Covaxin ಕೊವ್ಯಾಕ್ಸಿನ್ ಕೊವಿಡ್ ವಿರುದ್ಧ ಶೇ 77.8, ಡೆಲ್ಟಾ ರೂಪಾಂತರದ ವಿರುದ್ಧ ಶೇ 65.2 ಪರಿಣಾಮಕಾರಿ: ಲ್ಯಾನ್ಸೆಟ್ ಅಧ್ಯಯನ

Covid 19 Vaccine ಭಾರತದಲ್ಲಿ ನವೆಂಬರ್ 2020 ಮತ್ತು ಮೇ 2021 ರ ನಡುವೆ 18-97 ವರ್ಷ ವಯಸ್ಸಿನ 24,419 ಮಂದಿ ಮೇಲೆ ಈ ಪ್ರಯೋಗ ನಡೆದಿದೆ ಎಂದು ವೈದ್ಯಕೀಯ ಜರ್ನಲ್ ಹೇಳಿದೆ. ಲಸಿಕೆಯ ಪರಿಣಾಮಕಾರಿತ್ವದ ಡೇಟಾವು ಲಕ್ಷಣರಹಿತ ಕೊವಿಡ್ ವಿರುದ್ಧ ಶೇ 63.6 ರಕ್ಷಣೆ...

Covaxin ಕೊವ್ಯಾಕ್ಸಿನ್ ಕೊವಿಡ್ ವಿರುದ್ಧ ಶೇ 77.8, ಡೆಲ್ಟಾ ರೂಪಾಂತರದ ವಿರುದ್ಧ ಶೇ 65.2 ಪರಿಣಾಮಕಾರಿ: ಲ್ಯಾನ್ಸೆಟ್ ಅಧ್ಯಯನ
ಕೊವ್ಯಾಕ್ಸಿನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 12, 2021 | 12:03 PM

ದೆಹಲಿ: ದಿ ಲ್ಯಾನ್ಸೆಟ್‌ನಲ್ಲಿ (The Lancet) ಪ್ರಕಟವಾದ ವಿಶ್ಲೇಷಣೆಯ ಪ್ರಕಾರ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ (Bharat Biotech) ಅಭಿವೃದ್ಧಿಪಡಿಸಿದ ಕೊವಿಡ್ -19 (Covid-19) ಲಸಿಕೆ ಕೊವ್ಯಾಕ್ಸಿನ್ (Covaxin) ರೋಗಲಕ್ಷಣವಿರುವ ಕೊವಿಡ್ -19 ವಿರುದ್ಧ ಶೇ 77.8 ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಕಂಡುಬಂದಿದೆ. 130 ದೃಢಪಡಿಸಿದ ಪ್ರಕರಣಗಳ ಮೌಲ್ಯಮಾಪನದ ಮೂಲಕ ಪರಿಣಾಮಕಾರಿತ್ವವನ್ನು ವಿಶ್ಲೇಷಿಸಲಾಗಿದೆ. ಲಸಿಕೆ ಗುಂಪಿನಲ್ಲಿ 24 ಮತ್ತು ಪ್ಲಸೀಬೊ ಗುಂಪಿನಲ್ಲಿ 106 ಪ್ರಕರಣ ಗಮನಿಸಲಾಗಿದೆ. ಎರಡು ಡೋಸ್ ನೀಡಿದ ಎರಡು ವಾರಗಳ ನಂತರ ಸಾಂಪ್ರದಾಯಿಕ ನಿಷ್ಕ್ರಿಯಗೊಂಡ-ವೈರಸ್ ತಂತ್ರಜ್ಞಾನವನ್ನು ಬಳಸುವ ಕೊವ್ಯಾಕ್ಸಿನ್ “ದೃಢವಾದ ಪ್ರತಿಕಾಯ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ” ಎಂದು ಲ್ಯಾನ್ಸೆಟ್ ಹೇಳಿಕೆಯಲ್ಲಿ ತಿಳಿಸಿದೆ. ಭಾರತದಲ್ಲಿ ನವೆಂಬರ್ 2020 ಮತ್ತು ಮೇ 2021 ರ ನಡುವೆ 18-97 ವರ್ಷ ವಯಸ್ಸಿನ 24,419 ಮಂದಿ ಮೇಲೆ ಈ ಪ್ರಯೋಗ ನಡೆದಿದೆ ಎಂದು ವೈದ್ಯಕೀಯ ಜರ್ನಲ್ ಹೇಳಿದೆ. ಲಸಿಕೆಯ ಪರಿಣಾಮಕಾರಿತ್ವದ ಡೇಟಾವು ಲಕ್ಷಣರಹಿತ ಕೊವಿಡ್ ವಿರುದ್ಧ ಶೇ 63.6 ರಕ್ಷಣೆ, SARS-CoV-2, B.1.617.2 ಡೆಲ್ಟಾ ರೂಪಾಂತರಗಳ ವಿರುದ್ಧ ಶೇ 65.2 ರಕ್ಷಣೆ ಮತ್ತು SARS-CoV-2 ನ ಎಲ್ಲಾ ರೂಪಾಂತರಗಳ ವಿರುದ್ಧ ಶೇ  70.8ರಕ್ಷಣೆಯನ್ನು ತೋರಿಸುತ್ತದೆ.  ಭಾರತ್ ಬಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನಿಂದ (Indian Council of Medical Research) ಧನಸಹಾಯ ಪಡೆದ ಮತ್ತು ಎರಡೂ ಸಂಸ್ಥೆಗಳ ಅಧಿಕಾರಿಗಳು ಭಾಗಶಃ ರಚಿಸಿರುವ ಮಧ್ಯಂತರ ಅಧ್ಯಯನವು ಕಂಪನಿಯ ಹಿಂದಿನ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯ ಪ್ರಕಟಣೆಗಳಿಗೆ ಅನುಗುಣವಾಗಿದೆ. ಭಾರತದಲ್ಲಿ ಜನವರಿಯಲ್ಲಿ ಲಸಿಕೆಯ ಆರಂಭಿಕ ಅನುಮೋದನೆ ವಿವಾದವನ್ನು ಕೊನೆಗೊಳಿಸಲು ಇದು ಸಹಾಯ ಮಾಡಬಹುದು.

ಏತನ್ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆಯು ಕೊವ್ಯಾಕ್ಸಿನ್ ಅನ್ನು “ಸುಲಭವಾದ ಶೇಖರಣಾ ಅಗತ್ಯತೆಗಳ ಕಾರಣದಿಂದಾಗಿ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗೆ ಅತ್ಯಂತ ಸೂಕ್ತವಾಗಿದೆ” ಎಂದು ವಿವರಿಸಿದೆ. ಇತರ ಕೆಲವು ಅನುಮೋದಿತ ಲಸಿಕೆಗಳನ್ನು ಅತ್ಯಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಬೇಕು. ಇದು ಸರಬರಾಜು ಮತ್ತು ವೆಚ್ಚದ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿತ ಪಟ್ಟಿಯಲ್ಲಿ ಫೈಜರ್/ಬಯೋಎನ್‌ಟೆಕ್, ಮಾಡರ್ನಾ, ಅಸ್ಟ್ರಾಜೆನೆಕಾ, ಜಾನ್ಸನ್ ಮತ್ತು ಜಾನ್ಸನ್, ಸಿನೋಫಾರ್ಮ್ ಮತ್ತು ಸಿನೋವಾಕ್ ತಯಾರಿಸಿದ ಕೊವಿಡ್ ವಿರೋಧಿ ಲಸಿಕೆಗಳ ಪಟ್ಟಿಯಲ್ಲಿ ಕೊವ್ಯಾಕ್ಸಿನ್ ಸೇರಿಕೊಂಡಿದೆ.

ಕೊವ್ಯಾಕ್ಸಿನ್ ಅನುಮೋದನೆಯು “ಸೀಮಿತ ಜಾಗತಿಕ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಬಹುದು ಮತ್ತು ಕಡಿಮೆ-ಆದಾಯದ ಮತ್ತು ಮಧ್ಯಮ-ಆದಾಯದ ದೇಶಗಳ ಮೇಲೆ ಅಸಮಾನವಾಗಿ ಪರಿಣಾಮ ಬೀರುವ ಲಸಿಕೆಗಳ ಸಾಕಷ್ಟು ಪೂರೈಕೆಯನ್ನು ಸುಧಾರಿಸಬಹುದು” ಎಂದು ಅಧ್ಯಯನದಲ್ಲಿ ಭಾಗವಹಿಸದ ಚೀನಾದ ಸಂಶೋಧಕರಾದ ಲಿ ಜಿಂಗ್ಸಿನ್ ಲಿ ಮತ್ತು ಝು ಫೆಂಗ್ಕೈ ಹೇಳಿದ್ದಾರೆ.

ಲಸಿಕೆ ಡ್ರೈವ್‌ನ ಆರಂಭಿಕ ವಾರಗಳಲ್ಲಿ ಕೊವ್ಯಾಕ್ಸಿನ್ ವ್ಯಾಪಕವಾದ ಹಿಂಜರಿಕೆಯನ್ನು ಎದುರಿಸಿತು. ಅದರ ನಂತರ ಪ್ರಧಾನಿ ನರೇಂದ್ರ ಮೋದಿಯವರು ಕೊವ್ಯಾಕ್ಸಿನ್ ಲಸಿಕೆ ಪಡೆದರು. ಅಂದಿನಿಂದ ಭಾರತದಾದ್ಯಂತ 100 ಮಿಲಿಯನ್ ಡೋಸ್ ಕೊವ್ಯಾಕ್ಸಿನ್ ಅನ್ನು ನೀಡಲಾಗಿದೆ. ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆ ತನ್ನ ತುರ್ತು ಬಳಕೆಗಾಗಿ ಅಧಿಕೃತವಾದ ಕೊವಿಡ್ ಲಸಿಕೆಗಳ ಪಟ್ಟಿಗೆ ಇದನ್ನು ಸೇರಿಸಿದೆ.

ಆದರೂ ಅದರ ವಿಶ್ಲೇಷಣೆಯ ಸಂದರ್ಭದಲ್ಲಿ, ಲಸಿಕೆಯನ್ನು ಅಧ್ಯಯನ ಮಾಡುವ ವಿಶ್ವ ಆರೋಗ್ಯ ಸಂಸ್ಥೆಯ ಸ್ವತಂತ್ರ ತಾಂತ್ರಿಕ ಸಂಸ್ಥೆಯು ಹೆಚ್ಚಿನ ಮಾಹಿತಿಗಾಗಿ ಕಂಪನಿಯನ್ನು ಪದೇ ಪದೇ ಕೇಳಿತು.ದೇಹದ ಪೂರ್ವ-ಅರ್ಹತೆಯ ಪಟ್ಟಿಗೆ ಅದರ ಸೇರ್ಪಡೆಯನ್ನು ವಿಳಂಬಗೊಳಿಸುತ್ತದೆ. ಲಸಿಕೆಯನ್ನು ಸಮರ್ಥಿಸಿಕೊಂಡ ಭಾರತ್ ಬಯೋಟೆಕ್ ಸಿಎಂಡಿ ಕೃಷ್ಣ ಎಲ್ಲಾ ಟೈಮ್ಸ್ ನೌ ಶೃಂಗಸಭೆಯಲ್ಲಿ ಮಾತನಾಡುತ್ತಾ, ಕೊವ್ಯಾಕ್ಸಿನ್‌ಗಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ತುರ್ತು ಬಳಕೆ ಅನುಮೋದನೆ ನೀಡುವಲ್ಲಿ ವಿಳಂಬವಾಗಿದ್ದು ಇದು ಭಾರತದಲ್ಲಿ ಲಸಿಕೆ ವಿರುದ್ಧದ “ನಕಾರಾತ್ಮಕ ಪ್ರಚಾರ”ಕ್ಕೆ ಕಾರಣವಾಗಿತ್ತು ಎಂದಿದ್ದರು.

ಆದಾಗ್ಯೂ, ಲಸಿಕೆಯ ದೀರ್ಘಾವಧಿಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಕಂಡುಹಿಡಿಯಲು ಮತ್ತು ತೀವ್ರವಾದ ಕಾಯಿಲೆ, ಆಸ್ಪತ್ರೆ ಮತ್ತು ಸಾವಿನ ವಿರುದ್ಧ ರಕ್ಷಣೆ, ಜೊತೆಗೆ ಡೆಲ್ಟಾ ಮತ್ತು ಇತರ ಕಾಳಜಿಯ ರೂಪಾಂತರಗಳನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯಕ್ಕೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದು ಲ್ಯಾನ್ಸೆಟ್ ಹೇಳಿದೆ.

ಇದನ್ನೂ ಓದಿ: ಬೀಜಿಂಗ್​ನಲ್ಲಿ ಹೆಚ್ಚುತ್ತಿದೆ ಕೊವಿಡ್​ 19; ಮಾಲ್​​, ವಸತಿ ಸಂಕೀರ್ಣಗಳೆಲ್ಲ ಸೀಲ್​ಡೌನ್

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್