ಡ್ರಗ್ ಪ್ರಕರಣ: ಎಸ್ಎಡಿ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾಗೆ ಮಧ್ಯಂತರ ಜಾಮೀನು
Bikram Singh Majithia ಬಿಕ್ರಮ್ ಸಿಂಗ್ ಮಜಿಥಿಯಾ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಅವರು ನಾಡಿದ್ದು ಬೆಳಗ್ಗೆ 11 ಗಂಟೆಗೆ ಎಸ್‌ಐಟಿ ಮುಂದೆ ತನಿಖೆಗೆ ಹಾಜರಾಗಲಿದ್ದಾರೆ. ಇದು ರಾಜಕೀಯ ದ್ವೇಷ ಎಂದು ಚಂಡೀಗಢದಲ್ಲಿ ಅವರ ವಕೀಲ ಡಿಎಸ್ ಸೋಬ್ತಿ ಹೇಳಿದ್ದಾರೆ.
ಚಂಡೀಗಢ: ಶಿರೋಮಣಿ ಅಕಾಲಿ ದಳ (SAD) ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ (Bikram Singh Majithia) ಅವರಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೋಮವಾರ ಮಧ್ಯಂತರ ಜಾಮೀನು ( interim bail) ಮಂಜೂರು ಮಾಡಿದೆ. ಈ ಪ್ರಕರಣದ ವಿವರವಾದ ಆದೇಶವನ್ನು ಹೈಕೋರ್ಟ್ ಇನ್ನೂ ಬಿಡುಗಡೆ ಮಾಡಬೇಕಾಗಿದೆ. ಮಾದಕವಸ್ತು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮಜಿಥಿಯಾ ವಿರುದ್ಧ ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಹೈಕೋರ್ಟ್ ಮುಂದೆ ನಿರೀಕ್ಷಣಾ ಜಾಮೀನು ಕೋರಿದ ಮಜಿಥಿಯಾ ಅವರ ವಕೀಲರು, ತಮ್ಮ ಕಕ್ಷಿದಾರರನ್ನು ಗುರಿಯಾಗಿಸಿದ್ದು ಸರ್ಕಾರದ ಪ್ರಮುಖ ಚುನಾವಣಾ ಯೋಜನೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರ್ಜಿದಾರರ ವಿರುದ್ಧ ಪ್ರಸ್ತುತ ಎಫ್‌ಐಆರ್ ದಾಖಲಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಅರ್ಜಿದಾರರ ಮೂಲಭೂತ ಹಕ್ಕುಗಳು ಅಪಾಯದಲ್ಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಡಿಸೆಂಬರ್ 20 ರಂದು ಮಜಿಥಿಯಾ ವಿರುದ್ಧ ಪ್ರಕರಣವನ್ನು 25 (ಅಪರಾಧದ ಬಳಸಲು ಆವರಣ, ಇತ್ಯಾದಿಗಳನ್ನು ಅನುಮತಿಸುವುದು), 27 ಎ (ಅಕ್ರಮ ಸಂಚಾರಕ್ಕೆ ಹಣಕಾಸು ಒದಗಿಸುವುದು ಮತ್ತು ಅಪರಾಧಿಗಳಿಗೆ ಆಶ್ರಯ ನೀಡುವುದು) ಮತ್ತು ಸೆಕ್ಷನ್ 29 (ಪ್ರಚೋದನೆ ಮತ್ತು ಕ್ರಿಮಿನಲ್ ಪಿತೂರಿ), ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (NDPS) ಕಾಯಿದೆ 1985 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಎನ್‌ಡಿಪಿಎಸ್‌ನ ಸೆಕ್ಷನ್ 27 ರ ಅಡಿಯಲ್ಲಿ ಮಾಡಿದ ಅಪರಾಧಗಳು ಜಾಮೀನು ರಹಿತವಾಗಿವೆ. ಮೊಹಾಲಿ ನ್ಯಾಯಾಲಯವು ಮಜಿಥಿಯಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಮೊರೆ ಹೋಗಿದ್ದರು, ಅಲ್ಲಿ ಅವರ ಅರ್ಜಿಯನ್ನು ಜನವರಿ 10 ರಂದು ಮತ್ತೆ ವಿಚಾರಣೆ ನಡೆಸಲಾಗುವುದು.
ಮಜಿಥಿಯಾ ವಿರುದ್ಧ ಕೇಸು ದಾಖಲಾಗಿ ಸುಮಾರು ಹದಿನೈದು ದಿನಗಳ ನಂತರ, ಮಾಜಿ ಸಚಿವರು ಗೋಲ್ಡನ್ ಟೆಂಪಲ್‌ಗೆ ಪೂಜೆ ಸಲ್ಲಿಸಿದ ಫೋಟೋಗಳು ಜನವರಿ 2 ರಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪಂಜಾಬ್‌ನಲ್ಲಿ ರಾಜಕೀಯದಲ್ಲಿ ಬಿರುಗಾಳಿಯನ್ನು ಹುಟ್ಟುಹಾಕಿತ್ತು. ಇದರ ನಂತರ, ಚರಣ್ ಜಿತ್ ಸಿಂಗ್ ಚನ್ನಿ ನೇತೃತ್ವದ ಪ್ರಸ್ತುತ ಸರ್ಕಾರವು ಮಜಿಥಿಯಾನನ್ನು ಬಂಧಿಸಲು ವಿಫಲವಾದ ಕಾರಣಕ್ಕಾಗಿ ಟೀಕೆಗೊಳಗಾಯಿತು. ಪೋಲೀಸ್ ಅಧಿಕಾರಿಗಳು ಫೋಟೋಗಳು ಹೊಸದೋ ಅಥವಾ ಹಳೆಯದೋ ಎಂಬ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿತ್ತು.
Bikram Singh Majithia has been granted interim bail. He will be joining the investigation the day after tomorrow at 11 am before the SIT… It is a political vendetta: His lawyer DS Sobti in Chandigarh pic.twitter.com/K6Kk4S0Oyz
— ANI (@ANI) January 10, 2022
ಬಿಕ್ರಮ್ ಸಿಂಗ್ ಮಜಿಥಿಯಾ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಅವರು ನಾಡಿದ್ದು ಬೆಳಗ್ಗೆ 11 ಗಂಟೆಗೆ ಎಸ್‌ಐಟಿ ಮುಂದೆ ತನಿಖೆಗೆ ಹಾಜರಾಗಲಿದ್ದಾರೆ. ಇದು ರಾಜಕೀಯ ದ್ವೇಷ ಎಂದು ಚಂಡೀಗಢದಲ್ಲಿ ಅವರ ವಕೀಲ ಡಿಎಸ್ ಸೋಬ್ತಿ ಹೇಳಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ದಂಧೆ ಪ್ರಕರಣ; ಅಕಾಲಿದಳದ ನಾಯಕ, ಪಂಜಾಬ್ ಮಾಜಿ ಸಚಿವ ಮಜಿಥಿಯಾ ವಿರುದ್ಧ ಕೇಸ್ ದಾಖಲು