ಮೋರ್ಬಿ ಸೇತುವೆ ಪ್ರಕರಣ: ನ್ಯಾಯಾಲಯಕ್ಕೆ ಎಸ್ಐಟಿ ಸಲ್ಲಿಸಿದ ತನಿಖಾ ವರದಿಯಲ್ಲೇನಿದೆ?
ಗುಜರಾತಿನ ಮೋರ್ಬಿ ಕೇಬಲ್ ಸೇತುವೆ ಅಪಘಾತಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಸಲ್ಲಿಸಿದೆ. ಈ ತನಿಖಾ ವರದಿ ಪ್ರಕಾರ ಮೊರ್ಬಿ ಕೇಬಲ್ ಸೇತುವೆ ಅಪಘಾತಕ್ಕೆ ಒರೆವಾ ಕಂಪನಿಯ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದೆ. ಸರ್ಕಾರ ಈ ದುರಂತಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡವನ್ನು ರಚನೆ ಮಾಡಿತ್ತು.
ಗುಜರಾತಿನ ಮೋರ್ಬಿ ಕೇಬಲ್ ಸೇತುವೆ (Morbi Cable Bridge) ಅಪಘಾತಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಸಲ್ಲಿಸಿದೆ. ಈ ತನಿಖಾ ವರದಿ ಪ್ರಕಾರ ಮೊರ್ಬಿ ಕೇಬಲ್ ಸೇತುವೆ ಅಪಘಾತಕ್ಕೆ ಒರೆವಾ ಕಂಪನಿಯ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದೆ. ಸರ್ಕಾರ ಈ ದುರಂತಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡವನ್ನು ರಚನೆ ಮಾಡಿತ್ತು. ಇದೀಗ ಈ ಬಗ್ಗೆ ಎಸ್ ಐಟಿ ತಂಡ 5 ಸಾವಿರ ಪುಟಗಳ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಸೇತುವೆಯನ್ನು ನಿರ್ವಹಿಸಿದ ಮತ್ತು ದುರಸ್ತಿ ಮಾಡಿದ ಓರೆವಾ ಕಂಪನಿಯೇ ಕಾರಣ ಎಂದು ಎಸ್ಐಟಿ ವರದಿ ಹೇಳಿದೆ. ಎಂಡಿ, ಮ್ಯಾನೇಜರ್ ದಿನೇಶ್ ದವೆ, ಮ್ಯಾನೇಜರ್ ದೀಪಕ್ ಪರೇಖ್ ಸೇರಿದಂತೆ ಅನೇಕ ನಿರ್ಲಕ್ಷ್ಯದ ಕೆಲಸ ಇದಕ್ಕೆ ಕಾರಣ ಎಂದು ಹೇಳಿದೆ. ಇದೀಗ ಈ ಬಗ್ಗೆ ಎಸ್ಐಟಿ ಕೋರ್ಟ್ ಮುಂದೆ ವರದಿಯನ್ನು ಬಹಿರಂಗಪಡಿಸಿದೆ.
ಇದನ್ನೂ ಓದಿ: ಗುಜರಾತ್‌ನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿತ; 35 ಮಂದಿ ಸಾವು
ಒರೆವಾ ಕಂಪನಿಯ ತಾಂತ್ರಿಕ ಮತ್ತು ಕಾರ್ಯಾಚರಣೆಯ ದೋಷಗಳು: ಎಸ್ಐಟಿ ವರದಿ
ಮೊರ್ಬಿ ಕೇಬಲ್ ಸೇತುವೆ ಮೇಲೆ ಯಾವುದೇ ನಿರ್ಬಂಧವಿರಲಿಲ್ಲ. ಇಷ್ಟೇ ಜನರು ಅಲ್ಲಿ ಹೋಗಬಹುದು ಎಂದು ಯಾವುದೇ ನಿಯಮ ಮಾಡಿರಲಿಲ್ಲ. ಸೇತುವೆಯನ್ನು ತೆರೆಯುವ ಮೊದಲು ಯಾವುದೇ ಫಿಟ್‌ನೆಸ್ ವರದಿಯನ್ನು ಸಿದ್ಧಪಡಿಸಲಾಗಿಲ್ಲ. ಈ ಬಗ್ಗೆ ಕಂಪನಿ ಪುರಸಭೆಯ ಗಮನಕ್ಕೆ ತಂದಿಲ್ಲ ಮತ್ತು ಟಿಕೆಟ್ ಮಾರಾಟಕ್ಕೆ ಯಾವುದೇ ನಿರ್ಬಂಧವಿರಲಿಲ್ಲ. ಇನ್ನು ಸೇತುವೆಯಲ್ಲಿ ಯಾವುದೇ ಸುರಕ್ಷಿತ ಕ್ರಮಗಳು ಇರಲಿಲ್ಲ ಹಾಗೂ ಭದ್ರತಾ ಸಿಬ್ಬಂದಿಗಳ ಕೊರತೆ ಇತ್ತು ಎಂದು ಹೇಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ