Puducherry: ಪುದುಚೇರಿಯ ಪ್ರಸಿದ್ಧ ಮನಕುಲ ವಿನಾಯಕ ದೇವಾಲಯದ ಲಕ್ಷ್ಮೀ ಆನೆ ಹೃದಯಾಘಾತದಿಂದ ಸಾವು

ಪುದುಚೇರಿಯ ಪ್ರಸಿದ್ಧ ದೇವಾಲಯ ಮನಕುಲ ವಿನಾಯಕರ ದೇಗುಲಕ್ಕೆ ಸೇರಿದ್ದ ಆನೆಯೊಂದು ವಿಹರಿಸುತ್ತಿದ್ದಾಗ ಹಠಾತ್ ಹೃದಯಾಘಾತದಿಂದ ಬುಧವಾರ ಮೃತಪಟ್ಟಿದೆ. ಲಕ್ಷ್ಮಿ ಎಂಬ ಹೆಸರಿನ ಆನೆಯನ್ನು ಕೈಗಾರಿಕೋದ್ಯಮಿಯೊಬ್ಬರು 1995ರಲ್ಲಿ ದೇವಸ್ಥಾನಕ್ಕೆ ದಾನ ಮಾಡಿದರು ಮತ್ತು ಈ ಆನೆಯ ಆಶೀರ್ವಾದವನ್ನು ಪಡೆಯಲು ವಿದೇಶಿ ಭಕ್ತರು ಕೂಡ ಬರುತ್ತಿದ್ದರು.

Puducherry: ಪುದುಚೇರಿಯ ಪ್ರಸಿದ್ಧ ಮನಕುಲ ವಿನಾಯಕ ದೇವಾಲಯದ ಲಕ್ಷ್ಮೀ ಆನೆ ಹೃದಯಾಘಾತದಿಂದ ಸಾವು
Puducherry Lakshmi elephant
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 30, 2022 | 12:19 PM

ಪುದುಚೇರಿ; ಪುದುಚೇರಿಯ ಪ್ರಸಿದ್ಧ ದೇವಾಲಯ ಮನಕುಲ ವಿನಾಯಕ ದೇಗುಲಕ್ಕೆ ಸೇರಿದ್ದ ಆನೆಯೊಂದು ವಿಹರಿಸುತ್ತಿದ್ದಾಗ ಹಠಾತ್ ಹೃದಯಾಘಾತದಿಂದ ಬುಧವಾರ ಮೃತಪಟ್ಟಿದೆ. ಲಕ್ಷ್ಮಿ ಎಂಬ ಹೆಸರಿನ ಆನೆಯನ್ನು ಕೈಗಾರಿಕೋದ್ಯಮಿಯೊಬ್ಬರು 1995ರಲ್ಲಿ ದೇವಸ್ಥಾನಕ್ಕೆ ದಾನ ಮಾಡಿದರು ಮತ್ತು ಈ ಆನೆಯ ಆಶೀರ್ವಾದವನ್ನು ಪಡೆಯಲು ವಿದೇಶಿ ಭಕ್ತರು ಕೂಡ ಬರುತ್ತಿದ್ದರು.

ಆನೆಯನ್ನು ನೋಡಿಕೊಳ್ಳುತ್ತಿದ್ದ ಸರ್ಕಾರದ ಪಶುವೈದ್ಯರು ಸ್ಥಳದಲ್ಲಿ ಹಾಜರಿದ್ದು, ಆನೆ ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ಹೇಳಿದೆ. ಆನೆಯ ಆರೋಗ್ಯ ಉತ್ತಮವಾಗಿತ್ತು, ಯಾವುದೇ ತೊಂದರೆ ಇರಲಿಲ್ಲ ಎಂದು ಅವರು ಪಿಟಿಐಗೆ ತಿಳಿಸಿದರು. ಸರ್ಕಾರಿ ಕಾಲೇಜೊಂದರ ಸಮೀಪದ ರಸ್ತೆಯಲ್ಲಿ ಆನೆ ಕುಸಿದು ಮೃತಪಟ್ಟಿದ್ದಾರೆ.

ಇದನ್ನು ಓದಿ: Silent Heart Attack: ಸೈಲೆಂಟ್ ಹಾರ್ಟ್​​ ಅಟ್ಯಾಕ್​ ಎಂದರೇನು? ಅದರ ಸಾಮಾನ್ಯ ಲಕ್ಷಣಗಳೇನು?

ಬಳಿಕ ಮುತ್ಯಾಲಪೇಟೆಯಲ್ಲಿರುವ ದೇವಸ್ಥಾನಕ್ಕೆ ಸೇರಿದ ವಿಸ್ತಾರವಾದ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರನ್ ತಿಳಿಸಿದ್ದಾರೆ. ಆನೆಯ ಸಾವಿನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕ ಕಡೆಗಳಿಂದ ಜನರು ಆನೆ ಕೊನೆಯ ದರ್ಶನ ಪಡೆಯಲು ಆಗಮಿಸಿದ್ದಾರೆ.

ಕ್ರೇನ್ ಸಹಾಯದಿಂದ ಆನೆಯನ್ನು ಟ್ರಕ್‌ ಮೂಲಕ ಅಂತಿಮ ಯಾತ್ರೆಯಲ್ಲಿ ಸಾಗಿಸಲು ಮುಂದಾಗಿದ್ದಾರೆ. ಇದರ ಜೊತೆಗೆ ಲಕ್ಷ್ಮೀ ಆನೆಯ ದರ್ಶನ ಪಡೆಯಲು ಬಂದ ಜನರನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಯಿತು. ಮನಕುಲ ವಿನಾಯಕ ದೇವಸ್ಥಾನವು ಪುದುಚೇರಿಯಲ್ಲಿ ಆನೆಯನ್ನು ಹೊಂದಿರುವ ಏಕೈಕ ದೇವಾಲಯವಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ