ಮದುವೆ ಮೆರವಣಿಗೆಯಲ್ಲಿ ಸದ್ದು ಮಾಡಿದ ಬಂದೂಕು: ಗ್ರಾಮ ಪಂಚಾಯ್ತಿ ಸದಸ್ಯನಿಂದ ಫೈರಿಂಗ್
ಮದುವೆ ಮೆರವಣಿಗೆಯಲ್ಲಿ ಬಂದೂಕಿನ ಸದ್ದಾಗಿದೆ. ಸಂಬಂಧಿಕರ ಮದುವೆ ಮೆರವಣಿಗೆ ವೇಳೆ ಯಾದಗಿರಿ ತಾಲೂಕಿನ ಮುಂಡರಗಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ರೌಡಿಶೀಟರ್ನಿಂದ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಸದ್ಯ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಡಿಯೋ ನೋಡಿ.
ಯಾದಗಿರಿ, ಡಿಸೆಂಬರ್ 06: ಸಂಬಂಧಿಕರ ಮದುವೆ ಮೆರವಣಿಗೆ ವೇಳೆ ಡಬಲ್ ಬ್ಯಾರೆಲ್ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿರುವಂತಹ ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಮುಂಡರಗಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ರೌಡಿಶೀಟರ್ ಚಂದ್ರಶೇಖರ್ ಎಂಬುವವರಿಂದ ಫೈರಿಂಗ್ ಮಾಡಲಾಗಿದೆ. ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಚಂದ್ರಶೇಖರ್ನ್ನು ವಶಕ್ಕೆ ಪಡೆದಿದ್ದಾರೆ. ಫೈರಿಂಗ್ ಮಾಡುವ ವಿಡಿಯೋ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 06, 2025 10:15 PM
Latest Videos
