AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಗಂಡ ದೆಹಲಿಯಲ್ಲಿ ಎರಡನೇ ಮದುವೆಯಾಗಲು ಹೊರಟಿದ್ದಾರೆ, ದಯವಿಟ್ಟು ವಾಪಸ್ ಕಳುಹಿಸಿ, ಪ್ರಧಾನಿ ಮೋದಿಗೆ ಪಾಕ್ ಮಹಿಳೆಯ ಮನವಿ

ಪಾಕಿಸ್ತಾನ(Pakistan)ದ ಮಹಿಳೆಯೊಬ್ಬರು ತಮ್ಮ ಪತಿಯನ್ನು ಕರಾಚಿಗೆ ವಾಪಸ್ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ನನ್ನ ಪತಿ ದೆಹಲಿಯಲ್ಲಿ ಎರಡನೇ ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ ಎಂದು ಕರಾಚಿ ನಿವಾಸಿ ನಿಕಿತಾ ನಾಗದೇವ್ ದೂರಿದ್ದಾರೆ. ತಮ್ಮ ಪತಿ ವಿಕ್ರಮ್ ನಾಗದೇವ್ ಕರಾಚಿಯಲ್ಲಿ ತನ್ನನ್ನು ತೊರೆದು ದೆಹಲಿಯಲ್ಲಿ ಇನ್ನೊಬ್ಬ ಮಹಿಳೆಯನ್ನು ರಹಸ್ಯವಾಗಿ ಮದುವೆಯಾಗಲು ಯೋಜಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನ್ಯಾಯಕ್ಕಾಗಿ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಹಿಳೆ ವೀಡಿಯೊ ಮೂಲಕ ಮನವಿ ಮಾಡಿದ್ದಾರೆ.ಜನವರಿ 26, 2020 ರಂದು ಕರಾಚಿಯಲ್ಲಿ ಹಿಂದೂ ಆಚರಣೆಗಳ ಪ್ರಕಾರ ತಮ್ಮ ಮದುವೆ ನಡೆದಿತ್ತು.

ನನ್ನ ಗಂಡ ದೆಹಲಿಯಲ್ಲಿ ಎರಡನೇ ಮದುವೆಯಾಗಲು ಹೊರಟಿದ್ದಾರೆ, ದಯವಿಟ್ಟು ವಾಪಸ್ ಕಳುಹಿಸಿ, ಪ್ರಧಾನಿ ಮೋದಿಗೆ ಪಾಕ್ ಮಹಿಳೆಯ ಮನವಿ
ಮದುವೆ
ನಯನಾ ರಾಜೀವ್
|

Updated on: Dec 07, 2025 | 9:14 AM

Share

ನವದೆಹಲಿ, ಡಿಸೆಂಬರ್ 07: ಪಾಕಿಸ್ತಾನ(Pakistan)ದ ಮಹಿಳೆಯೊಬ್ಬರು ತಮ್ಮ ಪತಿಯನ್ನು ಕರಾಚಿಗೆ ವಾಪಸ್ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ನನ್ನ ಪತಿ ದೆಹಲಿಯಲ್ಲಿ ಎರಡನೇ ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ ಎಂದು ಕರಾಚಿ ನಿವಾಸಿ ನಿಕಿತಾ ನಾಗದೇವ್ ದೂರಿದ್ದಾರೆ. ತಮ್ಮ ಪತಿ ವಿಕ್ರಮ್ ನಾಗದೇವ್ ಕರಾಚಿಯಲ್ಲಿ ತನ್ನನ್ನು ತೊರೆದು ದೆಹಲಿಯಲ್ಲಿ ಇನ್ನೊಬ್ಬ ಮಹಿಳೆಯನ್ನು ರಹಸ್ಯವಾಗಿ ಮದುವೆಯಾಗಲು ಯೋಜಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನ್ಯಾಯಕ್ಕಾಗಿ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಹಿಳೆ ವೀಡಿಯೊ ಮೂಲಕ ಮನವಿ ಮಾಡಿದ್ದಾರೆ. ಜನವರಿ 26, 2020 ರಂದು ಕರಾಚಿಯಲ್ಲಿ ಹಿಂದೂ ಆಚರಣೆಗಳ ಪ್ರಕಾರ ತಮ್ಮ ಮದುವೆ ನಡೆದಿತ್ತು.

ದೀರ್ಘಾವಧಿಯ ವೀಸಾದ ಮೇಲೆ ಇಂದೋರ್‌ನಲ್ಲಿ ವಾಸಿಸುತ್ತಿದ್ದ ಪಾಕಿಸ್ತಾನ ಮೂಲದ ವಿಕ್ರಮ್ ನಾಗ್ದೇವ್ ಅವರನ್ನು ವಿವಾಹವಾದರು ಎಂದು ನಿಕಿತಾ ಹೇಳಿದ್ದಾರೆ. ಒಂದು ತಿಂಗಳ ನಂತರ, ವಿಕ್ರಮ್ ಅವರನ್ನು ಫೆಬ್ರವರಿ 26 ರಂದು ಭಾರತಕ್ಕೆ ಕರೆತಂದರು.ಆದರೆ ಕೆಲವೇ ತಿಂಗಳುಗಳಲ್ಲಿ, ತನ್ನ ಜೀವನವು ಸಂಪೂರ್ಣವಾಗಿ ಬದಲಾಯಿತು ಎಂದು ನಿಕಿತಾ ಹೇಳಿದ್ದಾರೆ.ಜುಲೈ 9ರಂದು ತನ್ನ ಬಳಿ ವೀಸಾ ಸಮಸ್ಯೆ ನೆಪದಲ್ಲಿ ಅಟ್ಟಾರಿ ಗಡಿಯಲ್ಲಿ ಬಿಟ್ಟು ಬಲವಂತವಾಗಿ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಯಿತು.

ಅಂದಿನಿಂದ, ವಿಕ್ರಮ್ ಅವರನ್ನು ಮರಳಿ ಕರೆತರಲು ಎಂದಿಗೂ ಪ್ರಯತ್ನಿಸಲಿಲ್ಲ ಎಂದು ನಿಕಿತಾ ಹೇಳಿಕೊಂಡಿದ್ದಾರೆ.ನಾನು ಅವರನ್ನು ಭಾರತಕ್ಕೆ ಕರೆಯುವಂತೆ ವಿನಂತಿಸುತ್ತಲೇ ಇದ್ದೆ, ಆದರೆ ಅವರು ಪ್ರತಿ ಬಾರಿಯೂ ನಿರಾಕರಿಸಿದ್ದರು.ನಿಕಿತಾ ಇಂದು ತನಗೆ ನ್ಯಾಯ ಸಿಗದಿದ್ದರೆ, ಮಹಿಳೆಯರು ನ್ಯಾಯದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ವಿಕ್ರಮ್ ದೆಹಲಿಯಲ್ಲಿ ಮಹಿಳೆಯನ್ನು ಮರುಮದುವೆಯಾಗಲು ತಯಾರಿ ನಡೆಸುತ್ತಿದ್ದಾನೆಂದು ನಿಕಿತಾಗೆ ತಿಳಿದುಬಂದಿದೆ.

ಮತ್ತಷ್ಟು ಓದಿ: ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ಈ ನಿರ್ಧಾರಕ್ಕೆ ಕಾರಣ ಏನು?

ಜನವರಿ 27, 2025 ರಂದು ಲಿಖಿತ ದೂರು ದಾಖಲಿಸಿದ್ದರು. ಇಬ್ಬರೂ ಭಾರತೀಯ ನಾಗರಿಕರಲ್ಲದ ಕಾರಣ, ಈ ವಿಷಯವು ಪಾಕಿಸ್ತಾನದ ನ್ಯಾಯವ್ಯಾಪ್ತಿಗೆ ಒಳಪಟ್ಟಿದೆ ಎಂದು ಸಿಂಧಿ ಮಧ್ಯಸ್ಥಿಕೆ ಕೇಂದ್ರವು ಹೇಳಿದೆ.ವಿಕ್ರಮ್ ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಲು ಸಹ ಶಿಫಾರಸು ಮಾಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ