ಸಂಸತ್ತಿನ ರಾಜ್ಯಸಭೆಯಲ್ಲಿ (Rajya Sabha) ಮಧ್ಯಾಹ್ನದ ಚರ್ಚೆಗೆ ಸಭ್ಯಾಧ್ಯಕ್ಷ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಅನುಪಸ್ಥಿತಿಯ ಸಮಯದಲ್ಲಿ ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅಥ್ಲೀಟ್ ಕ್ರೀಡಾಪಟು ಪಿ.ಟಿ ಉಷಾ (PT Usha) ಗುರುವಾರ ರಾಜ್ಯಸಭೆಯ ಕಲಾಪದ ಅಧ್ಯಕ್ಷತೆ ವಹಿಸಿದ್ದರು. ಈ ಬಗ್ಗೆ ಪಿ.ಟಿ ಉಷಾ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಆ ಕ್ಷಣದ ಚಿಕ್ಕ ಕ್ಲಿಪ್ನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಪೋಸ್ಟ್ನಲ್ಲಿ ನನಗೆ ಇದು ಒಂದು ಮೈಲಿಗಲ್ಲು ಮತ್ತು ಹೆಮ್ಮೆಯ ಕ್ಷಣ ಎಂದು ವಿವರಿಸಿದ್ದಾರೆ. ಜುಲೈ 2022 ರಲ್ಲಿ ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಪಿ.ಟಿ ಉಷಾ ಮೇಲ್ಮನೆಗೆ ನಾಮನಿರ್ದೇಶನಗೊಂಡರು. ನವೆಂಬರ್‌ನಲ್ಲಿ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷರಾಗಿ ಆಯ್ಕೆಯಾದರು.
ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್ ಅವರು ಹೇಳಿದಂತೆ ‘ಮಹಾ ಶಕ್ತಿಯು ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಎಂದು ನಾನು ರಾಜ್ಯಸಭೆಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದಾಗ ನನಗೆ ಅನಿಸಿತು. ನನ್ನ ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಯೊಂದಿಗೆ ನಾನು ಈ ಪ್ರಯಾಣವನ್ನು ಕೈಗೊಂಡಾಗ ಈ ದೊಡ್ಡ ಮೈಲಿಗಲ್ಲುಗಳನ್ನು ಸೃಷ್ಟಿಸಲು ಸಾಧ್ಯವಾಗಿದೆ ಎಂದು ಪಿ.ಟಿ ಉಷಾ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಅವರು ಈ ವೀಡಿಯೊವನ್ನು ಪೋಸ್ಟ್ ಮಾಡಿದ ಟ್ವಿಟರ್ನಲ್ಲಿ ಅನೇಕರು ಕಮೆಂಟ್ ಮಾಡಿದ್ದಾರೆ. ಜೊತೆಗೆ ರಾಜ್ಯಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡದಕ್ಕೆ ಅಭಿನಂದಿಸಿದ್ದಾರೆ.
“Great power involves great responsibility” as said by Franklin D. Roosevelt was felt by me when I chaired the Rajya Sabha session. I hope to create milestones as I undertake this journey with the trust and faith vested in me by my people.
? @sansad_tv pic.twitter.com/bR8wKlOf21— P.T. USHA (@PTUshaOfficial) February 9, 2023
ಇದನ್ನೂ ಓದಿ: PT Usha: ಕೇಂದ್ರ ಸಚಿವ ಪ್ರಲ್ಹಾದ ಜೋಶಿಯ ಭೇಟಿಯಾಗಿ ಕೃತಜ್ಞತೆ ಅರ್ಪಿಸಿದ ನೂತನ ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ
ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಿದೆ ಉಷಾ, ನಿಮ್ಮ ಮುಂದಿನ ಪ್ರಯಾಣಕ್ಕೆ ಶುಭವಾಗಲಿ. ಹೀಗೆ ಮುಂದುವರಿಯಿರಿ ಮತ್ತು ಮತ್ತೊಮ್ಮೆ ಇತಿಹಾಸವನ್ನು ಸೃಷ್ಟಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ತುಂಬಾ ಹೆಮ್ಮೆ ಅನಿಸುತ್ತಿದೆ. ನೀವು ಭಾರತದ ಹೆಣ್ಣುಮಕ್ಕಳಿಗೆ ಸ್ಫೂರ್ತಿ ಟ್ವಿಟರ್ ಬಳಖೆದಾರರೂ ಹೇಳಿದ್ದಾರೆ.
ಇದು ನಿಜವಾದ ಮಹಿಳಾ ಸಬಲೀಕರಣ, ಆಲ್ ದಿ ಬೆಸ್ಟ್ ಮತ್ತು ಮತ್ತೆ ನೀವು ಈ ದೇಶದ ಕೀರ್ತಿಯನ್ನು ಎತ್ತರಕ್ಕೆ ತರುವ ಕಾರ್ಯವನ್ನು ಮಾಡುತ್ತೀರಾ ಎಂದು ಹೇಳಿದ್ದಾರೆ. ಡಿಸೆಂಬರ್‌ನಲ್ಲಿ, ಸಂಸತ್ತು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಲಭ್ಯವಿಲ್ಲದಿದ್ದಾಗ ಸದನದ ಕಲಾಪಗಳನ್ನು ನಡೆಸುವ ರಾಜ್ಯಸಭೆಯ ಉಪಾಧ್ಯಕ್ಷರ ಸಮಿತಿಯ ಭಾಗವಾದ ಮೊದಲ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ.
Published On - 2:53 pm, Thu, 9 February 23