ಮದುವೆ ಬೇಡ ಅಂದಿದ್ದಕ್ಕೆ ಮಹಿಳೆಯ ಮನೆಗೆ ಬೆಂಕಿ ಹಚ್ಚಿದ ವ್ಯಕ್ತಿ

ಮದುವೆ ಬೇಡ ಅಂದಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆಯ ಮನೆಗೆ ಬೆಂಕಿ(Fire) ಹಚ್ಚಿ ಸೇಡು ತೀರಿಸಿಕೊಂಡಿರುವ ಘಟನೆ ಪಂಜಾಬ್​​ನ ಜಲಂಧರ್​​ನಲ್ಲಿ ನಡೆದಿದೆ. ಅಗ್ನಿ ಅವಘಡ ಸಂಭವಿಸಿದಾಗ ಸುಖ್ವಿಂದರ್ ಕೌರ್ ಎಂಬ ಮಹಿಳೆ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿದ್ದರು. ಮೂವರಿಗೂ ಸುಟ್ಟ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮದುವೆ ಬೇಡ ಅಂದಿದ್ದಕ್ಕೆ ಮಹಿಳೆಯ ಮನೆಗೆ ಬೆಂಕಿ ಹಚ್ಚಿದ ವ್ಯಕ್ತಿ
ದಾಳಿ
Image Credit source: India Today

Updated on: Aug 03, 2025 | 8:20 AM

ಜಲಂಧರ್, ಆಗಸ್ಟ್​ 03: ಸಮಾಜದಲ್ಲಿ ಎಂತೆಂಥಾ ಜನರಿರ್ತಾರಪ್ಪ, ಮದುವೆ ಬೇಡ ಅಂದಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆಯ ಮನೆಗೆ ಬೆಂಕಿ(Fire) ಹಚ್ಚಿ ಸೇಡು ತೀರಿಸಿಕೊಂಡಿರುವ ಘಟನೆ ಪಂಜಾಬ್​​ನ ಜಲಂಧರ್​​ನಲ್ಲಿ ನಡೆದಿದೆ. ಅಗ್ನಿ ಅವಘಡ ಸಂಭವಿಸಿದಾಗ ಸುಖ್ವಿಂದರ್ ಕೌರ್ ಎಂಬ ಮಹಿಳೆ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿದ್ದರು. ಮೂವರಿಗೂ ಸುಟ್ಟ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ರಾಮ ಮಂಡಿ ಹಂತ-2 ರ ಏಕ್ತಾ ನಗರದಲ್ಲಿ ಈ ಘಟನೆ ನಡೆದಿದೆ. ಮಹಿಳೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆ ವ್ಯಕ್ತಿ ತನ್ನ ಮಗಳನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದ ಆಕೆ ಮದುವೆಗೆ ಒಪ್ಪದ ಕಾರಣ ಈ ಕೃತ್ಯವೆಸಗಿದ್ದಾನೆ ಎಂದು ಮಹಿಳೆಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.

ಕುಟುಂಬ ಸದಸ್ಯರ ಪ್ರಕಾರ, ಆ ವ್ಯಕ್ತಿ ನಿತ್ಯ ತರಕಾರಿಗಳನ್ನು ಮನೆಗೆ ತಲುಪಿಸುವಂತಹ ಕೆಲಸ ಮಾಡುತ್ತಿದ್ದ, ಮಹಿಳೆ ಬಳಿ ಮದುವೆ ಪ್ರಸ್ತಾಪ ಮಾಡಿದ್ದ, ಆಕೆ ತಿರಸ್ಕರಿಸಿದ್ದಳು. ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಆ ಸಮಯದಲ್ಲಿ ಕೌರ್ ಆತನಿಗೆ ಕಪಾಳಮೋಕ್ಷ ಮಾಡಿದ್ದಳು. ಅದು ಅವನಿಗೆ ಕೋಪ ತರಿಸಿತ್ತು.

ಮತ್ತಷ್ಟು ಓದಿ: ಕುಡಿದ ಅಮಲಿನಲ್ಲಿ ತನ್ನ ಮನೆಗೆ ತಾನೇ ಬೆಂಕಿಯಿಟ್ಟ ವ್ಯಕ್ತಿ: ಇಡೀ ಮನೆ ಬೆಂಕಿಗಾಹುತಿ

ಸ್ವಲ್ಪ ಸಮಯದ ಬಳಿಕ ಪೆಟ್ರೋಲ್ ಬಾಟಲಿಯನ್ನು ತಂದು, ಗೋಡೆಯನ್ನು ಹತ್ತಿ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದ್ದ. ಘಟನೆಯ ಬಗ್ಗೆ ಆಸ್ಪತ್ರೆಯಿಂದ ಕರೆ ಬಂದಿರುವುದನ್ನು ಸಬ್-ಇನ್ಸ್‌ಪೆಕ್ಟರ್ ಅಜ್ಮೀರ್ ಲಾಲ್ ದೃಢಪಡಿಸಿದ್ದಾರೆ. ಈ ವಿಷಯ ರಾಮ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು.

ರಾಮ ಮಂಡಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ಮಾಹಿತಿ ನೀಡಿದ್ದು, ಈ ವಿಷಯ ನಮ್ಮ ಗಮನಕ್ಕೆ ಬಂದಿದೆ ಮತ್ತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ