Gold Mask: ಬರೋಬ್ಬರಿ 5.70 ಲಕ್ಷ ರೂ. ಮೌಲ್ಯದ ಗೋಲ್ಡ್ ಮಾಸ್ಕ್ ಖರೀದಿಸಿದ ಉದ್ಯಮಿ!
Viral News: ಆಭರಣ ತಯಾರಕ ಚಂದನ್ ದಾಸ್ ಈ ಮುಖವಾಡದ ತಯಾರಕರು. ದಾಸ್ ಅವರು 15 ದಿನಗಳಲ್ಲಿ ತಯಾರಿಸಿದ ಗೋಲ್ಡ್ ಮಾಸ್ಕ್ಅನ್ನು ಸ್ಥಳೀಯ ಉದ್ಯಮಿಯೊಬ್ಬರಿಗೆ ನೀಡಿದ್ದಾರೆ.
ಕೊವಿಡ್ 19 ಸಾಂಕ್ರಾಮಿಕ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಮುಖಗವಸು(ಮಾಸ್ಕ್) ಧರಿಸುವುದು ದೈನಂದಿನ ಭಾಗವಾಗಿದೆ. ಕಾಲಾನಂತರದಲ್ಲಿ ಮಾಸ್ಕ್ ಧರಿಸುವುದು ಟ್ರೆಂಡಿ ಹಾಗೂ ಫ್ಯಾಷನ್ ಆಗಿಯೂ ಬದಲಾಗಿ ಬಿಟ್ಟಿದೆ. ಇದೀಗ ವೈರಲ್ ಆದ ಸುದ್ದಿಯೆಂದರೆ ಪಶ್ಚಿಮ ಬಂಗಾಳದ ವ್ಯಕ್ತಿಯೋರ್ವರು ಚಿನ್ನದ ಮಾಸ್ಕ್ ಖರೀದಿಸಿದ್ದಾರೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಉದ್ಯಮಿಯೊಬ್ಬರು ಬರೋಬ್ಬರಿ 5.70 ಲಕ್ಷ ರೂಪಾಯಿ ಮೌಲ್ಯದ ಕಸ್ಟಮೈಸ್ ಮಾಡಿದ ಚಿನ್ನದ ಮಾಸ್ಕ್ಅನ್ನು ಖರೀದಿಸಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದ್ದಂತೆಯೇ ನಾಚಿಕೆಗೇಡಿನ ಸಂಪತ್ತಿನ ಪ್ರದರ್ಶನ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಆಭರಣ ತಯಾರಕ ಚಂದನ್ ದಾಸ್ ಈ ಮುಖವಾಡದ ತಯಾರಕರು. ದಾಸ್ ಅವರು 15 ದಿನಗಳಲ್ಲಿ ತಯಾರಿಸಿದ ಗೋಲ್ಡ್ ಮಾಸ್ಕ್ಅನ್ನು ಸ್ಥಳೀಯ ಉದ್ಯಮಿಯೊಬ್ಬರಿಗೆ ನೀಡಿದ್ದಾರೆ. ಈ ಚಿನ್ನದ ಮಾಸ್ಕ್ ಚಿತ್ರಗಳನ್ನು ಪತ್ರಕರ್ತೆ ರಿತುಪರ್ಣ ಚಟರ್ಜಿ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದರ ಉದ್ದೇಶವೇನು? ಎಂದು ಶೀರ್ಷಿಕೆ ನೀಡುವ ಮೂಲಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
What is the purpose of this? pic.twitter.com/Zy4MqIPNCZ
— Rituparna Chatterjee (@MasalaBai) November 10, 2021
ಫೋಟೋಗಳನ್ನು ನೋಡಿದ ಟ್ವಿಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದು, ಅವರು ಎಷ್ಟು ಸಂಪತ್ತನ್ನು ಹೊಂದಿದ್ದರು ಅಥವಾ ಇಲ್ಲದಿದ್ದರೂ ಸಹ ಇಂತಹ ಕೆಲಸಗಳಿಂದ ತಮ್ಮ ಜೀವವನ್ನು ಕಳೆದುಕೊಂಡ ಸಾವಿರಾರು ಜನರ ಬಗ್ಗೆ ಕಾಳಜಿಯಿಲ್ಲದೆ ಅಸಭ್ಯ ಸಂಪತ್ತಿನ ಪ್ರದರ್ಶನ ಮಾಡಿದ್ದಾರೆ ಎಂದು ಕೆಲವರು ಹೇಳಿದ್ದಾರೆ.
What is the purpose of this? pic.twitter.com/Zy4MqIPNCZ
— Rituparna Chatterjee (@MasalaBai) November 10, 2021
What is the purpose of this? pic.twitter.com/Zy4MqIPNCZ
— Rituparna Chatterjee (@MasalaBai) November 10, 2021
Had heard of #LouisVuitton mask priced around 25k, but this gold-peated mask is something else??♂️??♂️??♂️ https://t.co/55pSLocxkv
— MANJOT SINGH (@MANJOTS74594721) November 11, 2021
Shameless ostentation of the noveau rich https://t.co/u1CyJHMALn
— Pooja Priyamvada (She/Her) (@SoulVersified) November 10, 2021
ಇದನ್ನೂ ಓದಿ:
Viral News: ಮದುವೆಯಾದ ಮರುದಿನವೇ ಗರ್ಲ್ಫ್ರೆಂಡ್ ಜೊತೆ ವಧು ಪರಾರಿ; ಶಾಕ್ ಆದ ಗಂಡನಿಗೆ ಹೃದಯಾಘಾತ!
Viral News: ಗಾಂಜಾ ಎಣ್ಣೆ ಶ್ವಾಸಕೋಶದ ಕ್ಯಾನ್ಸರ್ ಗುಣಪಡಿಸಲು ಸಹಾಯಕವೇ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ
Published On - 11:30 am, Fri, 12 November 21