ದೆಹಲಿ: ಕೇಂದ್ರದ ಹೊಸ ಕೃಷಿ ಕಾಯ್ದೆಯ ವಿರುದ್ಧ ಹೋರಾಡುತ್ತಿರುವ ರೈತರನ್ನು ಸರ್ಕಾರವು ಮಾತುಕತೆಗೆ ಆಹ್ವಾನಿಸಿದ್ದು, ಮಾತುಕತೆಯಲ್ಲಿ ಭಾಗವಹಿಸಬೇಕೆ, ಬೇಡವೇ ಎಂಬ ಬಗ್ಗೆ ರೈತ ಸಂಘವು ಸಭೆ ನಡೆಸಿ ತೀರ್ಮಾನಿಸುವುದಾಗಿ ತಿಳಿಸಿದೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಜೊತೆಗೆ ನಡೆಯುವ ಸಭೆಯಲ್ಲಿ ಭಾಗವಹಿಸುವ ಬಗ್ಗೆ ರೈತರು ಇಂದು ತೀರ್ಮಾನಿಸಲಿದ್ದಾರೆ.
ಸಚಿವ ನರೇಂದ್ರ ಸಿಂಗ್ ತೋಮರ್, ಚಳಿ ಮತ್ತು ಕೊರೊನಾ ಕಾರಣ ನೀಡಿ, ರೈತ ಮುಖಂಡರನ್ನು ಡಿಸೆಂಬರ್ 3ರ ಬದಲಾಗಿ ಇಂದೇ ಮಾತುಕತೆಗೆ ಬರುವಂತೆ ಆಹ್ವಾನಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ರೈತ ಮುಖಂಡ ಬಲಿಜೀತ್ ಸಿಂಗ್ ಮಹಲ್, ಕೇಂದ್ರದ ಆಹ್ವಾನವನ್ನು ಸ್ವೀಕರಿಸುವ ಬಗ್ಗೆ ಇಂದಿನ ಸಭೆಯಲ್ಲಿ ತೀಮಾರ್ನಿಸಲಿದ್ದೇವೆ ಎಂದಿದ್ದಾರೆ.
ಆರು ದಿನಗಳಿಂದ ರೈತರ ಪ್ರತಿಭಟನೆ
ಸತತ ಆರು ದಿನಗಳಿಂದ ದೆಹಲಿಯ ವಿವಿಧ ಗಡಿಪ್ರದೇಶಗಳಲ್ಲಿ ನೆರೆದಿರುವ ರೈತರು, ಕೇಂದ್ರದ ಹೊಸ ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸ ಕಾಯ್ದೆಯು ರೈತರಿಗೆ ಸಿಗುವ ಕನಿಷ್ಠ ಬೆಂಬಲ ಬೆಲೆಯನ್ನು ಕಿತ್ತುಹಾಕಲಿದೆ ಎಂಬ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇಂದಿನ ಸಭೆಯ ಬಗ್ಗೆ ಸಚಿವ ತೋಮರ್ ಏನು ಹೇಳಿದ್ದಾರೆ?
ಇಂದಿನ ಸಭೆಯನ್ನು ಅಪರಾಹ್ನ 3 ಗಂಟೆಗೆ, ದೆಹಲಿಯ ವಿಜ್ಞಾನ ಭವನದಲ್ಲಿ ನಡೆಸುವ ಬಗ್ಗೆ ಸಚಿವ ತೋಮರ್ ನಿನ್ನೆ ಹೇಳಿಕೆ ನೀಡಿದ್ದರು. ಈ ಹಿಂದೆ, ನವೆಂಬರ್ 13ರಂದು ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರಿಗೆ ಆಹ್ವಾನ ನೀಡಲಾಗಿದೆ ಎಂದೂ ಹೇಳಿದ್ದರು.
ರೈತರ ‘ಮನ್ ಕೀ ಬಾತ್’
ನಾವು ಒಂದು ನಿರ್ಣಾಯಕ ಯುದ್ಧಕ್ಕಾಗಿ ದೆಹಲಿಗೆ ಬಂದಿದ್ದೇವೆ ಎಂದಿರುವ ರೈತರು, ನಮ್ಮ ‘ಮನ್ ಕೀ ಬಾತ್’ಅನ್ನು ಪ್ರಧಾನಿ ಮೋದಿ ಆಲಿಸಬೇಕು ಎಂದಿದ್ದಾರೆ. ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವವರೆಗೆ ನಾವು ಆಂದೋಲನ ಕೈಬಿಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ: ಕುಮಾರಸ್ವಾಮಿ ಸರಣಿ ಟ್ವೀಟ್
Published On - 11:08 am, Tue, 1 December 20