ಚಂಡೀಗಡ: ಪಂಜಾಬ್ನಲ್ಲಿ ಮಹಿಳಾ ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದನ್ನು ರಾಜ್ಯ ಸರ್ಕಾರ ನೀಡಿದೆ. ರಾಜ್ಯದೊಳಗೆ ಸಂಚರಿಸುವ ಎಲ್ಲಾ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ ಸೇವೆ ನೀಡುವುದಾಗಿ ಪಂಜಾಬ್ ಸರ್ಕಾರ ಇಂದು (ಮಾರ್ಚ್ 31) ಘೋಷಣೆ ಮಾಡಿದೆ. ಅದರಂತೆ ನಾಳೆಯಿಂದ (ಏಪ್ರಿಲ್ 1) ಎಲ್ಲಾ ಮಹಿಳಾ ಪ್ರಯಾಣಿಕರಿಗೆ ರಾಜ್ಯದೊಳಗೆ ಉಚಿತ ಬಸ್ ಸೌಲಭ್ಯ ಸಿಗಲಿದೆ. ಈ ಯೋಜನೆಯನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈ ತಿಂಗಳ ಆರಂಭದಲ್ಲಿ ಘೋಷಿಸಿದ್ದರು.
ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಬಗ್ಗೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಾರ್ಚ್ 5ರಂದು ವಿಧಾನಸಭೆಯಲ್ಲಿ ಘೋಷಿಸಿದ್ದರು. ಮಹಿಳಾ ಸಬಲೀಕರಣ ವಿಚಾರದಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದ್ದರು.
Women in Punjab get to travel free of cost in all Government-run buses within the state from Thursday, with the cabinet today stamping its formal approval on the scheme, announced by Chief Minister Captain Amarinder Singh earlier this month: Punjab Chief Minister’s Office (CMO)
— ANI (@ANI) March 31, 2021
ಈ ಯೋಜನೆಯಿಂದ ರಾಜ್ಯದ ಸುಮಾರು 1.31 ಕೋಟಿ ಮಹಿಳೆಯರಿಗೆ ಅನುಕೂಲವಾಗಲಿದೆ. 2011ರ ಜನಗಣತಿಯಂತೆ ಪಂಜಾಬ್ನಲ್ಲಿ 2.77 ಕೋಟಿ ಜನಸಂಖ್ಯೆ ಇದೆ. ಅದರಲ್ಲಿ 1,46,39,465 ಪುರುಷರು ಹಾಗೂ 1,31,03,873 ಮಹಿಳೆಯರಿದ್ದಾರೆ. ಈ ಮೊದಲು ದೆಹಲಿ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಿದ್ದನ್ನು ಇಲ್ಲಿ ನೆನೆಯಬಹುದು.
ಇದನ್ನೂ ಓದಿ: ಅಕ್ಕಪಕ್ಕದವರ ನೀರಿನ ಬವಣೆ ತೀರಿಸಲು ಈ ಮಹಿಳೆ ಮಾಡಿದ್ದು ಸಾಹಸಗಾಥೆ! ಎರಡು ಬಾವಿ ತೋಡಿ ಸಾಹಸ ಮೆರೆದ 56 ವರ್ಷದ ಮಹಿಳೆ
Published On - 11:00 pm, Wed, 31 March 21