AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಸ್​ಕ್ರೀಂನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ, ಕಂಪನಿಯ ಪರವಾನಗಿ ರದ್ದು

ಐಸ್​ಕ್ರೀಂನಲ್ಲಿ ಮಾನವನ ಬೆರಳು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಪರವಾನಗಿಯನ್ನು ಎಫ್​ಎಸ್​ಎಸ್​ಎಐ ರದ್ದುಗೊಳಿಸಿದೆ. ಪುಣೆಯ ಮಲಾಡ್​ ವೆಸ್ಟ್​ನಲ್ಲಿ 26 ವರ್ಷದ ವೈದ್ಯರೊಬ್ಬರು ಆನ್​ಲೈನ್​ನಲ್ಲಿ ಐಸ್​ಕ್ರೀಂ ಕೋನ್​ ಆರ್ಡರ್​ ಮಾಡಿದ್ದರು, ಅದರ ಒಂದು ಕೋನ್​ನಲ್ಲಿ ಮಾನವನ ಬೆರಳು ಪತ್ತೆಯಾಗಿತ್ತು.

ಐಸ್​ಕ್ರೀಂನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ, ಕಂಪನಿಯ ಪರವಾನಗಿ ರದ್ದು
ಐಸ್​ಕ್ರೀಂ
Follow us
ನಯನಾ ರಾಜೀವ್
|

Updated on: Jun 17, 2024 | 9:16 AM

ಐಸ್​ಕ್ರೀಂ(Ice-Cream)ನಲ್ಲಿ ಮಾನವನ ಬೆರಳು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಪರವಾನಗಿಯನ್ನು ಎಫ್​ಎಸ್​ಎಸ್​ಎಐ ರದ್ದುಗೊಳಿಸಿದೆ. ಪುಣೆಯ ಮಲಾಡ್​ ವೆಸ್ಟ್​ನಲ್ಲಿ 26 ವರ್ಷದ ವೈದ್ಯರೊಬ್ಬರು ಆನ್​ಲೈನ್​ನಲ್ಲಿ ಐಸ್​ಕ್ರೀಂ ಕೋನ್​ ಆರ್ಡರ್​ ಮಾಡಿದ್ದರು, ಅದರ ಒಂದು ಕೋನ್​ನಲ್ಲಿ ಮಾನವನ ಬೆರಳು ಪತ್ತೆಯಾಗಿತ್ತು.

ಎಫ್​ಎಸ್​ಎಸ್​ಎಐ ಕಚೇರಿಯ ತಂಡವು ಕಂಪನಿಯ ಆವರಣವನ್ನು ಪರಿಶೀಲಿಸಿದೆ ಮತ್ತು ಪರವಾನಗಿ ರದ್ದುಗೊಳಿಸಿದೆ. ಆದರೆ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಇನ್ನಷ್ಟೇ ಬರಬೇಕಿದೆ. ಐಸ್​ಕ್ರೀಂ(Ice-Cream)ನಲ್ಲಿ ಮನುಷ್ಯನ ಬೆರಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ. ಮಲಾಡ್ ನಿವಾಸಿ ಡಾ.ಒರ್ಲಾಮ್ ಬ್ರಾಂಡನ್ ಸೆರಾವೊ ಅವರು ಆನ್‌ಲೈನ್‌ನಲ್ಲಿ ಐಸ್ ಕ್ರೀಮ್ ಆರ್ಡರ್ ಮಾಡಿದ್ದರು. ಅವರು ಬಹಳ ಆಸಕ್ತಿಯಿಂದ ಐಸ್​ಕ್ರೀಂ ತೆಗೆದು ನೋಡಿ ದಿಗ್ಭ್ರಮೆಗೊಂಡಿದ್ದಾರೆ. ಆ ಐಸ್​ಕ್ರೀಂನಲ್ಲಿ ಮಾನವನ ಬೆರಳು ಪತ್ತೆಯಾಗಿದ್ದು, ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಮೊದಲು ವಾಲ್ನಟ್​ ಎಂದುಕೊಂಡೆವು ಬಳಿಕ ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಇದು ಬೆರಳು ಎಂಬುದು ಅರಿವಾಗಿದೆ ಎಂದಿದ್ದಾರೆ. ನಾನು ಮೂರು ಐಸ್​ಕ್ರೀಂಗಳನ್ನು ಆರ್ಡರ್​ ಮಾಡಿದ್ದೆ, ನಾನು ಬಟರ್​ಸ್ಕಾಚ್​ ಐಸ್ಕ್ರೀಂ ತಿನ್ನುತ್ತಿದ್ದೆ ಆಗ ಇದ್ದಕ್ಕಿದ್ದಂತೆ ಹಲ್ಲಿಗೇನೋ ತಾಗಿದಂತಾಯಿತು ನಾನು ವಾಲ್ನಟ್ ಅಥವಾ ಚಾಕೊಲೇಟ್​ ಇರಬೇಕು ಎಂದುಕೊಂಡೆ, ಬಳಿಕ ಉಗುಳಿದಾಗ ಅದು ವಾಲ್ನಟ್ ಆಗಿರಲಿಲ್ಲ, ಮನುಷ್ಯನ ಬೆರಳಾಗಿದ್ದು, ಅದನ್ನು ನೋಡಿ ಒಮ್ಮೆ ದಿಗ್ಭ್ರಮೆಗೊಂಡೆ.

ನಾನು ವೈದ್ಯನಾಗಿರುವ ಕಾರಣ ಇದು ಹೆಬ್ಬರಳಿನ ಭಾಗ ಎಂಬುದು ನಾನು ಅರ್ಥಮಾಡಿಕೊಂಡೆ ಅದರಲ್ಲಿ ಉಗುರು ಕೂಡ ಇದೆ ಎಂದರು. ನಾನು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದೆ ಎಂದು ವೈದ್ಯ ಹೇಳಿದ್ದಾರೆ.

ಮತ್ತಷ್ಟು ಓದಿ: ಆನ್​ಲೈನ್​ ಮೂಲಕ ಆರ್ಡರ್​ ಮಾಡಿದ್ದ ಐಸ್​ಕ್ರೀಂನಲ್ಲಿ ಮನುಷ್ಯನ ಬೆರಳು ಪತ್ತೆ

ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ, ಐಸ್​​ಕ್ರೀಂ ಬ್ರ್ಯಾಂಡ್​ ವಿರುದ್ಧ ಕಲಬೆರಕೆ ಮತ್ತು ಜನರ ಜೀವಕ್ಕೆ ಅಪಾಯ ತಂದಿರುವ ಆರೋಪದಡಿ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಬೆರಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ, ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಐಸ್​ಕ್ರೀಂನಲ್ಲಿ ಬೆರಳು ಎಲ್ಲಿಂದ ಬಂತು ಎಂಬುದನ್ನೂ ಪತ್ತೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಐಸ್​ಕ್ರೀಂನಲ್ಲಿ ಜರಿ ಹುಳು ಪತ್ತೆ ಡೆಲಿವರಿ ಆ್ಯಪ್‌ನಿಂದ ಆರ್ಡರ್ ಮಾಡಿದ ಐಸ್ ಕ್ರೀಂ(Ice-Cream)ನಲ್ಲಿ ಜರಿಹುಳು(ಶತಪದಿ) ಪತ್ತೆಯಾಗಿದೆ. ವಿಷಯದ ಬಗ್ಗೆ ಮಾಹಿತಿ ಬಂದ ತಕ್ಷಣ, ಆಹಾರ ಮತ್ತು ಸರಬರಾಜು ಇಲಾಖೆ ತಂಡವು ಸೆಕ್ಟರ್ -22 ರಲ್ಲಿರುವ ಡೆಲಿವರಿ ಆಪ್ ಸ್ಟೋರ್‌ಗೆ ಭೇಟಿ ನೀಡಿದೆ. ಎಲ್ಲಾ ಐಸ್​ಕ್ರೀಂಗಳ ಮಾರಾಟವನ್ನು ನಿಷೇಧಿಸಿದೆ. ಐಸ್ ಕ್ರೀಂ ಮಾದರಿಯನ್ನು ಪರೀಕ್ಷಿಸಲಾಗುತ್ತದೆ. ಐಸ್ ಕ್ರೀಂ ತಯಾರಿಕಾ ಕಂಪನಿ ಮತ್ತು ಡೆಲಿವರಿ ಆ್ಯಪ್ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ದೀಪಾ ದೇವಿ ಅವರು ಮಕ್ಕಳಿಗೆ ಮ್ಯಾಂಗೋ ಶೇಕ್ ಮಾಡಲು ಡೆಲಿವರಿ ಅಪ್ಲಿಕೇಶನ್‌ನಿಂದ ಐಸ್‌ಕ್ರೀಂ ಆರ್ಡರ್ ಮಾಡಿದ್ದರು. ಐಸ್​ಕ್ರೀಂ ಮುಚ್ಚುಳ ತೆಗೆದ ತಕ್ಷಣ ಹುಳು ಕಾಣಿಸಿತ್ತು, ಆ್ಯಪ್‌ನ ಸಹಾಯವಾಣಿ ಸಂಖ್ಯೆಗೆ ದೂರು ನೀಡಿದ್ದಾರೆ. ಕಂಪನಿಯು ತನ್ನ ತಪ್ಪನ್ನು ಒಪ್ಪಿಕೊಂಡು, ಐಸ್​ಕ್ರೀಂ ಹಣವನ್ನು ಹಿಂದಿರುಗಿಸಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ