ಬ್ರಿಟನ್ ರಾಜಕುಮಾರ ಮದುವೆಯಾಗುವ ಭರವಸೆ ನೀಡಿ ಮೋಸ ಮಾಡಿದ್ದಾರೆ; ಪಂಜಾಬ್ ಮಹಿಳೆ ಅರ್ಜಿ ವಜಾ ಮಾಡಿದ ಕೋರ್ಟ್

|

Updated on: Apr 13, 2021 | 4:16 PM

ಪ್ರಿನ್ಸ್​ ಹ್ಯಾರಿ ಒಂದು ರಾಜಮನೆತನದ ಆಡಳಿತವನ್ನು ನೋಡಿಕೊಳ್ಳುತ್ತಿದ್ದಂತೆ ಪಂಜಾಬ್ ಮಹಿಳೆಯೋರ್ವಳು ನನ್ನನ್ನು ಮದುವೆಯಾಗಿತ್ತೇನೆ ಎಂದು ಭರವಸೆ ನೀಡಿದ್ದರು ಎಂಬುದಾಗಿ ಸಲ್ಲಿಸಿದ್ದ ವಿಲಕ್ಷಣ ಅರ್ಜಿಯನ್ನು ಕೋರ್ಟ್​ ರದ್ದುಗೊಳಿಸಿದೆ.

ಬ್ರಿಟನ್ ರಾಜಕುಮಾರ ಮದುವೆಯಾಗುವ ಭರವಸೆ ನೀಡಿ ಮೋಸ ಮಾಡಿದ್ದಾರೆ; ಪಂಜಾಬ್ ಮಹಿಳೆ ಅರ್ಜಿ ವಜಾ ಮಾಡಿದ ಕೋರ್ಟ್
ಪ್ರಿನ್ಸ್ ಹ್ಯಾರಿ
Follow us on

ಚಂಡೀಗಡ: ಬ್ರಿಟೀಷ್ ರಾಜಕುಮಾರ ಪ್ರಿನ್ಸ್​ ಹ್ಯಾರಿ ತನ್ನನ್ನು ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ್ದರು ಎಂಬುದಾಗಿ  ಪಂಜಾಬ್ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಹರ್ಯಾಣ ಮತ್ತು ಪಂಜಾಬ್ ಹೈಕೋರ್ಟ್​ ರದ್ದುಗೊಳಿಸಿದೆ. ರಾಜಕುಮಾರ ಹ್ಯಾರಿ ತನ್ನನ್ನು ಮದುವೆಯಾಗುವುದಾಗಿ ಭಾಷೆ ನೀಡಿದ್ದರು ಎಂದು ವಕೀಲೆ ಪಾಲ್ವಿಂದರ್ ಕೌರ್ ಇತ್ತೀಚೆಗೆ ಇತ್ತೀಚೆಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್​ನಲ್ಲಿ ಅರ್ಜಿ  ಸಲ್ಲಿಸಿದ್ದರು. ಈ ವಿಲಕ್ಷಣ ಪ್ರಕರಣವನ್ನು ಹೈಕೋರ್ಟ್ ಕೈಗೆತ್ತಿಕೊಂಡು, ವಕೀಲೆಯ ಅರ್ಜಿಯನ್ನು ವಜಾಗೊಳಿಸಿದೆ.

ಎಂ.ಎಸ್. ಕೌರ್ ಯುನೈಟೆಡ್ ಕಿಂಗ್ಡಮ್​ನ ನಿವಾಸಿ ಪ್ರಿನ್ಸ್ ಚಾರ್ಲ್ಸ್​ ಮಿಡಲ್ಟನ್ ಅವರ ಪುತ್ರ ಪ್ರಿನ್ಸ್ ಹ್ಯಾರಿ ಮಿಡಲ್ಟನ್ ವಿರುದ್ಧ ಕ್ರಮಕೈಗೊಳ್ಳಲು ಯುನೈಟೆಡ್ ಕಿಂಗ್ಡಮ್ ಪೊಲೀಸರಿಗೆ ನ್ಯಾಯ ಒದಗಿಸುವಂತೆ ಕೋರಿದ್ದರು. ರಾಜಕುಮಾರ ಹ್ಯಾರಿಯನ್ನು ಬಂಧಿಸುವಂತೆಯೂ ಮಹಿಳೆ ಅರ್ಜಿಯಲ್ಲಿ ಕೇಳಿಕೊಂಡಿದ್ದರು.

ನೀವು ಎಂದಾದರೂ ಬ್ರಿಟನ್‌ಗೆ ಪ್ರಯಾಣಿಸಿದ್ದೀರಾ ಎಂದು ನ್ಯಾಯಾಲಯ ಮಹಿಳೆಯನ್ನು ಪ್ರಶ್ನಿಸಿದಾಗ, ಸಾಮಾಜಿಕ ಮಾಧ್ಯಮದ ಮೂಲಕ ರಾಜಕುಮಾರರೊಂದಿಗೆ ಸಂವಹನ ನಡೆಸುತ್ತಿದ್ದೆ. ಆದರೆ, ಇಂಗ್ಲೆಂಡ್​ಗೆ ಹೋಗಿಲ್ಲ ಎಂದು ಹೇಳಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಐಡಿಗಳನ್ನು ಸೃಷ್ಟಿಸಿ ಸಂದೇಶ ಕಳುಹಿಸುತ್ತಾರೆ. ಫೇಸ್‌ಬುಕ್ ಮತ್ತು ಟ್ವಿಟರ್‌ನಂತಹ ಸೈಟ್‌ಗಳಲ್ಲಿ ರಚಿಸಲಾದ ನಕಲಿ ಐಡಿಗಳೊಂದಿಗೆ ಸಂಭಾಷಣೆ ನಡೆಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಂದೇಶಗಳ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಇಂಗ್ಲೆಂಡ್ ರಾಜಕುಮಾರನು ಸಾಮಾನ್ಯ ಮಹಿಳೆಯನ್ನು, ಸಾಮಾಜಿಕ ಜಾಲತಾಣದಲ್ಲಿ ಸಂವಹನ ನಡೆಸಿ, ಮದುವೆಯಾಗುತ್ತೇನೆ ಎನ್ನುವುದು ಹಾಗೂ ಅದನ್ನು ನಂಬುವುದು ಹಗಲುಗನಸಿನ ಕಲ್ಪನೆ ಅಷ್ಟೇ. ಇಂತಹ ಮನವಿಗಳನ್ನು ಸಲ್ಲಿಸುವುದರಲ್ಲಿ  ಜ್ಞಾನದ ಕೊರತೆಯೂ ಇದೆ ಎಂದು ನ್ಯಾಯಮೂರ್ತಿ ಅರವಿಂದ್ ಸಿಂಗ್ ಸಾಂಗ್ವಾನ್ ತಿಳಿಸಿದ್ದಾರೆ. ಫೇಕ್ ಸಂವಹನದ ವಿಚಾರವನ್ನು ಮಹಿಳೆ ನಿಜವೆಂದು ನಂಬಿರುವುದಕ್ಕೆ ನಮಗೆ ವಿಷಾದವಿದೆ ಎಂದು ಕೋರ್ಟ್ ತಿಳಿಸಿದ್ದು, ವಕೀಲೆ ಪಾಲ್ವಿಂದರ್ ಕೌರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಸಾಮಾಜಿಕ ಜಾಲತಾಣದ ಸಂವಹನದ ಪ್ರಿಂಟೌಟ್​ಗಳನ್ನು ಹಿಡಿದು ವಾದ ಮಾಡುವುದು ಸಾಧ್ಯವಿಲ್ಲ. ಅದು ಫೇಕ್ ಖಾತೆಯೊಂದಿಗೆ ನಡೆದಿರುವ ಸಂಭಾಷಣೆ ಆಗಿರುವ ಸಾಧ್ಯತೆಯೂ ಬಹಳಷ್ಟಿದೆ. ಈ ಬಗ್ಗೆ ಬಳಕೆದಾರರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗೆ ಕಾದಿದ್ಯಾ ಮತ್ತೊಂದು ಗಂಡಾಂತರ.. ಬ್ರಿಟನ್‌ ಭೂತ ಆಯ್ತು.. ಈಗ ಬ್ರೆಜಿಲ್‌ ಕಂಟಕ..

Published On - 4:14 pm, Tue, 13 April 21