದಲ್ಲಿದೆ ಎಂದು ಇಲ್ಲಿನ ಪ್ರತಿಪಕ್ಷಗಳು ಪ್ರಧಾನಿ ಮೋದಿಯನ್ನು ದೂರುತ್ತಿರುವ ಇಂತಹ ಹೊತ್ತಿನಲ್ಲಿ ಬ್ರಿಟಿಷ್ ಸಂಸತ್ ಸದಸ್ಯರು ಮತ್ತು ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಹಾಗೂ ದೂರದೃಷ್ಟಿ ಕುರಿತು ನೀಡಿರುವ ಹೇಳಿಕೆಗಳು ಮಹತ್ವ ಪಡೆದಿವೆ.

ಇದಕ್ಕೆ ವಿಶೇಷ ಕಾರಣವಿದೆ ಎಂದು ಕಾರ್ಯಕ್ರಮವೊಂದರಲ್ಲಿ ಗಿನಾ ಹೇಳಿದ್ದಾರೆ. ಗಿನಾ ರೈಮಂಡೊ ಪ್ರಕಾರ, ಮೋದಿ ಬಹಳ ದೂರದೃಷ್ಟಿಯುಳ್ಳವರು. ಅಂದರೆ, ಅವರು ಭವಿಷ್ಯದ ಬಗ್ಗೆ ಆಲೋಚಿಸುವ ಮೂಲಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಅಲ್ಲದೆ, ಸಾರ್ವಜನಿಕರ ಬಗ್ಗೆ ಅವರ ಬದ್ಧತೆ ಉತ್ತಮವಾಗಿದೆ.

ಮೋದಿಯವರು ತಮ್ಮ ದೇಶದ ಜನತೆಯನ್ನು ಬಡತನದಿಂದ ಮುಕ್ತಗೊಳಿಸಿ, ಅವರಿಗೆ ಉತ್ತಮ ಹಾದಿಯನ್ನು ತೋರಿಸುವಲ್ಲಿ ಮತ್ತು ಭಾರತವನ್ನು ವಿಶ್ವಶಕ್ತಿಯನ್ನಾಗಿ ಮಾಡುವಲ್ಲಿ ನಿರತರಾಗಿದ್ದಾರೆ ಎಂದು ಗಿನಾ ರೈಮೊಂಡೋ ಹೊಗಳಿದ್ದಾರೆ.

ತಾನು ಮೋದಿಯನ್ನು ಕೇವಲ ಅರ್ಧ ಗಂಟೆ ಭೇಟಿಯಾಗಿದ್ದೆ ಮತ್ತು ಆ ಸಮಯದಲ್ಲಿ ಮೋದಿ ತಂತ್ರಜ್ಞಾನದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ ಎಂಬುದು ತಿಳಿದುಬಂದಿದೆ. ಅಮೆರಿಕ ಮತ್ತು ಭಾರತ ಒಟ್ಟಾಗಿ ಈ ಪರಿಸರ ವ್ಯವಸ್ಥೆಯನ್ನು ಸಿದ್ಧಪಡಿಸಬೇಕು ಎಂದು ಹೇಳಿದರು.

ಮತ್ತಷ್ಟು ಓದಿ:ದೇಶವೊಂದೇ, ಎಲ್ಲಾ ರಾಜ್ಯದ ಸಂಸ್ಕೃತಿಯ ಅಪ್ಪಿಕೊಳ್ಳಬೇಕು-ಒಪ್ಪಿಕೊಳ್ಳಬೇಕು ಎಂದು ಒಗ್ಗಟ್ಟಿನ ಮಂತ್ರ ಸಾರುತ್ತಿರುವ ಪ್ರಧಾನಿ ಮೋದಿ

ಗಿನಾ ಮೇರಿ ರೈಮಂಡೊ ಯಾರು? ಗಿನಾ ಮೇರಿ ರೈಮಂಡೊ ಅಮೆರಿಕದ ರಾಜಕಾರಣಿ, ಇದೀಗ ಅಮೆರಿಕದ ವಾಣಿಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆ 2015 ರಿಂದ 2021 ರವರೆಗೆ ರೋಡ್ ಐಲೆಂಡ್‌ನ 75 ನೇ ಗವರ್ನರ್ ಆಗಿ ಸೇವೆ ಸಲ್ಲಿಸಿದರು. ಗಿನಾ ಮೇರಿ ರೈಮಂಡೋ ಅವರು 1971 ರಲ್ಲಿ ರೋಡ್ ಐಲೆಂಡ್‌ನ ಸ್ಮಿತ್‌ಫೀಲ್ಡ್‌ನಲ್ಲಿ ಜನಿಸಿದರು. ಇಟಾಲಿಯನ್ ಮೂಲದ , ಅವರು ಜೋಸೆಫೀನ್ (ಪಿರೋ) ಮತ್ತು ಜೋಸೆಫ್ ರೈಮಂಡೊ ಅವರ ಮೂವರು ಮಕ್ಕಳಲ್ಲಿ ಕಿರಿಯವರಾಗಿದ್ದಾರೆ. ಅವರ ತಂದೆ ಜೋಸೆಫ್ (1926-2014), ರೋಡ್ ಐಲೆಂಡ್‌ನ ಪ್ರಾವಿಡೆನ್ಸ್‌ನಲ್ಲಿರುವ ಬುಲೋವಾ ವಾಚ್ ಕಾರ್ಖಾನೆಯಲ್ಲಿ ತಮ್ಮ ವೃತ್ತಿಜೀವನವನ್ನು ಮಾಡಿದರು. ಬುಲೋವಾ ಕಂಪನಿಯು ಪ್ರಾವಿಡೆನ್ಸ್‌ನಲ್ಲಿನ ಕಾರ್ಖಾನೆಯನ್ನು ಮುಚ್ಚುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದಾಗ ಅವರು 56 ನೇ ವಯಸ್ಸಿನಲ್ಲಿ ನಿರುದ್ಯೋಗಿಯಾದರು. ರೈಮಂಡೋ US ಸೆನೆಟರ್ ಜ್ಯಾಕ್ ರೀಡ್ ಅವರ ಬಾಲ್ಯ ಸ್ನೇಹಿತರಾಗಿದ್ದರು.

ಮಾರ್ಚ್​ ತಿಂಗಳಲ್ಲಿ ರೈಮಂಡೊ ಅವರನ್ನು ಭೇಟಿಯಾಗಿದ್ದ ಪ್ರಧಾನಿ ಮೋದಿ ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್​ ತಿಂಗಳಿನಲ್ಲಿ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮಂಡೊ ಅವರನ್ನು ಭೇಟಿಯಾಗಿದ್ದರು. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತ ಕೈಗೊಂಡಿರುವ ಹಲವು ಕ್ರಮಗಳು ಕಳೆದೆರಡು ವರ್ಷಗಳಲ್ಲಿ ಭಾರತದ ಜತೆ ವ್ಯವಾಹಾರಕ್ಕೆ ಮತ್ತಷ್ಟು ಅವಕಾಶಗಳು ಸೃಷ್ಟಿಯಾದಂತಾಗಿದೆ ಎಂದು ಹೇಳಿದ್ದರು.

ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್ ಸದಸ್ಯ ನಿಕೋಲಸ್ ಸ್ಟರ್ನ್ (Nicholas Stern) ಅವರು ವಿಶ್ವ ಬ್ಯಾಂಕ್ (World Bank) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ನಾಯಕತ್ವವನ್ನು ಶ್ಲಾಘಿಸಿದ್ದು ಹವಾಮಾನ ಬದಲಾವಣೆಯನ್ನು ನಿಭಾಯಿಸಲಿರುವ ಲೈಫ್ ಜಾಗತಿಕ ಉಪಕ್ರಮ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಪ್ರಧಾನಿ ಮೋದಿ ಅವರು ಬೆಳವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:23 am, Sun, 16 April 23