Puducherry: ಪುದುಚೇರಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನವನ್ನು ನೀಡುವ ನಿರ್ಣಯ ಅಂಗೀಕರಿಸಿದ ವಿಧಾನಸಭೆ
ಪುದುಚೇರಿ ವಿಧಾನಸಭೆಯು ನಿನ್ನೆ (ಮಾ.31) ರಂದು ಪುದುಚೇರಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನವನ್ನು ನೀಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.
ಪುದುಚೇರಿ: ಪುದುಚೇರಿ ವಿಧಾನಸಭೆಯು (Puducherry Assembly Constituency) ನಿನ್ನೆ (ಮಾ.31) ರಂದು ಪುದುಚೇರಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನವನ್ನು ನೀಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಕೇಂದ್ರಾಡಳಿತ ಪ್ರದೇಶಕ್ಕೆ (Union Territories) ರಾಜ್ಯ ರಚನೆಯ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಿರುವುದು ಇದು 14 ನೇ ಬಾರಿಯಾಗಿದೆ. ಮಾರ್ಚ್ 9 ರಂದು ಆರಂಭವಾದ ಪುದುಚೇರಿ ಬಜೆಟ್ ಅಧಿವೇಶನದ ಕೊನೆಯ ದಿನವಾದ ನಿನ್ನೆ (ಶುಕ್ರವಾರ) ವಿರೋಧ ಪಕ್ಷದ ನಾಯಕ ಶಿವ ಮತ್ತು ಪಕ್ಷೇತರ ಶಾಸಕ ನೆಹರು ಸೇರಿದಂತೆ ಡಿಎಂಕೆ ಶಾಸಕರು ನಿರ್ಣಯವನ್ನು ಮಂಡಿಸಿದರು.
ಆಡಳಿತಾರೂಢ ಎನ್‌ಆರ್ ಕಾಂಗ್ರೆಸ್ ಮತ್ತು ಬಿಜೆಪಿ (NDA) ಸಮಿಶ್ರ ಸರ್ಕಾರ, ಕಾಂಗ್ರೆಸ್, ಎಐಎಡಿಎಂಕೆ ಮತ್ತು ಪಕ್ಷೇತರ ಶಾಸಕರು ನಿರ್ಣಯಕ್ಕೆ ಒಮ್ಮತ ಸೂಚಿಸಿದರು. ಪುದುಚೇರಿ ರಾಜ್ಯದ ಎಲ್ಲ ಕಡತಗಳನ್ನು ಅಂತಿಮಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಗೃಹ ಸಚಿವಾಲಯಕ್ಕೆ ಮೌಖಿಕ ಆದೇಶ ನೀಡಿದ್ದು, ಎಲ್ಲ ಕಡತಗಳಿಗೆ ಶೀಘ್ರ ಅನುಮೋದನೆ ನೀಡಲಾಗುತ್ತಿದೆ ಎಂದು ಪುದುಚೇರಿ ಗೃಹ ಸಚಿವ ನಮಶಿವಾಯಂ ಹೇಳಿದ್ದಾರೆ.
ಪುದುಚೇರಿ ಕೇಂದ್ರಡಾಳಿತ ಪ್ರದೇಶವಾಗಿದ್ದರಿಂದ ಜನಪರವಾದ ಯೋಜನೆಗಳನ್ನು ಜಾರಿಗೆ ತರಲು ಕಷ್ಟವಾಗುತ್ತಿತ್ತು. ಆದೆರೆ ಈಗ ರಾಜ್ಯದ ಸ್ಥಾನಮಾನ ನೀಡುವುದರಿಂದ ಯೋಜನೆಗಳ ಅನುಷ್ಠಾಣಕ್ಕೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ರಂಗಸ್ವಾಮಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ