ವಿಮಾನ ರದ್ದತಿಯಿಂದ ಹತಾಶರಾಗಿ ಇಂಡಿಗೋ ಟಿಕೆಟ್ ಕೌಂಟರ್ ಮೇಲೆ ಹತ್ತಿದ ವಿದೇಶಿ ಮಹಿಳೆ!
ಭಾರತದಾದ್ಯಂತ ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡಿದ್ದರಿಂದ ಮುಂಬೈ ವಿಮಾನ ನಿಲ್ದಾಣದಲ್ಲಿ ಉದ್ವಿಗ್ನ ದೃಶ್ಯವೊಂದು ಬಯಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊದಲ್ಲಿ ತನ್ನ ವಿಮಾನ ಹಠಾತ್ತನೆ ರದ್ದಾದ ನಂತರ ವಿದೇಶಿ ಮಹಿಳೆಯೊಬ್ಬರು ವಿಮಾನಯಾನ ಕೌಂಟರ್ ಮೇಲೆ ಹತ್ತುವುದು ಮತ್ತು ಸಿಬ್ಬಂದಿಯ ಮೇಲೆ ಕೂಗುತ್ತಿರುವ ವಿಡಿಯೋ ವೈರಲ್ ಆಗಿದೆ. ದೇಶಾದ್ಯಂತ 400ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದ ಬಳಿಕ ಈ ಘಟನೆ ಸಂಭವಿಸಿದೆ.
ಮುಂಬೈ, ಡಿಸೆಂಬರ್ 6: ವಿಮಾನಗಳ ರದ್ದತಿಯಿಂದಾಗಿ ಕೋಪಗೊಂಡ ವಿದೇಶಿ ಮಹಿಳೆಯೊಬ್ಬರು ಇಂಡಿಗೋ (IndiGo) ವಿರುದ್ಧ ಆಕ್ರೋಶಗೊಂಡು ಟಿಕೆಟ್ ಕೌಂಟರ್ ಮೇಲೆ ಹತ್ತಿ ಗಲಾಟೆ ಮಾಡಿದ್ದಾರೆ. ಆ ಮಹಿಳೆ ಇಂಡಿಗೋ ಸಿಬ್ಬಂದಿ ಬಳಿ ತನ್ನ ಅಸಮಾಧಾನ ಹೊರಹಾಕಿದ್ದಾರೆ. ಅದಕ್ಕೆ ಅವರು ಸರಿಯಾಗಿ ಪ್ರತಿಕ್ರಿಯೆ ನೀಡದಿದ್ದಾಗ ಕೋಪಗೊಂಡ ಅವರು ಕೌಂಟರ್ ಮೇಲೆ ಹತ್ತಿದ್ದಾರೆ. ದೇಶಾದ್ಯಂತ 400ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದ ಬಳಿಕ ಈ ಘಟನೆ ಸಂಭವಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos

