AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಯನ್ನು ತವರು ಮನೆಯಿಂದ ಕರೆತರುವಂತೆ ಒತ್ತಾಯಿಸಿದ್ದಕ್ಕೆ ಪೋಷಕರಿಂದಲೇ ಮಗನ ಬರ್ಬರ ಹತ್ಯೆ

ಮನೆಯಲ್ಲಿ ಹಲವು ವಿಚಾರಗಳಿಗಾಗಿ ಭಿನ್ನಾಭಿಪ್ರಾಯ ಮೂಡಿತ್ತು. ಸಿಮ್ರಂಜಂಗ್ ಸಿಂಗ್ ಎಂಬುವವರ ಪತ್ನಿ ನವಪ್ರೀತ್ ಕೌರ್ ಬೇಸರಗೊಂಡು ತವರು ಮನೆಗೆ ಹೋಗಿದ್ದರು. ಇದೆಲ್ಲಾ ಕೋಪ, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮನೆಯ ಸೊಸೆಯನ್ನು ವಾಪಸ್ ಕರೆದುಕೊಂಡು ಬನ್ನಿ ಎಂದು ಕೇಳಿದ್ದಕ್ಕೆ ಪೋಷಕರೇ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಂಜಾಬ್​ನ ಅಮೃತಸರದಲ್ಲಿ ನಡೆದಿದೆ. ಸಿಮ್ರಂಜಂಗ್ ಸಿಂಗ್ ತನ್ನ ಪತ್ನಿ ನವಪ್ರೀತ್ ಕೌರ್ ಮತ್ತು ಅವರ ಎರಡು ವರ್ಷದ ಮಗನನ್ನು ಮನೆಗೆ ಕರೆತರಲು ಪ್ರಯತ್ನಿಸುತ್ತಿದ್ದರು.ನವಪ್ರೀತ್ ಸ್ವಲ್ಪ ಸಮಯದಿಂದ ತನ್ನ ಹೆತ್ತವರೊಂದಿಗೆ ವಾಸವಾಗಿದ್ದರು.

ಪತ್ನಿಯನ್ನು ತವರು ಮನೆಯಿಂದ ಕರೆತರುವಂತೆ ಒತ್ತಾಯಿಸಿದ್ದಕ್ಕೆ ಪೋಷಕರಿಂದಲೇ ಮಗನ ಬರ್ಬರ ಹತ್ಯೆ
ಸಿಗ್ರಂಜನ್
ನಯನಾ ರಾಜೀವ್
|

Updated on: Dec 07, 2025 | 11:41 AM

Share

ಅಮೃತಸರ, ಡಿಸೆಂಬರ್ 07: ಮನೆಯಲ್ಲಿ ಹಲವು ವಿಚಾರಗಳಿಗಾಗಿ ಭಿನ್ನಾಭಿಪ್ರಾಯ ಮೂಡಿತ್ತು. ಸಿಮ್ರಂಜಂಗ್ ಸಿಂಗ್ ಎಂಬುವವರ ಪತ್ನಿ ನವಪ್ರೀತ್ ಕೌರ್ ಬೇಸರಗೊಂಡು ತವರು ಮನೆಗೆ ಹೋಗಿದ್ದರು. ಇದೆಲ್ಲಾ ಕೋಪ, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮನೆಯ ಸೊಸೆಯನ್ನು ವಾಪಸ್ ಕರೆದುಕೊಂಡು ಬನ್ನಿ ಎಂದು ಕೇಳಿದ್ದಕ್ಕೆ ಪೋಷಕರೇ ಮಗನನ್ನು ಬರ್ಬರವಾಗಿ ಹತ್ಯೆ(Murder) ಮಾಡಿರುವ ಘಟನೆ ಪಂಜಾಬ್​ನ ಅಮೃತಸರದಲ್ಲಿ ನಡೆದಿದೆ.

ಸಿಮ್ರಂಜಂಗ್ ಸಿಂಗ್ ತನ್ನ ಪತ್ನಿ ನವಪ್ರೀತ್ ಕೌರ್ ಮತ್ತು ಅವರ ಎರಡು ವರ್ಷದ ಮಗನನ್ನು ಮನೆಗೆ ಕರೆತರಲು ಪ್ರಯತ್ನಿಸುತ್ತಿದ್ದರು.ನವಪ್ರೀತ್ ಸ್ವಲ್ಪ ಸಮಯದಿಂದ ತನ್ನ ಹೆತ್ತವರೊಂದಿಗೆ ವಾಸವಾಗಿದ್ದರು. ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಿದ್ದರಿಂದ ಮನೆ ಬಿಟ್ಟು ಹೋಗಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂದು ಮಹಿಳೆ ತಿಳಿಸಿದ್ದಾರೆ. ನವಪ್ರೀತ್ ಅವರ ಅತ್ತೆ-ಮಾವನಿಗೆ ಆಕೆ ಮನೆಗೆ ವಾಪಸಾಗುವುದು ಇಷ್ಟವಿರಲಿಲ್ಲ.ಮಗನಿಗೆ ಮರು ಮದುವೆ ಮಾಡಲು ನಿರ್ಧರಿಸಿದ್ದರು.

ಇದು ಎರಡು ಕುಟುಂಬಗಳ ನಡುವೆ ದೀರ್ಘಕಾಲದ ಉದ್ವಿಗ್ನತೆಗೆ ಕಾರಣವಾಗಿತ್ತು. ಭಾನುವಾರ ಬೆಳಗ್ಗೆ ಸಿಮ್ರಂಜಾಂಗ್ ತನ್ನ ಹೆಂಡತಿ ಮತ್ತೆ ಮನೆಗೆ ಬರಬೇಕೆಂದು ಒತ್ತಾಯಿಸಿದಾಗ ಈ ಘಟನೆ ನಡೆದಿದೆ. ಮಗ ಹಾಗೂ ಪೋಷಕರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಕೋಪದ ಭರದಲ್ಲಿ, ಅವರ ಪೋಷಕರು ಇಟ್ಟಿಗೆಗಳಿಂದ ಹಲ್ಲೆ ನಡೆಸಿದ್ದಾರೆ. ಪದೇ ಪದೇ ತಲೆಗೆ ಜಜ್ಜಿದ ಪರಿಣಾಮ ತಲೆಗೆ ತೀವ್ರವಾದ ಗಾಯಗಳಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: ಲಿವಿನ್ ರಿಲೇಷನ್​ಶಿಪ್​ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ‌ ಹತ್ಯೆ: ಕಾರಣವೇನು?

ನವಪ್ರೀತ್, ಅವರ ಮಗು ಮತ್ತು ಅವರ ಕುಟುಂಬವು ತೀವ್ರ ಆಘಾತಕ್ಕೊಳಗಾಗಿದೆ. ಅವರು ತಮ್ಮ ಗಂಡನ ಬಳಿಗೆ ಮರಳಲು ಸಿದ್ಧರಿದ್ದಾರೆ ಆದರೆ ಅವರ ಅತ್ತೆ-ಮಾವರಿಂದ ಯಾವಾಗಲೂ ವಿರೋಧವನ್ನು ಎದುರಿಸುತ್ತಿದ್ದರು ಎಂದು ಹೇಳಿದ್ದಾರೆ. ಮದುವೆಯ ನಂತರ ತನ್ನ ಮಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಮತ್ತು ಸಿಮ್ರಾಂಜಂಗ್‌ನ ಪೋಷಕರು ಆಕೆ ಹಿಂತಿರುಗುವುದನ್ನು ವಿರೋಧಿಸುತ್ತಿದ್ದರು ಎಂದು ನವಪ್ರೀತ್‌ನ ತಂದೆ ಆರೋಪಿಸಿದ್ದಾರೆ.

ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಜ್ನಾಲಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಹಿಮಾಂಶು ಭಗತ್ ತಿಳಿಸಿದ್ದಾರೆ. ಪೊಲೀಸರು ಸಿಮ್ರಾಂಜಂಗ್ ತಂದೆಯನ್ನು ಬಂಧಿಸಿದ್ದು, ತಾಯಿ ಪರಾರಿಯಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ