ಪಂಜಾಬ್ ಸರ್ಕಾರದ ಕಾರ್ಯವೈಖರಿ ವಿರುದ್ಧ ಚಂಡೀಗಢದಲ್ಲಿ ಸೆಪ್ಟೆಂಬರ್ 2 ರಂದು ರೈತರ ಬೃಹತ್ ಸಭೆ
ಪಂಜಾಬ್ ಸರ್ಕಾರದ ಕಾರ್ಯವೈಖರಿ ವಿರುದ್ಧ ರೈತರು ಸೆಪ್ಟೆಂಬರ್ 2 ರಂದು ಬೃಹತ್ ಸಭೆ ನಡೆಸಲಿದ್ದಾರೆ. ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆ ಬಳಿಕ, ಯುನೈಟೆಡ್ ಕಿಸಾನ್ ಮೋರ್ಚಾದ ರೈತರು ಸಂಗ್ರೂರ್‌ನಲ್ಲಿ ಚರ್ಚೆ ನಡೆಸಿದರು ಮತ್ತು ಪಂಜಾಬ್ ಸರ್ಕಾರ ಮತ್ತು ಕೇಂದ್ರದ ವಿರುದ್ಧದ ತಂತ್ರವನ್ನು ರೂಪಿಸಲು ಸೆಪ್ಟೆಂಬರ್ 2 ರಂದು ಸಭೆ ನಡೆಸಲು ನಿರ್ಧರಿಸಿದ್ದಾರೆ.
ಪಂಜಾಬ್ ಸರ್ಕಾರದ ಕಾರ್ಯವೈಖರಿ ವಿರುದ್ಧ ರೈತರು ಸೆಪ್ಟೆಂಬರ್ 2 ರಂದು ಬೃಹತ್ ಸಭೆ ನಡೆಸಲಿದ್ದಾರೆ. ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆ ಬಳಿಕ, ಯುನೈಟೆಡ್ ಕಿಸಾನ್ ಮೋರ್ಚಾದ ರೈತರು ಸಂಗ್ರೂರ್‌ನಲ್ಲಿ ಚರ್ಚೆ ನಡೆಸಿದರು ಮತ್ತು ಪಂಜಾಬ್ ಸರ್ಕಾರ ಮತ್ತು ಕೇಂದ್ರದ ವಿರುದ್ಧದ ತಂತ್ರವನ್ನು ರೂಪಿಸಲು ಸೆಪ್ಟೆಂಬರ್ 2 ರಂದು ಸಭೆ ನಡೆಸಲು ನಿರ್ಧರಿಸಿದ್ದಾರೆ.
ಯುನೈಟೆಡ್ ಕಿಸಾನ್ ಮೋರ್ಚಾದ ರೈತರು ಚಂಡೀಗಢದಲ್ಲಿ ಸಭೆ ನಡೆಸಲಿದ್ದು, ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ವಿರುದ್ಧ ತಮ್ಮ ಕಾರ್ಯತಂತ್ರವನ್ನು ನಿರ್ಧರಿಸಲಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ರೈತ ಸಂಘ, ಪಂಜಾಬ್ ಸರ್ಕಾರ ನೀಡಿರುವ ಪರಿಹಾರದ ಮೊದಲ ಕಂತಿನ 186 ಕೋಟಿ ರೂ. ತೀರಾ ಕಡಿಮೆಯಿದ್ದು, ಈ ಹಣದಿಂದ ರಾಜ್ಯದ ರೈತರಿಗೆ ಸಹಾಯವಾಗುವುದಿಲ್ಲ, ಪಂಜಾಬ್ ಸರ್ಕಾರವು ಕೇಂದ್ರದಿಂದ ಹೆಚ್ಚಿನ ಪ್ಯಾಕೇಜ್‌ಗಳನ್ನು ಪಡೆಯಬೇಕು ಎಂದಿದ್ದಾರೆ.
ಮತ್ತಷ್ಟು ಓದಿ: Cauvery Water Dispute: ಶ್ರೀರಂಗಪಟ್ಟಣದ ಸ್ನಾನಘಟ್ಟದ ಬಳಿ ಕಾವೇರಿ ನದಿಗೆ ಇಳಿದು ರೈತರ ಪ್ರತಿಭಟನೆ
ಭಾರತೀಯ ಕಿಸಾನ್ ಯೂನಿಯನ್ (ಆಜಾದ್) ಲೊಂಗೊವಾಲ್ ಪೊಲೀಸ್ ಠಾಣೆಯ ಹೊರಗೆ ತನ್ನ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಮತ್ತು ರೈತರಿಗೆ ಪರಿಹಾರ ನೀಡುವವರೆಗೆ ಮೃತ ರೈತ ಪ್ರೀತಮ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ನಡೆಸುವುದಿಲ್ಲ ಎಂದು ಘೋಷಿಸಿದೆ.
ಏತನ್ಮಧ್ಯೆ, ಮಳೆ ಮತ್ತು ಪ್ರವಾಹದಿಂದ ತಾವು ಎದುರಿಸಿದ ನಷ್ಟಕ್ಕೆ ಪರಿಹಾರ ನೀಡುವಂತೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಚಂಡೀಗಢದತ್ತ ಹೊರಟಿದ್ದ ಹಲವಾರು ರೈತರನ್ನು ಅಂಬಾಲಾದಲ್ಲಿ ಹರಿಯಾಣ ಪೊಲೀಸರು ವಶಕ್ಕೆ ತೆಗೆದುಕೊಂಡರು.ರೈತರ ಪ್ರತಿಭಟನೆ ಹಿನ್ನಲೆಯಲ್ಲಿ ಪಂಜಾಬ್, ಚಂಡೀಗಢ ಮತ್ತು ಹರಿಯಾಣ ಗಡಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಜೊತೆಗೆ, ರೈತರು ಗಡಿ ದಾಟದಂತೆ ತಡೆಯಲು ಸಿಸಿಟಿವಿ ಮತ್ತು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಹಲವೆಡೆ ಗಲಭೆ ನಿಗ್ರಹ ವಾಹನಗಳನ್ನು ನಿಯೋಜಿಸಲಾಗಿತ್ತು.
ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ, ಭಾರತಿ ಕಿಸಾನ್ ಯೂನಿಯನ್ (ಕಾರಂತಿ ಕರಿ), ಬಿಕೆಯು (ಏಕ್ತಾ ಆಜಾದ್), ಆಜಾದ್ ಕಿಸಾನ್ ಸಮಿತಿ, ದೋಬಾ, ಬಿಕೆಯು (ಬೆಹ್ರಾಮ್‌ಕೆ) ಮತ್ತು ಭೂಮಿ ಬಚಾವೋ ಮೋಹಿಮ್ ಸೇರಿದಂತೆ 16 ರೈತ ಸಂಘಗಳು ಪ್ರತಿಭಟನೆ ನಡೆಸುತ್ತಿವೆ. ಪಂಜಾಬ್ ಸರ್ಕಾರವು ಪ್ರವಾಹದಿಂದ ಉಂಟಾದ ನಷ್ಟಕ್ಕೆ ಪರಿಹಾರವನ್ನು ಕೋರಿದೆ.
ಸೋಮವಾರ ಮುಂಜಾನೆ, ಲೊಂಗೊವಾಲ್ ಗ್ರಾಮದಲ್ಲಿ ರೈತರು ಮತ್ತು ಪಂಜಾಬ್ ಪೊಲೀಸ್ ಸಿಬ್ಬಂದಿ ನಡುವಿನ ಘರ್ಷಣೆಯಲ್ಲಿ ಪ್ರೀತಮ್ ಸಿಂಗ್ ಅವರು ಪ್ರಾಣ ಕಳೆದುಕೊಂಡರು ಮತ್ತು ಹಲವರು ಗಾಯಗೊಂಡರು. ಘರ್ಷಣೆಯ ನಂತರ, ಪಂಜಾಬ್ ಪೊಲೀಸರು 18 ರೈತರು ಮತ್ತು 35 ಮಂದಿ ವಿರುದ್ಧ ಕೊಲೆ ಯತ್ನ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಮತ್ತು ಕರ್ತವ್ಯದಲ್ಲಿದ್ದ ಸರ್ಕಾರಿ ನೌಕರನ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ