ಪಂಜಾಬ್: ಕಾರು ಹರಿದು ಮಹಿಳೆ ಸಾವು, ಕಾರು ಚಲಾಯಿಸಿದ್ದ ಪೊಲೀಸ್ ಅರೆಸ್ಟ್ ; ಹಿಟ್ ಆಂಡ್ ರನ್ ಸಿಸಿಟಿವಿಯಲ್ಲಿ ಸೆರೆ

Hit-And-Run ಮಹಿಳೆಯರು ರಸ್ತೆಯ ವಿಭಜಕದ ಬಳಿ ನಿಂತು, ದಾಟಲು ಹೋಗುತ್ತಿರುವಾಗ ಬಿಳಿ ಮಾರುತಿ ಬ್ರೆಝಾ ಮುನ್ನುಗ್ಗುತ್ತಿರುವುದನ್ನು ಕಂಡು ಹಿಂದೆ ಸರಿದ್ದಾರೆ. ಆದರೆ ಆ ಕಾರು ವೇಗವಾಗಿ ಬಂದು ಮಹಿಳೆಯರಿಗೆ ಡಿಕ್ಕಿ ಹೊಡೆದಿ

ಪಂಜಾಬ್: ಕಾರು ಹರಿದು ಮಹಿಳೆ ಸಾವು, ಕಾರು ಚಲಾಯಿಸಿದ್ದ ಪೊಲೀಸ್ ಅರೆಸ್ಟ್ ; ಹಿಟ್ ಆಂಡ್ ರನ್ ಸಿಸಿಟಿವಿಯಲ್ಲಿ ಸೆರೆ
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
Updated By: ರಶ್ಮಿ ಕಲ್ಲಕಟ್ಟ

Updated on: Oct 18, 2021 | 4:09 PM

ಜಲಂಧರ್: ಪಂಜಾಬ್‌ನ ಜಲಂಧರ್‌ನಲ್ಲಿ(Jalandhar) ಇಂದು ಬೆಳಿಗ್ಗೆ ರಸ್ತೆ ದಾಟಲು ಕಾಯುತ್ತಿದ್ದ ಇಬ್ಬರು ಮಹಿಳೆಯರು, ಕಾರು ಅತಿವೇಗದಲ್ಲಿ ಸಾಗುತ್ತಿದ್ದಂತೆ ಹಿಂದೆ ಸರಿದರು. ಆದರೆ ಕೆಲವೇ ಕ್ಷಣಗಳಲ್ಲಿ ಕಾರು ಅವರಿಗೆ  ಡಿಕ್ಕಿ ಹೊಡೆದಿದ್ದು, ಓರ್ವ ಮಹಿಳೆ ಸಾವಿಗೀಡಾಗಿದ್ದು ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಕಾರು ಚಲಾಯಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ನ್ನು ಬಂಧಿಸಲಾಗಿದೆ.  ಹಿಟ್-ಅಂಡ್-ರನ್ (Hit-And-Run) ಸಿಸಿಟಿವಿಯಲ್ಲಿ ಸೆರೆಯಾಗಿದೆ .ಮಹಿಳೆಯರು ರಸ್ತೆಯ ವಿಭಜಕದ ಬಳಿ ನಿಂತು, ದಾಟಲು ಹೋಗುತ್ತಿರುವಾಗ ಬಿಳಿ ಮಾರುತಿ ಬ್ರೆಝಾ (Maruti Brezza )ಮುನ್ನುಗ್ಗುತ್ತಿರುವುದನ್ನು ಕಂಡು ಹಿಂದೆ ಸರಿದ್ದಾರೆ. ಆದರೆ ಆ ಕಾರು ವೇಗವಾಗಿ ಬಂದು ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ. ಇಬ್ಬರು ಮಹಿಳೆಯರು ರಸ್ತೆಯಲ್ಲಿ ಬೀಳುತ್ತಿರುವುದು ಸಿಸಿಟಿವಿ ದೃಶ್ಯದಲ್ಲಿದೆ. ಜಲಂಧರ್ ಕಂಟೋನ್ಮೆಂಟ್ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಈ ಘಟನೆ ನಡೆದಿದ್ದು, ಪೊಲೀಸ್ ಇನ್ಸ್ ಪೆಕ್ಟರ್ ಅಮೃತ್ ಪಾಲ್ ಸಿಂಗ್ ಕಾರು ಚಲಾಯಿಸಿದ್ದರು.


ಕಾರ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ನವಜೋತ್ ಕೌರ್ ಸ್ಥಳದಲ್ಲೇ ಮೃತಪಟ್ಟರು. ಇನ್ನೊಬ್ಬ ಮಹಿಳೆ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿದ್ದಾರೆ. ಘಟನೆಯ ನಂತರ, ಜಲಂಧರ್-ಫಗ್ವಾರಾ ಹೆದ್ದಾರಿಯ ಮೂಲಕ ಸ್ಥಳದಲ್ಲಿ ಹೆಚ್ಚಿನ ಜನ ಜಮಾಯಿಸಿದರು ಮತ್ತು ಸಂಚಾರ ದಟ್ಟಣೆ ಕಂಡುಬಂತು.

“ನನ್ನ ಮಗಳು ಬೆಳಿಗ್ಗೆ ಕೆಲಸಕ್ಕೆ ಹೊರಟಳು ಮತ್ತು ರೈಲ್ವೇ ಕ್ರಾಸಿಂಗ್ ಬಳಿ ರಸ್ತೆ ದಾಟುತ್ತಿದ್ದಾಗ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಸಬ್ ಇನ್ಸ್‌ಪೆಕ್ಟರ್ ಮೇಲೆ ಕೊಲೆ ಆರೋಪ ಹೊರಿಸಬೇಕು” ಎಂದು ನವಜೋತ್ ತಾಯಿ ತೇಜಿಂದರ್ ಕೌರ್ ಹೇಳಿದರು.

ಸ್ಥಳೀಯ ನಿವಾಸಿಗಳು ಅಮೃತ್ ಪಾಲ್ ಸಿಂಗ್ ಮೇಲೆ ಹತ್ಯೆ ಆರೋಪ ಹೊರಿಸದ ಹೊರತು ಹೆದ್ದಾರಿಯನ್ನು ತೆರವುಗೊಳಿಸುವುದಿಲ್ಲ ಎಂದು ಹೇಳಿದರು. ಪ್ರತಿಭಟನೆಯಿಂದ ನಗರದ ಕೆಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿತು.

ಇದನ್ನೂ ಓದಿ: ಭೋಪಾಲ್​​ನಲ್ಲಿ ದುರ್ಗಾ ದೇವಿಯ ಮೂರ್ತಿ ವಿಸರ್ಜನೆ ವೇಳೆ ಜನರ ಮೇಲೆ ಹರಿದ ಕಾರು; ಮೂವರಿಗೆ ಗಾಯ

Published On - 4:03 pm, Mon, 18 October 21