ಪುದುಚೇರಿ: ಇಲ್ಲಿನ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಮತ್ತು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ನಡುವಿನ ಮನಸ್ತಾಪ, ಜಟಾಪಟಿ ಹೊಸದಲ್ಲ. ಅಲ್ಲಿ ಕಿರಣ್ ಬೇಡಿ ಸರ್ಕಾರದ ಆಡಳಿತಕ್ಕೆ ಅಡ್ಡಿಯುಂಟು ಮಾಡುತ್ತಾರೆ ಎಂಬ ಆರೋಪವನ್ನು ಸಿಎಂ ಮತ್ತು ಅವರ ಕ್ಯಾಬಿನೆಟ್ ಮಂತ್ರಿಗಳು ಮಾಡುತ್ತಲೇ ಬಂದಿದ್ದಾರೆ.
ಇನ್ನು ಸರ್ಕಾರದ ಅಭಿವೃದ್ಧಿ ಯೋಜನೆಗಳು, ಕಾರ್ಯಗಳಿಗೆ ಕಿರಣ್ ಬೇಡಿ ಅಡ್ಡಗಾಲು ಹಾಕುತ್ತಿದ್ದಾರೆ. ಯಾವುದೇ ಹೊಸ ಯೋಜನೆ ಅನುಷ್ಠಾನಕ್ಕೂ ಬಿಡುತ್ತಿಲ್ಲ ಎಂದು ಆರೋಪಿಸಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸರ್ಕಾರದ ಸಚಿವರು, ಶಾಸಕರು ಜ.8ರಿಂದ ರಾಜ್ ನಿವಾಸ್ ಎದುರು ನಾಲ್ಕು ದಿನಗಳ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದಾರೆ. ಪುದುಚೇರಿಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸೆಕ್ಯೂಲರ್ ಡೆಮಾಕ್ರಟಿಕ್ ಅಲಯನ್ಸ್ದೊಂದಿಗೆ, ಸಿಪಿಐ, ಸಿಪಿಐ (ಎಂ), ವಿಸಿಕೆ (Viduthalai Chiruthaigal Katchi) ಪಕ್ಷಗಳ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಕೂಡಲೇ ಕಿರಣ್ ಬೇಡಿಯನ್ನು ಕೇಂದ್ರ ಸರ್ಕಾರ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಮುಖ್ಯಮಂತ್ರಿ ವಿ.ನಾರಾಯಣ್ ಸ್ವಾಮಿ ಆಗ್ರಹಿಸಿದ್ದಾರೆ. ಧರಣಿ ಕುಳಿತಿರುವ ಮುಖ್ಯಮಂತ್ರಿ ಮತ್ತು ಸಚಿವರು, ಮುಖಂಡರು ಕೈಯಲ್ಲಿ ಕಿರಣ್ ಬೇಡಿ ವಿರುದ್ಧದ ಘೋಷಣೆಗಳುಳ್ಳ ಪೋಸ್ಟರ್ಗಳನ್ನು ಹಿಡಿದಿದ್ದಾರೆ. ಕಾರ್ಪೊರೇಟ್ ಮೋದಿ ಕ್ವಿಟ್, ಕ್ವಿಟ್, ಕಿರಣ್ ಬೇಡಿಯನ್ನು ಹುದ್ದೆಯಿಂದ ಕೆಳಗಳಿಸಿ ಎಂಬಂಥ ಘೋಷಣೆಗಳನ್ನು ಪೋಸ್ಟರ್ನಲ್ಲಿ ನೋಡಬಹುದು.
ನಮ್ಮ ಚುನಾಯಿತ ಸರ್ಕಾರ ಕಾರ್ಯನಿರ್ವಹಿಸಲು ಕಿರಣ್ ಬೇಡಿ ಅವಕಾಶ ನೀಡುತ್ತಿಲ್ಲ. ನಮ್ಮ ನಿತ್ಯದ ಆಡಳಿತದಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಆನ್‌ಲೈನ್ ಕ್ಲಾಸ್‌ಗೆ ಅನುಕೂಲವಾಗಲು ತಮಿಳುನಾಡು ವಿದ್ಯಾರ್ಥಿಗಳಿಗೆ 2 ಜಿಬಿ ಡಾಟಾ ಉಚಿತ