Boyfriend: ಪ್ರಿಯಕರನ ಜೊತೆ ಜಗಳವಾಡಿದ ಯುವತಿ 300 ಅಡಿ ಕಂದಕಕ್ಕೆ ಹಾರಿ, ಪೊದೆಗಳಲ್ಲಿ ಸಿಲುಕಿದಳು: ಆದರೆ ಸಹಾಯಕ್ಕಾಗಿ…
ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಪರ್ವತದಿಂದ ಜಿಗಿದ ಬಾಲಕಿ ಮಧ್ಯದ ಪೊದೆಯಲ್ಲಿ ಸಿಲುಕಿಕೊಂಡಿದ್ದಾಳೆ. ಇದಾದ ಬಳಿಕ ಆಕೆ ತನ್ನನ್ನು ಉಳಿಸಿಕೊಳ್ಳುವಂತೆ ಜೋರಾಗಿ ಕಿರುಚಲು ಆರಂಭಿಸಿದ್ದಾಳೆ. ಹೀಗಿರುವಾಗ ಅಕ್ಕಪಕ್ಕದ ಜನ ಅವಳ ಧ್ವನಿ ಕೇಳಿ ಅಲ್ಲಿಗೆ ತಲುಪಿದರು. ಕೆಳಗಿನ ಪೊದೆಗಳಲ್ಲಿ ಹುಡುಗಿ ಸಿಲುಕಿಕೊಂಡಿದ್ದನ್ನು ಪತ್ತೆ ಹಚ್ಚಿದ್ದರು.
ಬಿಹಾರ: ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಪರ್ವತದಿಂದ ಜಿಗಿದ ಯುವತಿ ಮಧ್ಯದಲ್ಲಿಯೇ ಪೊದೆಯಲ್ಲಿ ಸಿಲುಕಿಕೊಂಡಿದ್ದಾಳೆ. ಇದಾದ ಬಳಿಕ ಆಕೆ ತನ್ನನ್ನು ಉಳಿಸಿಕೊಳ್ಳುವಂತೆ ಜೋರಾಗಿ ಕಿರುಚಲು ಆರಂಭಿಸಿದ್ದಾಳೆ. ಬಿಹಾರದ ನಳಂದಾದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ (boyfriend) ಜಗಳವಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದಕ್ಕಾಗಿ ಆಕೆ ಹಿಂಜರಿಯದೆ ಮುಂದಡಿಯಿಟ್ಟು ಸುಮಾರು 300 ಅಡಿ ಎತ್ತರದಿಂದ ಜಿಗಿದಿದ್ದಾಳೆ. ಆದರೆ ಆಕೆ ಸಾಯಲಿಲ್ಲವಾದರೂ ಆಕೆಯ ಜೀವಕ್ಕೆ ಅಪಾಯವೊದಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಈ ಬಾಲಕಿ ತನ್ನ ಜೀವ ಉಳಿಸಿಕೊಡಿ ಎಂದು ಬೇಡಿಕೊಳ್ಳುವಂತಾಗಿದೆ. ಬಹಳ ಕಷ್ಟಪಟ್ಟು ಯುವಕರ ತಂಡವೊಂದು ಅವಳ ಪ್ರಾಣ ಉಳಿಸಿದೆ. ಆದರೆ ಇತ್ತ ಅವಳು ಜಿಗಿದ ತಕ್ಷಣ, ಅವಳ ಗೆಳೆಯ ಓಡಿಹೋಗಿದ್ದಾನೆ!
ಪರ್ವತ ಮತ್ತು ಹಳ್ಳದ ನಡುವೆ ಸಿಲುಕಿದ ಹುಡುಗಿ
ಬಿಹಾರದ ನಳಂದಾ ಜಿಲ್ಲೆಯ ರಾಹುಯಿ ಪೊಲೀಸ್ ಠಾಣೆಯ ಮೂಲಗಳ ಪ್ರಕಾರ, ಹುಡುಗಿಯೊಬ್ಬಳು ತನ್ನ ಗೆಳೆಯನೊಂದಿಗೆ ಹಿರಣ್ಯ ಪರ್ವತಕ್ಕೆ ಬಂದಿದ್ದಳು. ಇಬ್ಬರೂ ದೇವಸ್ಥಾನದ ಹಿಂದೆ ಕುಳಿತು ಮಾತನಾಡಲು ಪ್ರಾರಂಭಿಸಿದರು ಮತ್ತು ಇದ್ದಕ್ಕಿದ್ದಂತೆ ಅವರು ಯಾವುದೋ ವಿಷಯದ ಬಗ್ಗೆ ಜಗಳವಾಡಿದರು. ಅವರ ನಡುವಿನ ವಾಗ್ವಾದವು ಎಷ್ಟು ಉಲ್ಬಣಗೊಂಡಿತು ಎಂದರೆ ಹುಡುಗಿ ಪರ್ವತದಿಂದ ಜಿಗಿದಿದ್ದಾಳೆ. ಆದರೆ ಆ ಹುಡುಗಿ ಪ್ರಾಣವನ್ನು ಉಳಿಸಬೇಕಿದ್ದ, ಅವಳ ಜೊತೆಗಿದ್ದ ಹುಡುಗ ಅಂದರೆ ಅವಳ ಪ್ರೇಮಿ ಅಲ್ಲಿಂದ ಓಡಿಹೋಗಿದ್ದಾನೆ.
ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಪರ್ವತದಿಂದ ಜಿಗಿದ ಬಾಲಕಿ ಮಧ್ಯದ ಪೊದೆಯಲ್ಲಿ ಸಿಲುಕಿಕೊಂಡಿದ್ದಾಳೆ. ಇದಾದ ಬಳಿಕ ಆಕೆ ತನ್ನನ್ನು ಉಳಿಸಿಕೊಳ್ಳುವಂತೆ ಜೋರಾಗಿ ಕಿರುಚಲು ಆರಂಭಿಸಿದ್ದಾಳೆ. ಹೀಗಿರುವಾಗ ಅಕ್ಕಪಕ್ಕದ ಜನ ಅವಳ ಧ್ವನಿ ಕೇಳಿ ಅಲ್ಲಿಗೆ ತಲುಪಿದರು. ಕೆಳಗಿನ ಪೊದೆಗಳಲ್ಲಿ ಹುಡುಗಿ ಸಿಲುಕಿಕೊಂಡಿದ್ದನ್ನು ಪತ್ತೆ ಹಚ್ಚಿದ್ದರು. ಈ ಮಾಹಿತಿಯನ್ನು ತಕ್ಷಣವೇ ಪೊಲೀಸರಿಗೆ ರವಾನಿಸಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಸಾಕಷ್ಟು ಪ್ರಯತ್ನಗಳ ನಂತರ, ಆರು ಜನರ ತಂದ ಅವಳನ್ನು ಪೊದೆಯಿಂದ ಹೊರಕ್ಕೆ ಕರೆತಂದಿದ್ದಾರೆ. ಅಷ್ಟರಲ್ಲಿ ಬಾಲಕಿ ಪ್ರಜ್ಞಾಹೀನಳಾಗಿದ್ದಳು.
ಇದನ್ನೂ ಓದಿ: ನಡುರಾತ್ರಿ ನಡುರಸ್ತೆಯಲ್ಲಿ ಯುವ ಜೋಡಿ ಬೈಕ್ ಸವಾರಿ, ಎರಡು ಕೈಯಲ್ಲೂ ತುಪಾಕಿ ಝಳಪಿಸಿದ ಯುವತಿ! ಆಮೇಲೇನಾಯ್ತು?
ಯುವತಿಯ ಶೋಚನೀಯ ಸ್ಥಿತಿಯನ್ನು ನೋಡಿ, ತಕ್ಷಣವೇ ಆಕೆಯನ್ನು ಚಿಕಿತ್ಸೆಗಾಗಿ ಬಿಹಾರ ಷರೀಫ್‌ನ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆಯ ಗಂಭೀರ ಸ್ಥಿತಿಯನ್ನು ನೋಡಿದ ವೈದ್ಯರು ಅವಳನ್ನು ಅಲ್ಲಿಂದ ಪವಾಪುರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಿದರು. ಮಾಧ್ಯಮ ವರದಿಗಳ ಪ್ರಕಾರ ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಎಸ್‌ಎಚ್‌ಒ ಸೊಸರೈ ರಾಜಮಣಿ, ಯುವತಿಯೊಬ್ಬಳು ಬೆಟ್ಟದಿಂದ ಹಾರಿದ್ದಾಳೆ ಎಂದು ಹೇಳಿದ್ದಾರೆ. ಬಾಲಕಿಯನ್ನು ಅಲ್ಲಿಂದ ಸ್ಥಳಾಂತರಿಸಿದ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಯಾರೂ ಲಿಖಿತ ದೂರು ನೀಡಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Tue, 10 October 23