ಪುದುಚೇರಿ(Puducherry)ಯ ಸಾರಿಗೆ ಸಚಿವೆ ಚಂದ್ರ ಪ್ರಿಯಾಂಕಾ(Chandra Priyanka) ರಾಜೀನಾಮೆ ನೀಡಿದ್ದಾರೆ. ಚಂದ್ರ ಪ್ರಿಯಾಂಕಾ ಅವರು ಅಖಿಲ ಭಾರತ NR ಕಾಂಗ್ರೆಸ್‌ನಿಂದ ಸಚಿವರಾಗಿದ್ದರು. ಮತ್ತು ಅವರು ಕೇಂದ್ರಾಡಳಿತ ಪ್ರದೇಶದ 41 ವರ್ಷಗಳ ಇತಿಹಾಸದಲ್ಲಿ ಎರಡನೇ ಮಹಿಳಾ ಸಚಿವರಾಗಿದ್ದರು. ಚಂದ್ರ ಕಾರೈಕಲ್‌ನ ಮೊದಲ ಮಹಿಳಾ ಸಚಿವೆ. ಅವರು ಪುದುಚೇರಿಯ ಮಾಜಿ ಸಚಿವ ಚಂದ್ರಕಾಸು ಅವರ ಪುತ್ರಿ. ರಾಜೀನಾಮೆ ಪತ್ರದಲ್ಲಿ ಚಂದ್ರ ಪ್ರಿಯಾಂಕಾ ಅವರು ದಲಿತ ಮಹಿಳಾ ನಾಯಕಿಯಾಗಿ ಹೋರಾಟ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಮುಖ್ಯಮಂತ್ರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ, ಪ್ರಬಲ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸಿ ಸಚಿವೆಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ.
ಮೇ 2016 ರಲ್ಲಿ ನೆಡುಂಗಾಡು ಕ್ಷೇತ್ರದಿಂದ ಪುದುಚೇರಿ ಅಸೆಂಬ್ಲಿಯ ಸದಸ್ಯರಾಗಿ ಆಯ್ಕೆಯಾದರು. 2021 ರ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ, ಅವರು ಅದೇ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಎ ಮಾರಿಮುತ್ತು ಅವರನ್ನು ಸೋಲಿಸಿದರು. ಅವರು 8,560 ಮತಗಳ ಅಂತರದಿಂದ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.
ಮತ್ತಷ್ಟು ಓದಿ: Puducherry: ಪುದುಚೇರಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನವನ್ನು ನೀಡುವ ನಿರ್ಣಯ ಅಂಗೀಕರಿಸಿದ ವಿಧಾನಸಭೆ
ಗೆಲುವಿನ ನಂತರ, ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ್ದ ಪ್ರಿಯಾಂಕಾ, ಕಾರೈಕಲ್‌ನ ಅಭಿವೃದ್ಧಿಗೆ ಕೆಲಸ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.
ಪ್ರಿಯಾಂಕಾ ತಮ್ಮ ಶಾಲಾ ಶಿಕ್ಷಣವನ್ನು ಕಾರೈಕಲ್‌ನಲ್ಲಿ ಪೂರ್ಣಗೊಳಿಸಿದ್ದಾರೆ. ಅವರು ಅಣ್ಣಾಮಲೈ ವಿಶ್ವವಿದ್ಯಾಲಯದಿಂದ BBA ಪದವಿ ಪಡೆದರು. ಚಂದಿರ ಅವರು ಝಾನ್ಸಿ ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Tue, 10 October 23