ಪಂಜಾಬ್: ಉಂಡ ಮನೆಗೆ ಕನ್ನ, ಅಮಲು ಪದಾರ್ಥ ನೀಡಿ ಮಾಜಿ ಸಚಿವರ ಮನೆಯಿಂದ ಚಿನ್ನ, ಹಣ ದೋಚಿದ ಕೆಲಸಗಾರ

|

Updated on: Sep 18, 2023 | 4:49 PM

ಪಂಜಾಬ್​​​ನ ಮಾಜಿ ಸಚಿವರೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ದರೋಡೆ ಮಾಡಿರುವ ಘಟನೆ ನಡೆದಿದೆ. ಲೂಧಿಯಾನದ ಪಖೋವಾಲ್ ರಸ್ತೆಯ ಮಹಾರಾಜ ರಂಜಿತ್ ಸಿಂಗ್ ನಗರದಲ್ಲಿರುವ ಮಾಜಿ ಸಚಿವ ಜಗದೀಶ್ ಗರ್ಚಾ ಅವರ ಮನೆಯಲ್ಲಿ ಕಳ್ಳತನವಾಗಿದೆ. ಇನ್ನು ಈ ಕಳ್ಳತನ ಮಾಡಿದ್ದು ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಎಂದು ಹೇಳಲಾಗಿದೆ.

ಪಂಜಾಬ್: ಉಂಡ ಮನೆಗೆ ಕನ್ನ, ಅಮಲು ಪದಾರ್ಥ ನೀಡಿ ಮಾಜಿ ಸಚಿವರ ಮನೆಯಿಂದ ಚಿನ್ನ, ಹಣ ದೋಚಿದ ಕೆಲಸಗಾರ
ಪಂಜಾಬ್​​​ನ ಮಾಜಿ ಸಚಿವರೊಬ್ಬರ ಮನೆಯಲ್ಲಿ ದರೋಡೆ
Follow us on

ಲೂಧಿಯಾನ, ಸೆ.18: ಉಂಡ ಮನೆಗೆ ಕನ್ನ ಹಾಕಿದ ಮನೆ ಕೆಲಸದ ವ್ಯಕ್ತಿ, ಹೌದು ಪಂಜಾಬ್​​​ನ ಮಾಜಿ ಸಚಿವರೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ದರೋಡೆ ಮಾಡಿರುವ ಘಟನೆ ನಡೆದಿದೆ. ಲೂಧಿಯಾನದ ಪಖೋವಾಲ್ ರಸ್ತೆಯ ಮಹಾರಾಜ ರಂಜಿತ್ ಸಿಂಗ್ ನಗರದಲ್ಲಿರುವ ಮಾಜಿ ಸಚಿವ ಜಗದೀಶ್ ಗರ್ಚಾ ಅವರ ಮನೆಯಲ್ಲಿ ಕಳ್ಳತನವಾಗಿದೆ. ಇನ್ನು ಈ ಕಳ್ಳತನ ಮಾಡಿದ್ದು ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಎಂದು ಹೇಳಲಾಗಿದೆ. ತಡರಾತ್ರಿ ಮನೆಯವರಿಗೆಲ್ಲ ಅಮಲು ಪದಾರ್ಥ ನೀಡಿ ಪ್ರಜ್ಞಾಹೀನಗೊಳಿಸಿ ಎಲ್ಲವನ್ನು ದೋಚಿದ್ದಾನೆ ಎಂದು ಆರೋಪಿಸಲಾಗಿದೆ.

ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣದೊಂದಿಗೆ ಪರಾರಿಯಾಗಿದ್ದಾನೆ. ಇನ್ನು ಅಮಲು ಪದಾರ್ಥ ಸೇವನೆ ಮಾಡಿದ ಪರಿಣಾಮ ಜಗದೀಶ್ ಗಾರ್ಚಾ, ಅವರ ಪತ್ನಿ ಮತ್ತು ಮನೆಯ ಕೆಲಸಗಾರರು ಇನ್ನೂ ಪ್ರಜ್ಞಾಹೀನರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಜಗದೀಶ್ ಗಾರ್ಚಾ ಅವರು ಸ್ಥಿತಿ ಚಿಂತಾಜನಕವಾಗಿದೆ ಎಂದು ಬಿಜೆಪಿ ಮುಖಂಡ ಜಗಮೋಹನ್ ಶರ್ಮಾ ತಿಳಿಸಿದ್ದಾರೆ.

ಈ ಘಟನೆ ನಡೆದ ಮಾರನೇದಿನ ಬೆಳಿಗ್ಗೆ ಜಗದೀಶ್ ಗಾರ್ಚಾ ಅವರ ಮನೆಯಿಂದ ಯಾರು ಹೊರಗೆ ಬರದ ಕಾರಣ ಅನುಮಾನಗೊಂಡು ಸ್ಥಳೀಯರು ಅವರ ಮನೆಗೆ ಧಾವಿಸಿದಾಗ ಮನೆಯಲ್ಲಿರುವ ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಮನೆಯವರೆಲ್ಲ ಅಸ್ವಸ್ಥಗೊಂಡಿದ್ದರು. ಇನ್ನು ಜಗದೀಶ್ ಗಾರ್ಚಾ ಅವರ ಒಬ್ಬ ಮಗ ಬಾಬಿ ಗಾರ್ಚಾ ಮಾತ್ರ ಕೆಲಸದ ಮೇಲೆ ಹೊರಗೆ ಹೋಗಿದ್ದರು. ಈ ಬಗ್ಗೆ ಸ್ಥಳೀಯರು ಬಾಬಿ ಗಾರ್ಚಾ ಅವರಿಗೆ ತಿಳಿಸಿ, ಆಸ್ಪತ್ರೆಗೆ ಸಾಗಿದ್ದಾರೆ.

ಇದನ್ನೂ ಓದಿ:ಗ್ಯಾಂಗ್ ​​ಸ್ಟರ್​​ ಆಯೋಜಿಸಿದ ಪಾರ್ಟಿಯಲ್ಲಿ ಭಾಗಿಯಾದ 7 ಪೊಲೀಸರು ಅಮಾನತು

ಸ್ಥಳೀಯರು ಮತ್ತು ಜಗದೀಶ್ ಗಾರ್ಚಾ ಅವರ ಮಗ ಬಾಬಿ ಗಾರ್ಚಾ ಅವರು ಬೆಳಗ್ಗೆ ಸುಮಾರು 5 ರಿಂದ 6 ಬಾರಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿದರೂ ಯಾರೂ ಫೋನ್ ತೆಗೆಯಲಿಲ್ಲ. ಘಟನೆ ನಡೆದ ಸುಮಾರು 1 ಗಂಟೆ ಬಳಿಕ ಪೊಲೀಸರು ಸ್ಥಳಕ್ಕೆ ಬಂದಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆದು ದೂರು ದಾಖಲಿಸಿಕೊಂಡಿದ್ದಾರೆ. ಇದೀಗ ಪೊಲೀಸರು ತನಿಖೆ ಆರಂಭಿಸಿದರೆ. ತನಿಖಾ ವರದಿಗಳ ಪ್ರಕಾರ ಜಗದೀಶ್ ಗಾರ್ಚಾ ಅವರ ಮನೆಯಲ್ಲಿ ದರೋಡೆ ಮಾಡಿರುವ ಕೆಲಸಗಾರನ್ನು 3 ತಿಂಗಳ ಹಿಂದೆ ಮನೆಗೆಲಸಕ್ಕೆಂದು ಸೇರಿಕೊಂಡಿದ್ದರು ಎಂದು ಹೇಳಲಾಗಿದೆ. ಇನ್ನು ಆತನನ್ನು ಪತ್ತೆ ಮಾಡಲು ಯಾವುದೇ ದಾಖಲೆಗಳು ಅಥವಾ ಫೋಟೋ ಕೂಡ ಇಲ್ಲ ಎಂದು ಹೇಳಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Mon, 18 September 23