Puducherry: 300 ರೂ. ಮಾಸಿಕ ಎಲ್‌ಪಿಜಿ ಸಬ್ಸಿಡಿ ಘೋಷಿಸಿದ ಪುದುಚೇರಿ ಸರ್ಕಾರ

|

Updated on: Mar 13, 2023 | 6:25 PM

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಸರ್ಕಾರ ಜನರಿಗೆ 300 ರೂ. ಮಾಸಿಕ ಎಲ್‌ಪಿಜಿ ಸಬ್ಸಿಡಿಯನ್ನು ಸೋಮವಾರದಂದು ಘೋಷಿಸಿದ್ದು , ಈ ಯೋಜನೆಗೆ 126 ಕೋಟಿ ರೂ. ಮೀಸಲಿಟ್ಟಿದೆ.

Puducherry: 300 ರೂ. ಮಾಸಿಕ ಎಲ್‌ಪಿಜಿ ಸಬ್ಸಿಡಿ ಘೋಷಿಸಿದ ಪುದುಚೇರಿ ಸರ್ಕಾರ
ಎಲ್‌ಪಿಜಿ
Follow us on

ಪುದುಚೇರಿ: ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಸರ್ಕಾರ ಜನರಿಗೆ 300 ರೂ. ಮಾಸಿಕ ಎಲ್‌ಪಿಜಿ ಸಬ್ಸಿಡಿಯನ್ನು ಸೋಮವಾರದಂದು ಘೋಷಿಸಿದ್ದು , ಈ ಯೋಜನೆಗೆ 126 ಕೋಟಿ ರೂ. ಮೀಸಲಿಟ್ಟಿದೆ. ಮುಖ್ಯಮಂತ್ರಿ ಎನ್ ರಂಗಸಾಮಿ ಅವರು 2023-24ನೇ ಸಾಲಿನ ಬಜೆಟ್‌ನಲ್ಲಿ ಈ ಘೋಷಣೆ ಮಾಡಿದ್ದಾರೆ. ವಿವಿಧ ಇಲಾಖೆಗಳ ಸಾಧನೆಗಳನ್ನು ವಿವರಿಸಿದ ರಂಗಸ್ವಾಮಿ, ಎಲ್ಲಾ ಕುಟುಂಬಗಳಿಗೆ ತಿಂಗಳಿಗೆ ಒಂದು ಸಿಲಿಂಡರ್‌ಗೆ 300 ರೂ. ಸಬ್ಸಿಡಿ ನೀಡುವ ಯೋಜನೆಯನ್ನು ಜಾರಿಗೆ ತರಲು ಸರ್ಕಾರ 126 ಕೋಟಿ ರೂ. ಮೀಸಲಿಟ್ಟಿದೆ ಎಂದು ಹೇಳಿದ್ದಾರೆ.

11,600 ಕೋಟಿ ರೂ. ತೆರಿಗೆ ಮುಕ್ತ ಬಜೆಟ್ ಮಂಡಿಸಿದರು. LPG ಸಬ್ಸಿಡಿ ಯೋಜನೆಯು ಕುಟುಂಬ ಪಡಿತರ ಚೀಟಿ ಹೊಂದಿರುವ ಎಲ್ಲಾ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ. ವಿವಿಧ ದೇಶಗಳ ತಮಿಳು ವಿದ್ವಾಂಸರು ಭಾಗವಹಿಸುವ “ವಿಶ್ವ ತಮಿಳು ಸಮ್ಮೇಳನ”ವನ್ನೂ ಸರ್ಕಾರ ಇಲ್ಲಿ ನಡೆಸಲಿದೆ ಎಂದು ಸಿಎಂ ಹೇಳಿದರು.

ಶ್ರೀ ಅರಬಿಂದೋ ಅವರ 150 ನೇ ಜನ್ಮ ವಾರ್ಷಿಕೋತ್ಸವದ ಆಚರಣೆಯ ಪ್ರಮುಖ ಅಂಶವಾಗಿ “ಅವರ ಆಲೋಚನೆಗಳು, ತತ್ತ್ವಶಾಸ್ತ್ರ, ಯೋಗ ಮತ್ತು ಸಾಹಿತ್ಯದ ಸಂಶೋಧನೆಯನ್ನು ಪ್ರಚಾರ ಮಾಡಲು ರಾಷ್ಟ್ರೀಯ ಸಮ್ಮೇಳನವನ್ನು ಸಹ ನಡೆಸಲಾಗುವುದು. ಇದಲ್ಲದೆ, ಸರ್ಕಾರವು ಸ್ಥಿರ ಠೇವಣಿ ಯೋಜನೆಯಡಿ 50,000 ರೂ.ನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 18 ವರ್ಷಗಳ ಅವಧಿಗೆ “ಮುಖ್ಯಮಂತ್ರಿಗಳ ಹೆಣ್ಣು ಮಕ್ಕಳ ರಕ್ಷಣಾ ಯೋಜನೆ”ಯ ಹೊಸ ಯೋಜನೆಯಡಿ ಠೇವಣಿ ಮಾಡುತ್ತದೆ.

ಇದನ್ನೂ ಓದಿ: Puducherry: ಪುದುಚೇರಿಯ ಪ್ರಸಿದ್ಧ ಮನಕುಲ ವಿನಾಯಕ ದೇವಾಲಯದ ಲಕ್ಷ್ಮೀ ಆನೆ ಹೃದಯಾಘಾತದಿಂದ ಸಾವು

ಯುವಕರಿಗೆ ಉದ್ಯೋಗ ಕಲ್ಪಿಸಲು 100 ಕೋಟಿ ರೂ.ಗೂ ಹೆಚ್ಚು ಹೂಡಿಕೆಯೊಂದಿಗೆ ಕೈಗಾರಿಕೆ ಆರಂಭಿಸುವ ಉದ್ಯಮಗಳಿಗೆ ಶೇ 1ರಷ್ಟು ಸಹಾಯಧನ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು . ಈ ಸಬ್ಸಿಡಿಯು ಕೈಗಾರಿಕೆಗಳ ಸ್ಥಾಪನೆಯ ದಿನಾಂಕದಿಂದ ಐದು ವರ್ಷಗಳ ಅವಧಿಗೆ ಪ್ರತಿ ವರ್ಷ ಭೂಮಿ, ಯಂತ್ರೋಪಕರಣಗಳು ಮತ್ತು ಕಟ್ಟಡದ ಮೇಲೆ ಲಭ್ಯವಿರುತ್ತದೆ.

2023-2024ರ ಆರ್ಥಿಕ ವರ್ಷಕ್ಕೆ ಪುದುಚೇರಿಯ ಬಜೆಟ್ ಗಾತ್ರವನ್ನು 11,600 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ ಅದರಲ್ಲಿ ಯುಟಿಯ ಸ್ವಂತ ಸಂಪನ್ಮೂಲಗಳು 6,154.54 ಕೋಟಿ, ವಿಪತ್ತು ಪರಿಹಾರ ನಿಧಿಗಳು ಸೇರಿದಂತೆ ಕೇಂದ್ರ ನೆರವು 3,117.77 ಕೋಟಿ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಯಡಿ 620 ಕೋಟಿ. ಉಳಿದ 1,707.69 ಕೋಟಿಯನ್ನು ಮುಕ್ತ ಮಾರುಕಟ್ಟೆ ಸಾಲ ಮತ್ತು ಕೇಂದ್ರ ಹಣಕಾಸು ಸಂಸ್ಥೆಗಳಿಂದ ಸಾಲದ ಮೂಲಕ ಸಂಗ್ರಹಿಸಲಾಗುವುದು ಎಂದು ಅವರು ಹೇಳಿದರು.

ಪ್ರಾದೇಶಿಕ ಸರ್ಕಾರವು ಕೇಂದ್ರ ಮಾರ್ಗದರ್ಶನದ ಪ್ರಕಾರ ಲಿಂಗ ಬಜೆಟ್, ಯುವ ಬಜೆಟ್ ಎಂಬ ವಿಶೇಷ ಬಜೆಟ್ ಘಟಕಗಳನ್ನು ಪರಿಚಯಿಸಿದೆ ಎಂದು ರಂಗಸಾಮಿ ಹೇಳಿದರು. ನಮ್ಮ ಆರ್ಥಿಕ ಸಂಪನ್ಮೂಲಗಳ ಹೆಚ್ಚಿನ ಭಾಗವು ಸಂಬಳ, ಪಿಂಚಣಿ, ಸಾಲಗಳ ಮರುಪಾವತಿ ಮತ್ತು ಬಡ್ಡಿ ಪಾವತಿಯಂತಹ ಬದ್ಧ ವೆಚ್ಚಗಳನ್ನು ಪೂರೈಸಲು ಹೋಗುತ್ತದೆ ಎಂದು ಅವರು ಹೇಳಿದರು. ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರು ಎಲ್ಪಿಜಿ ಸಬ್ಸಿಡಿ ಮತ್ತು ಹೆಣ್ಣು ಮಕ್ಕಳಿಗೆ ಸಹಾಯದ ಕುರಿತು ಸಿಎಂ ಘೋಷಣೆಗಳನ್ನು ಸ್ವಾಗತಿಸಿದರು.

Published On - 6:25 pm, Mon, 13 March 23