ಅಮೃತಸರ: ಪಂಜಾಬ್‌ನ ಅಮೃತಸರದ ಪಂಜ್‌ಗ್ರಾಹಿಯನ್ ಗಡಿಯ ಹೊರವಲಯದಲ್ಲಿ ಮಂಗಳವಾರ ತಡರಾತ್ರಿ ಡ್ರೋನ್ (Drone Attack) ಮೂಲಕ ಸ್ಫೋಟಕಗಳನ್ನು ಎಸೆಯಲಾಗಿದ್ದು, ಭಾರತೀಯ ಗಡಿ ಭದ್ರತಾ ಪಡೆಯ (BSF) ಯೋಧರು ಭಯೋತ್ಪಾದಕರ ಸ್ಫೋಟ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ. ಸ್ಫೋಟಕಗಳು ಕೆಳಗೆ ಬೀಳುತ್ತಿದ್ದಂತೆ ಕೂಡಲೇ ಎಚ್ಚೆತ್ತ ಯೋಧರು ಡ್ರೋನ್‌ನತ್ತ ಗುಂಡು ಹಾರಿಸಿದ್ದಾರೆ. ಬಳಿಕ ಆ ಡ್ರೋನ್ ಪಾಕಿಸ್ತಾನದ ಕಡೆಗೆ ಹಾರಿತು. ಈ ಘಟನೆಯ ನಂತರ, ತಕ್ಷಣವೇ ಬಿಎಸ್‌ಎಫ್ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದು, ಎರಡು ಸ್ಥಳಗಳಲ್ಲಿ ಸ್ಫೋಟಕಗಳು ಮತ್ತು ಪಿಸ್ತೂಲ್ ಪತ್ತೆಯಾಗಿದೆ.
ನಿನ್ನೆ ತಡರಾತ್ರಿ ಪಂಜಾಬ್‌ನ ಅಮೃತಸರದ ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರೋನ್ ಕಾಣಿಸಿಕೊಂಡಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಈ ಕುರಿತು ತ್ವರಿತ ಕ್ರಮ ಕೈಗೊಂಡು, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಡ್ರೋನ್‌ಗೆ ಗುಂಡು ಹಾರಿಸಿದ ನಂತರ ಅದು ಪಾಕಿಸ್ತಾನದ ಕಡೆಗೆ ತೆರಳಿದೆ.
Punjab | Today at about 12:50 am, troops in Panjgrain heard buzzing of suspected flying object coming from Pakistan side to India. Troops fired upon the drone. During search in village Ghaggar & Singhoke, 2 packets of yellow colour with suspected contraband recovered so far: BSF pic.twitter.com/sir6M1oJzZ
— ANI (@ANI) February 9, 2022
ಮಂಗಳವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಪಾಕಿಸ್ತಾನದ ಕಡೆಯಿಂದ ಭಾರತದ ಕಡೆಗೆ ಬರುವ ಡ್ರೋನ್ನ ಶಬ್ದ ಕೇಳಿದ ನಂತರ ಸೇನಾ ಪಡೆ ಸಿಬ್ಬಂದಿ ಡ್ರೋನ್‌ನತ್ತ ಗುಂಡು ಹಾರಿಸಿದವು ಎಂದು ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗ್ರಾಮ ಘಗ್ಗರ್ ಮತ್ತು ಸಿಂಗೊಕೆ ಪ್ರದೇಶದಲ್ಲಿ ನಡೆಸಿದ ಶೋಧ ಕಾರ್ಯದ ವೇಳೆ ಹಳದಿ ಬಣ್ಣದ ಎರಡು ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಡ್ರೋನ್ನಿಂದಲೇ ಆ ಪ್ಯಾಕೆಟ್‌ಗಳನ್ನು ಬೀಳಿಸಿರುವ ಶಂಕೆ ಇದೆ ಎಂದು ಅವರು ಹೇಳಿದ್ದಾರೆ.
ಕೆಳಗೆ ಬಿದ್ದಿದ್ದ ಪ್ಯಾಕೆಟ್‌ನಲ್ಲಿ ಪಿಸ್ತೂಲ್ ಸುತ್ತಿಕೊಂಡಿರುವುದು ಕಂಡುಬಂದಿದ್ದು, ಗಡಿಯ ಬೇಲಿಯಿಂದ ಸುಮಾರು 2.7 ಕಿಮೀ ದೂರದಲ್ಲಿ ಈ ವಸ್ತು ಕಂಡುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಭಾರತಕ್ಕೆ ಸ್ಫೋಟಕಗಳು, ಶಸ್ತ್ರಾಸ್ತ್ರಗಳು, ನಗದು ಮತ್ತು ಮಾದಕವಸ್ತುಗಳನ್ನು ಕಳುಹಿಸಲು ಗಡಿಯಾಚೆಗಿನ ಭಯೋತ್ಪಾದಕ ಸಂಘಟನೆಗಳು ಡ್ರೋನ್‌ಗಳನ್ನು ನಿಯಮಿತವಾಗಿ ಬಳಸುತ್ತವೆ. ಭದ್ರತಾ ಪಡೆಗಳು ಹೆಚ್ಚು ಜಾಗರೂಕರಾಗಿದ್ದಾರೆ. ಆಗಾ ಭಾರತದ ಗಡಿಗಳಲ್ಲಿ ಡ್ರೋನ್ ವಿರೋಧಿ ಚಟುವಟಿಕೆಗಳು ನಡೆಯುತ್ತಲೇ ಇವೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಸುಮಾರು 3.30 ಕಿ.ಮೀ ಉದ್ದದ ಗಡಿ ಇದೆ. ಪಂಜಾಬ್, ರಾಜಸ್ಥಾನ, ಗುಜರಾತ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳು ಪಾಕಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿವೆ.
ಇದನ್ನೂ ಓದಿ: Ahmedabad Blast Case: 2008ರ ಅಹಮದಾಬಾದ್ ಬಾಂಬ್ ಸ್ಫೋಟ ಪ್ರಕರಣ; 49 ಆರೋಪಿಗಳಿಗೆ ಶಿಕ್ಷೆ, 28 ಆರೋಪಿಗಳು ಖುಲಾಸೆ
ಕೆನಡಾ-ಅಮೆರಿಕ ಗಡಿ ಬಳಿ ತೀವ್ರ ಚಳಿಗೆ ಸಿಲುಕಿ ಸಾವಿಗೀಡಾದ ಭಾರತೀಯ ಕುಟುಂಬದ ಗುರುತು ಪತ್ತೆ
Published On - 1:22 pm, Wed, 9 February 22