1ರಿಂದ 10ನೇ ತರಗತಿವರೆಗೆ ಪಂಜಾಬಿ ಭಾಷೆ ಕಡ್ಡಾಯ, ನಿಯಮ ಉಲ್ಲಂಘಿಸಿದರೆ 2 ಲಕ್ಷ ರೂ. ದಂಡ -ಪಂಜಾಬ್ ಸರ್ಕಾರ ಆದೇಶ

| Updated By: ಆಯೇಷಾ ಬಾನು

Updated on: Nov 12, 2021 | 11:26 AM

ರಾಜ್ಯದಾದ್ಯಂತ ಶಾಲೆಗಳಲ್ಲಿ 1-10 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಪಂಜಾಬಿ ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಆದೇಶವನ್ನು ಅನುಸರಿಸದ ಶಿಕ್ಷಣ ಸಂಸ್ಥೆಗಳಿಗೆ 2 ಲಕ್ಷ ರೂ. ದಂಡ ಪಾವತಿಸುವಂತೆ ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಆದೇಶ ಹೊರಡಿಸಿದ್ದಾರೆ.

1ರಿಂದ 10ನೇ ತರಗತಿವರೆಗೆ ಪಂಜಾಬಿ ಭಾಷೆ ಕಡ್ಡಾಯ, ನಿಯಮ ಉಲ್ಲಂಘಿಸಿದರೆ 2 ಲಕ್ಷ ರೂ. ದಂಡ -ಪಂಜಾಬ್ ಸರ್ಕಾರ ಆದೇಶ
ಚರಣ್​​ಜಿತ್ ಸಿಂಗ್ ಚನ್ನಿ
Follow us on

ದೆಹಲಿ: 1ರಿಂದ 10ನೇ ತರಗತಿವರೆಗೆ ಪಂಜಾಬಿ ಭಾಷೆ ಕಡ್ಡಾಯಗೊಳಿಸಿದ ಪಂಜಾಬ್ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ ಶಾಲೆಗಳು ನಿಯಮ ಉಲ್ಲಂಘಿಸಿದರೆ 2 ಲಕ್ಷ ರೂ. ದಂಡ ಪಾವತಿಸುವಂತೆ ಸೂಚಿಸಿದೆ. ಕಚೇರಿಗಳಲ್ಲೂ ಪಂಜಾಬಿ ಭಾಷೆ ಕಡ್ಡಾಯಗೊಳಿಸಿದ್ದು ರಾಜ್ಯದ ಎಲ್ಲ ನಾಮಫಲಕಗಳಲ್ಲಿ ಪಂಜಾಬಿ ಭಾಷೆ ಕಡ್ಡಾಯ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಸರ್ಕಾರ ಕೂಡ ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಆದ್ರೆ ಈ ಆದೇಶ ವಿವಾದ ತಂದೊಡ್ಡಿದ್ದು ಕೋರ್ಟ್ ಕೆಲವು ಪ್ರಶ್ನೆಗಳನ್ನು ಹಾಕಿ ಸರ್ಕಾರದ ವಾದ ಮಂಡನೆಗೆ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿದೆ. ಸದ್ಯ ಪಂಜಾಬ್ ಸಿಎಂ ಪಂಜಾಬಿ ಭಾಷೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾರೆ.

ಚಂಡೀಗಢ ಪಂಜಾಬ್ ವಿಧಾನ ಸಭೆ ಗುರುವಾರ ಪಂಜಾಬಿ ಭಾಷೆಗೆ ಸಂಬಂಧಿಸಿದ ಎರಡು ಮಹತ್ವದ ಮಸೂದೆಗಳು ಸೇರಿದಂತೆ 15 ಮಸೂದೆಗಳನ್ನು ಅಂಗೀಕರಿಸಿದೆ. ಉನ್ನತ ಶಿಕ್ಷಣ ಮತ್ತು ಭಾಷಾ ಸಚಿವ ಪರ್ಗತ್ ಸಿಂಗ್ ಪಂಜಾಬಿ ಮತ್ತು ಇತರ ಭಾಷೆಗಳ ಶಿಕ್ಷಣ (ತಿದ್ದುಪಡಿ) ಮಸೂದೆ, 2021’ ಮತ್ತು ‘ಪಂಜಾಬ್ ರಾಜ್ಯ ಭಾಷೆ (ತಿದ್ದುಪಡಿ) ಮಸೂದೆ 2021’ ಒಳಗೊಂಡಿರುವ ಮಸೂದೆಗಳನ್ನು ಮಂಡಿಸಿದರು. ಪಂಜಾಬಿ ಮತ್ತು ಇತರ ಭಾಷೆಗಳ ಶಿಕ್ಷಣ (ತಿದ್ದುಪಡಿ) ಮಸೂದೆ, 2021, ರಾಜ್ಯದಾದ್ಯಂತ ಶಾಲೆಗಳಲ್ಲಿ 1-10 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಪಂಜಾಬಿ ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಆದೇಶವನ್ನು ಅನುಸರಿಸದ ಶಿಕ್ಷಣ ಸಂಸ್ಥೆಗಳಿಗೆ 2 ಲಕ್ಷ ರೂ. ದಂಡ ಪಾವತಿಸುವಂತೆ ಆದೇಶ ಹೊರಡಿಸಲಾಗಿದೆ.

ಮಸೂದೆಯ ಪ್ರಕಾರ, ಯಾವುದೇ ಶಾಲೆಯು ಈ ನಿಬಂಧನೆಗಳನ್ನು ಅಥವಾ ಅದರ ಅಡಿಯಲ್ಲಿ ರಚಿಸಲಾದ ನಿಯಮಗಳನ್ನು ಒಂದು ತಿಂಗಳಿಗಿಂತ ಹೆಚ್ಚು ಕಾಲ ಉಲ್ಲಂಘಿಸಿದರೆ, ಆ ಸಂಸ್ಥೆಯು ₹ 50,000 ದಂಡವನ್ನು ಪಾವತಿಸಬೇಕು. ಅಂತೆಯೇ, ಮತ್ತೊಮ್ಮೆ ಒಂದು ತಿಂಗಳಿಗಿಂತ ಹೆಚ್ಚು ನಿಯಮ ಉಲ್ಲಂಘಿಸಿದರೆ, ಶಾಲೆಗಳು ₹ 1 ಲಕ್ಷ ದಂಡವನ್ನು ಪಾವತಿಸಬೇಕು. ಅದೇ ರೀತಿ ಮೂರನೇ ಬಾರಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಆದೇಶ ಉಲ್ಲಂಘಿಸಿದರೆ ಶಾಲೆಗಳಿಗೆ 2 ಲಕ್ಷ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.

ಇನ್ನು ಕಚೇರಿಗಳಲ್ಲೂ ಅಧಿಕಾರಿಗಳು/ನೌಕರರು ಪಂಜಾಬಿ ಭಾಷೆಯಲ್ಲಿ ಅಧಿಕೃತ ವ್ಯವಹಾರಗಳನ್ನು ನಡೆಸಬೇಕೆಂದು ಆದೇಶ ಹೊರಡಿಸಲಾಗಿದೆ. ಇಲ್ಲದಿದ್ದರೆ ₹500 ದಂಡವನ್ನು ವಿಧಿಸಲಾಗುತ್ತದೆ. ಎರಡನೇ ಬಾರಿ ಆದೇಶ ಉಲ್ಲಂಘನೆ ಮಾಡಿದರೆ ಅವರು ₹2,000 ಮತ್ತು ಮೂರನೇ ಬಾರಿಯ ಉಲ್ಲಂಘನೆಗೆ ₹5,000 ವರೆಗೆ ದಂಡ ವಿಧಿಸಿ ಪಂಜಾಬ್ ಸರ್ಕಾರ ಆದೇಶ ಹೊರಡಿಸಿದೆ

ಇದನ್ನೂ ಓದಿ: ಅಡ್ವೊಕೇಟ್ ಜನರಲ್ ಎಪಿಎಸ್ ಡಿಯೋಲ್ ರಾಜೀನಾಮೆ ಅಂಗೀಕರಿಸಿದ ಪಂಜಾಬ್ ಸಿಎಂ ಚರಣ್​​ಜಿತ್ ಚನ್ನಿ

ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ವಿಚಾರ; ಶಿಕ್ಷಣದಲ್ಲಿ ರಾಜಕೀಯ ಏಕೆ ಬೆರೆಸುತ್ತಿದ್ದೀರಿ ಎಂದು ಪ್ರಶ್ನಿಸಿದ ಹೈಕೋರ್ಟ್

Published On - 11:20 am, Fri, 12 November 21