AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fumio Kishida: ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಭಾಷಣದ ವೇಳೆ ಸ್ಫೋಟ; ತಪ್ಪಿದ ದುರಂತ

ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಅವರು ಭಾಷಣ ಮಾಡುತ್ತಿದ್ದ ವೇಳೆ ಸ್ಫೋಟ ಸಂಭವಿಸಿದ ಘಟನೆ ವಾಕಯಾಮ ಎಂಬಲ್ಲಿ ನಡೆದಿದೆ. ಅದೃಷ್ಟವಶಾತ್, ಫುಮಿಯೊ ಕಿಶಿದಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Fumio Kishida: ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಭಾಷಣದ ವೇಳೆ ಸ್ಫೋಟ; ತಪ್ಪಿದ ದುರಂತ
ಫುಮಿಯೊ ಕಿಶಿದಾ
Follow us
Ganapathi Sharma
|

Updated on:Apr 15, 2023 | 9:15 AM

ಟೋಕಿಯೊ: ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ (Fumio Kishida) ಅವರು ಭಾಷಣ ಮಾಡುತ್ತಿದ್ದ ವೇಳೆ ಸ್ಫೋಟ ಸಂಭವಿಸಿದ ಘಟನೆ ಪಶ್ಚಿಮ ಜಪಾನ್​ನ ವಾಕಯಾಮ ಎಂಬಲ್ಲಿ ನಡೆದಿದೆ. ಅದೃಷ್ಟವಶಾತ್, ಫುಮಿಯೊ ಕಿಶಿದಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಸ್ಫೋಟಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿ ತಿಳಿಸಿದೆ. ಪ್ರಧಾನಿ ಭಾಷಣ ಮಾಡುತ್ತಿದ್ದಾಗ ಅವರತ್ತ ‘ಸ್ಮೋಕ್ ಬಾಂಬ್’ ಎಸೆಯಲಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆ ಸಂಬಂಧ ಪ್ರತಿಕ್ರಿಯಿಸಲು ಸ್ಥಳೀಯ ಪೊಲೀಸರು ನಿರಾಕರಿಸಿದ್ದಾರೆ.

ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆಯುತ್ತಿರುವ ದೃಶ್ಯಾವಳಿಗಳನ್ನು ಜಪಾನ್​ನ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ಎನ್​ಎಚ್​ಕೆ ಪ್ರಸಾರ ಮಾಡಿದೆ. ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆಯ ನಂತರ ಜಪಾನ್​ನಲ್ಲಿ ಪ್ರಧಾನಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ. ಆದಾಗ್ಯೂ ಪ್ರಧಾನಿಯವರ ಭಾಷಣದ ವೇಳೆ ಅವರನ್ನು ಗುರಿಯಾಗಿಸಿ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. 2022ರ ಜುಲೈನಲ್ಲಿ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ ಅಬೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಇದನ್ನೂ ಓದಿ: Texas: ಟೆಕ್ಸಾಸ್​ನ ಡೈರಿ ಫಾರ್ಮ್​ನಲ್ಲಿ ಭಾರಿ ಸ್ಫೋಟ: 18,000 ಜಾನುವಾರುಗಳ ಸಜೀವ ದಹನ

ಉತ್ತರ ಸಪ್ಪೊರೊ ಮತ್ತು ನಾಗಾನೊದ ಕರುಯಿಜಾವಾ ನಗರದಲ್ಲಿ ಮತ್ತು ಹಿರೋಷಿಮಾದಲ್ಲಿ ಜಿ7 ದೇಶಗಳ ಸಚಿವರ ಸಮಾವೇಶವನ್ನು ಜಪಾನ್ ಮೇ ತಿಂಗಳಲ್ಲಿ ಆಯೋಜಿಸಿದೆ. ಸಮಾವೇಶಕ್ಕೆ ಒಂದು ತಿಂಗಳಷ್ಟೇ ಬಾಕಿ ಇರುವ ಸಂದರ್ಭದಲ್ಲಿ ದಾಳಿ ನಡೆದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:58 am, Sat, 15 April 23