ಬಸವಣ್ಣನವರ ಕಾಯಕವೇ ಕೈಲಾಸದಡಿ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯ: ಡಾ.ವೀರೇಂದ್ರ ಹೆಗ್ಗಡೆ
ರಾಜ್ಯಸಭೆ ಕಲಾಪದಲ್ಲಿ ರಾಷ್ಟ್ರಪತಿ ಅವರ ಭಾಷಣದ ಮೇಲೆ ಡಾ.ವೀರೇಂದ್ರ ಹೆಗ್ಗಡೆ ಅವರು ಭಾಷಣ ಮಾಡಿದರು. ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು, ಬಸವಣ್ಣನವರ ಕಾಯಕವೇ ಕೈಲಾಸದಡಿ ಕೇಂದ್ರ ಸರ್ಕಾರ ಅಭಿವೃದ್ಧಿ ಕಾರ್ಯ ಮಾಡುತ್ತಿದೆ ಎಂದರು. ಅಲ್ಲದೆ, ಯೋಗದ ಮಹತ್ವದ ಬಗ್ಗೆಯೂ ಮಾತನಾಡಿದರು.
ದೆಹಲಿ: ಬಸವಣ್ಣನವರ ಕಾಯಕವೇ ಕೈಲಾಸದಡಿ ಕೇಂದ್ರ ಸರ್ಕಾರ ಅಭಿವೃದ್ಧಿ ಕಾರ್ಯ ಮಾಡುತ್ತಿದೆ ಎಂದು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ (Dr. Veerendra Heggade) ಹೇಳಿದರು. ರಾಜ್ಯಸಭೆ ಕಲಾಪದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಭಾಷಣದ ಮೇಲೆ ಭಾಷಣ ಮಾಡಿದ ಅವರು, ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮದ ಹಾಗೂ ಯೋಗದ ಮಹತ್ವದ ಬಗ್ಗೆಯೂ ಮಾತನಾಡಿದರು. ಪಾಶ್ಚಾತ್ಯ ಸಂಸ್ಕೃತಿ ಭಾರತ ಮೇಲೆ ಪ್ರಭಾವ ಬೀರಿದೆ. ಅದೇ ರೀತಿ ಭಾರತದ ಆರ್ಯವೇದ, ಯೋಗ ಪಾಶ್ಚಾತ್ಯದಲ್ಲಿ ಪ್ರಚಾರವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi)ಯವರ ನೇತೃತ್ವದಲ್ಲಿ ಯೋಗ ಪ್ರಚಾರ ಪಡೆಯುತ್ತಿದೆ ಎಂದರು.
ದೇಶದ ಧಾರ್ಮಿಕ ಕ್ಷೇತ್ರದಲ್ಲಿ ಬದಲಾವಣೆಯಾಗುತ್ತಿದೆ. ಅಯೋಧ್ಯೆ, ಕೇದಾರ, ವಾರಣಾಸಿಯಲ್ಲಿ ಬದಲಾವಣೆಯಾಗಿದೆ. ಆಗಿರುವ ಬದಲಾವಣೆಯನ್ನು ಭಕ್ತರು ಕಂಡಿದ್ದಾರೆ. ಮಾತ್ರವಲ್ಲದೆ, ಸರ್ಕಾರ ಶಿಕ್ಷಣಕ್ಕೂ ಒತ್ತು ನೀಡುತ್ತಿದೆ. ಏಕ್ ಭಾರತ್ ಶ್ರೆಷ್ಠ ಭಾರತ್ ಸಂದೇಶದಂತೆ ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದಾರೆ. ಅನೇಕ ಭಾಷೆಗಳು ನಮ್ಮನ್ನು ಬೇರ್ಪಡಿಸುತ್ತಿಲ್ಲ, ಬಸಲಾಗಿ ಒಗ್ಗೂಡಿಸುತ್ತಿದೆ ಎಂದರು.
ಇದನ್ನೂ ಓದಿ: ನಾನು ಯಾವುದೇ ಅಸಂಸದೀಯ ಪದ ಬಳಸಿಲ್ಲ, ಆದರೂ ಭಾಷಣದ ಕೆಲವು ಭಾಗಗಳನ್ನು ಸಂಸತ್ ದಾಖಲೆಯಿಂದ ತೆಗೆದುಹಾಕಿದ್ದು ಯಾಕೆ?: ಖರ್ಗೆ
ವಿರೇಂದ್ರ ಹೆಗಡೆ ಅವರು ಭಾಷಣದ ಬಳಿಕ ಪಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರ ನಿಡಿದರು. ಈ ವೇಳೆ ವಿಪಕ್ಷಗಳ ಸದಸ್ಯರು ಗದ್ದಲ ಮಾಡಿ ಮಾತನಾಡಲು ತಮಗೂ ಅವಕಾಶ ನೀಡುವಂತೆ ಆಗ್ರಹಿಸಿದರು. ಈ ವೇಳೆ ಮೋದಿ, ಅದಾನಿ ಭಾಯಿ ಭಾಯಿ ಎಂದು ಘೋಷಣೆ ಕೂಗಿದರು. ಆದರೂ ಮೋದಿ ವಿಪಕ್ಷಗಳ ಗದ್ದಲದ ನಡುವೆಯೇ ಭಾಷಣ ಮಾಡಿದರು.
ದೇಶವು ಸದನದ ಕಲಾಪಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ಕೆಲವು ಸದಸ್ಯರು ನೀಡಿದ ಭಾಷಣಗಳು ಮತ್ತು ಹೇಳಿಕೆಗಳು ತುಂಬಾ ನಿರಾಶಾದಾಯಕವಾಗಿವೆ. ನಾನು 2014 ರಲ್ಲಿ ಪ್ರಧಾನಿಯಾದಾಗ, ಕಾಂಗ್ರೆಸ್ ಸಮಸ್ಯೆಗಳನ್ನು ಸೃಷ್ಟಿಸಿತ್ತು. ನೀವು ಕಮಲದ ಮೇಲೆ ಎಷ್ಟೇ ಕೆಸರು ಎರಚಿದರೂ ಚೆಚನ್ನಾಗಿ ಅರಳುತ್ತದೆ. ಪರೋಕ್ಷವಾಗಿ ಕಮಲ ಅರಳು ಸಹಾಯ ಮಾಡುತ್ತಿದ್ದೀರಿ ಎಂದು ಹೇಳುವ ಮೂಲಕ ವಿಪಕ್ಷಗಳ ಗದ್ದಲಕ್ಕೆ ಮೋದಿ ತಿರುಗೇಟು ನೀಡಿದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:14 pm, Thu, 9 February 23