ಪುಣೆಯ ಕಲ್ಯಾಣಿನಗರದಲ್ಲಿ ನಡೆದ ಭೀಕರ ಅಪಘಾತ ದೇಶದದ್ಯಾಂತ ಸದ್ದು ಮಾಡಿದೆ. ಇದೀಗ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರ ಕ್ರಮವೇನು? ಆರೋಪಿ ವಿರುದ್ಧ ಯಾವೆಲ್ಲ ಕ್ರಮ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಅನುಮಾನ ಮೂಡಿದೆ. ಬಿಲ್ಡರ್ ಒಬ್ಬರ ಅಪ್ರಾಪ್ತ ಪುತ್ರ ವೇದಾಂತ್ ಅಗರ್ವಾಲ್ ಕುಡಿದ ಅಮಲಿನಲ್ಲಿ ಕಾರನ್ನು ಅತಿವೇಗದಲ್ಲಿ ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರು ದಂಪತಿಗಳ ಸಾವಿಗೆ ಕಾರಣನಾಗಿದ್ದಾನೆ. ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದರೆ. ಆದರೆ ಕೋರ್ಟ್ ಮೆಟ್ಟಿಲೇರುವ ಮುನ್ನವೇ ಆತನಿಗೆ ಜಾಮೀನು ಸಿಕ್ಕಿದೆ. ಇನ್ನು ಇತನಿಗೆ ಠಾಣೆಯಲ್ಲಿ ರಾಜ ಮಾರ್ಯದೆಯನ್ನು ಕೂಡ ನೀಡಲಾಗಿದೆ. ಪಿಜ್ಜಾ, ಬರ್ಗರ್ ಕೂಡ ನೀಡಿದ್ದರು ಎಂದು ಆರೋಪಿಸಲಾಗಿದೆ.
ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದು, ರಾಜಕೀಯ ಮುಖಂಡರೂ ಕೂಡ ಸರ್ಕಾರದ ವಿರೋಧ ಟೀಕಿಸಿದ್ದಾರೆ. ಪರಿಸ್ಥಿತಿಯನ್ನು ಕಂಡು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ. ಇದರ ಜತೆಗೆ ಬಾಲಕ ಹೋಗಿ ಮದ್ಯ ಸೇವಿಸಿದ ಪಬ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಪ್ರಾಪ್ತರೆಂದು ಗೊತ್ತಿದ್ದರೂ ಪಬ್ ಗೆ ಬಂದ ಮಕ್ಕಳಿಗೆ ಮದ್ಯ ನೀಡಿದ್ದು ಏಕೆ? ಎಂಬ ಪ್ರಶ್ನೆಯನ್ನು ಪಬ್ ವಿರುದ್ಧ ಮಾಡಲಾಗಿತ್ತು. ಇದೀಗ ಜಿಲ್ಲಾಧಿಕಾರಿ ಡಾ. ಸುಹಾಸ್ ದಿವಾಸೆ ಅವರ ಆದೇಶದ ಮೇರೆಗೆ ರಾಜ್ಯ ಅಬಕಾರಿ ಇಲಾಖೆ ಈ ಅಪ್ರಾಪ್ತ ವಯಸ್ಕರಿಗೆ ಆಲ್ಕೋಹಾಲ್ ಒದಗಿಸುವುದಕ್ಕೆ ಸಂಬಂಧಿಸಿದಂತೆ, ಪುಣೆ ನಗರದಲ್ಲಿರುವ ಹೋಟೆಲ್ ಟ್ರಿಲಿಯನ್ ಸೆಕ್ಯುರಿಟಿ ಪ್ರೈವೇಟ್ ಲಿಮಿಟೆಡ್ (COZI) ಮತ್ತು ಪಂಚಶೀಲ್ ಇನ್‌ಫ್ರಾಸ್ಟ್ರಕ್ಚರ್ (ಓಕ್ ವುಡ್) ಮ್ಯಾರಿಯಟ್ ಸೂಟ್-ಬ್ಲಾಕ್ ಮತ್ತು ಪರ್ಮಿಟ್ ರೂಮ್‌ಗಳು ಮತ್ತು ಪಬ್‌ಗಳನ್ನು ಮುಚ್ಚಿಸಲಾಗಿದೆ.
ಈ ಪ್ರಕರಣದ ನಂತರ ರಾಜ್ಯ ಅಬಕಾರಿ ಇಲಾಖೆಯು ಪುಣೆ ನಗರದ ಎಲ್ಲಾ ಪಬ್‌ಗಳು ಮತ್ತು ಇತರ ಪರ್ಮಿಟ್ ರೂಮ್‌ಗಳ ವಿಶೇಷ ತಪಾಸಣೆ ಅಭಿಯಾನವನ್ನು ಪ್ರಾರಂಭಿಸಿದೆ. ಎಲ್ಲ ಹೋಟೆಲ್, ಪಬ್ಗಳಿಗೆ ರಾಜ್ಯ ಅಬಕಾರಿ ಇಲಾಖೆ ಕೆಲವೊಂದು ಮಾರ್ಗಸೂಚಿಯನ್ನು ಹೊರಡಿಸಿದೆ.
1.ಪರವಾನಗಿ ಹೊಂದಿರುವ ಹೋಟೆಲ್‌ಗಳು, ಪಬ್‌ಗಳಲ್ಲಿ ಯಾವುದೇ ವಿದೇಶಿ ಮದ್ಯವನ್ನು ಅಪ್ರಾಪ್ತರಿಗೆ ಮಾರಾಟ ಮಾಡಬಾರದು.
2.ಮಧ್ಯರಾತ್ರಿ 1.30ರ ನಂತರ ಯಾವುದೇ ವಿದೇಶಿ ಮದ್ಯ ಮಾರಾಟ ಮಾಡಬಾರದು.
3. ಪಬ್, ಹೋಟೆಲ್ಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ದೋಗಿಗಳಿಂದ ರಾತ್ರಿ 9.30ರ ನಂತರ ಯಾವುದೇ ವಿದೇಶಿ ಮದ್ಯ ಪೂರೈಕೆ ಮಾಡಬಾರದು ಎಂದು ಹೇಳಿದೆ.
ಬಾಂಬೆ ನಿಷೇಧ ಕಾಯಿದೆ, 1949 ಮತ್ತು ಬಾಂಬೆ ವಿದೇಶಿ ಮದ್ಯದ ನಿಯಮಗಳು, 1953 ರ ಅಡಿಯಲ್ಲಿ ವಿವಿಧ ನಿಬಂಧನೆಗಳು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಹಾಗೂ ಮದ್ಯ ಮಾರಾಟಕ್ಕೆ ಸಂಬಂಧಪಟ್ಟ ಹೋಟೆಲ್‌ಗಳು, ಪಬ್‌ಗಳು ಮತ್ತು ಸಂಸ್ಥೆಗಳಿಗೆ ನೀಡಲಾದ ಪರವಾನಗಿಗಳನ್ನು ರದ್ದುಪಡಿಸಲಾಗುವುದು ಎಂದು ರಾಜ್ಯ ಅಬಕಾರಿ ಇಲಾಖೆಯ ಪುಣೆ ವಿಭಾಗೀಯ ಉಪ ಆಯುಕ್ತ ಸಾಗರ್ ಧೋಮ್ಕರ್ ತಿಳಿಸಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನ ವಿರುದ್ಧ ಕ್ರಮ ತೆಗೆದುಕೊಳ್ಳದೆ, ರಾಜ ಮಾರ್ಯದೆ ನೀಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ವಿರುದ್ಧ ಪಕ್ಷಗಳು ಆರೋಪಿಸಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ತಂದೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮೇಲೆ ಒತ್ತಡವನ್ನು ತರಬಹುದು. ಪೊಲೀಸರು ಈ ಪ್ರಕರಣದ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ. ಇದುವರೆಗೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ರವೀಂದ್ರ ಧಾಂಗೇಕರ ಗಂಭೀರ ಆರೋಪ ಮಾಡಿದ್ದಾರೆ. ಪುಣೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣದಿಂದಾಗಿ ಮಹಾರಾಷ್ಟ್ರದಲ್ಲಿ ಗೊಂದಲದ ವಾತಾವರಣ ಇದೆ ಎಂದು ಹೇಳಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಂಡಿಲ್ಲ. ನ್ಯಾಯಾಧೀಶರು ತಮ್ಮದೇ ಆದ ನಾಲ್ಕು ಷರತ್ತು ಮತ್ತು ಶಿಕ್ಷೆಯನ್ನು ವಿಧಿಸುತ್ತಾರೆಯೇ? ಪೊಲೀಸರು ತನಿಖೆಯಲ್ಲಿ ತಪ್ಪು ಮಾಡಿದ್ದಾರೆ. ಈ ಪ್ರಕರಣವನ್ನು ಮುಚ್ಚಲು ಪೊಲೀಸರು ಹಣ ಪಡೆದುಕೊಂಡಿದ್ದಾರೆ. ಆತನಿಗೆ ಎಲ್ಲ ರೀತಿಯ ರಾಜ ಮಾರ್ಯದೆಗಳನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಕಾರು ಅಪಘಾತಕ್ಕೂ ಮುನ್ನ ಪಬ್ನಲ್ಲಿ 90 ನಿಮಿಷಗಳಲ್ಲಿ 48 ಸಾವಿರ ರೂ. ಖರ್ಚು ಮಾಡಿದ್ದ ಬಾಲಕ
ದೇಶದದ್ಯಾಂತ ಈ ಪ್ರಕರಣದ ಬಗ್ಗೆ ವಿರೋಧ ವ್ಯಕ್ತವಾದ ನಂತರ, ಪೊಲೀಸರು ಆರೋಪಿಯ ಮೇಲೆ ಕೆಲವೊಂದು ಕ್ರಮವನ್ನು ತೆಗೆದುಕೊಂಡಿದ್ದಾರೆ. ಈಗಾಗಲೇ ಆರೋಪಿ ಬಾಲಕನಿಗೆ 17 ವರ್ಷ ತುಂಬಿದ್ದು. ಆತನಿಗೆ 25 ವರ್ಷ ತುಂಬವವರೆಗೆ ಡ್ರೈವಿಂಗ್ ಲೈಸೆನ್ಸ್ ನೀಡಲಾಗುವುದಿಲ್ಲ. ಅಪ್ರಾಪ್ತ ವಯಸ್ಕನು ಮದ್ಯಪಾನ ಮಾಡಲು ಹೋಗಿದ್ದ ಬಾರ್‌ನಿಂದ 48,000 ರೂ ಹಣವನ್ನು ಪಡೆದುಕೊಳ್ಳಲಾಗಿದೆ. ಇನ್ನು ಪೋರ್ಷೆ ಕಾರಿನ 1758 ರೂ. ಶುಲ್ಕ ಬಾಕಿದ್ದು, ಆ ಕಾರಿನ ನೋಂದಣಿಯನ್ನು ಶಾಶ್ವತವಾಗಿ ಬಾಕಿ ಉಳಿಸಿಕೊಳ್ಳಲಾಗಿದೆ.
ಪುಣೆ ಪೋರ್ಷೆ ಅಪಘಾತ ಪ್ರಕರಣದ ಆರೋಪಿ ಕುಟುಂಬ ಮತ್ತು ಭೂಗತ ಪಾತಕಿ ಛೋಟಾ ರಾಜನ್ ನಡುವೆ ಸಂಪರ್ಕವಿದೆ ಎಂಬ ಮಾಧ್ಯಮ ವರದಿಗಳು ಹೇಳಿದೆ. ಪುಣೆ ಮಿರರ್‌ನ ವರದಿಯ ಪ್ರಕಾರ ಆರೋಪಿಯ ಅಜ್ಜ ಕೌಟುಂಬಿಕ ಆಸ್ತಿ ವಿವಾದದಲ್ಲಿ ಛೋಟಾ ರಾಜನ್‌ನಿಂದ ನೆರವು ಕೋರಿದ್ದರು. ಅಜ್ಜ ಸುರೇಂದ್ರ ಕುಮಾರ್ ಅಗರ್ವಾಲ್ ಆಗಿನ ಕಾರ್ಪೊರೇಟರ್ ಅಜಯ್ ಭೋಸ್ಲೆ ಅವರನ್ನು ಕೊಲ್ಲಲು ಛೋಟಾ ರಾಜನ್ಗೆ ಸೂಪರಿ ನೀಡಿದ್ದರು ಎಂದು ಹೇಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ