ಉದ್ಯೋಗ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಿರಣ್ ಗೋಸಾವಿ ಸಹಾಯಕನ ಬಂಧನ

ಉದ್ಯೋಗ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಿರಣ್ ಗೋಸಾವಿ ಸಹಾಯಕನ ಬಂಧನ
ಆರ್ಯನ್ ಜತೆ ಗೋಸಾವಿ ಸೆಲ್ಫಿ

Kiran Gosavi ಈ ಪ್ರಕರಣದೊಂದಿಗೆ ಗೋಸಾವಿ ವಿರುದ್ಧ ವಂಚನೆ ಮತ್ತು ನಕಲಿ ದಾಖಲೆಗಾಗಿ ಒಟ್ಟು ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಎರಡು ವರ್ಷಗಳ ಹಿಂದೆ ಪ್ರಕರಣದ ದೂರು ದಾಖಲಾಗಿತ್ತು.

TV9kannada Web Team

| Edited By: Rashmi Kallakatta

Oct 18, 2021 | 4:49 PM

ಮುಂಬೈ: ಉದ್ಯೋಗ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿ ಕಿರಣ್ ಗೋಸಾವಿಯ (Kiran Gosavi) ಸಹಾಯಕ ಶೆರ್ಬಾನೊ ಖುರೇಶಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್​​ನ್ನು(Aryan Khan) ಎನ್​​ಸಿಬಿ (NCB) ಬಂಧಿಸಿದಾಗ ಖಾಸಗಿ ಡಿಟೆಕ್ಟಿವ್ ಕಿರಣ್ ಗೋಸಾವಿ ಆರ್ಯನ್ ಜತೆ ಸೆಲ್ಫಿ ಕ್ಲಿಕ್ ಮಾಡಿದ್ದು ಆ ಚಿತ್ರ ವೈರಲ್ ಆಗಿತ್ತು.

ಗೋಸಾವಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಹಲವರನ್ನು ಬಂಧಿಸಿದ್ದು  ಈ ಪ್ರಕರಣದ ಸಾಕ್ಷಿಯಾದ ಕಿರಣ್ ಗೋಸಾವಿ ವಿರುದ್ಧ ಮತ್ತೊಂದು ವಂಚನೆ ಮತ್ತು ನಕಲಿ ದಾಖಲೆ ಪ್ರಕರಣವನ್ನು ದಾಖಲಿಸಲಾಗಿದೆ.

ಈ ಪ್ರಕರಣದೊಂದಿಗೆ ಗೋಸಾವಿ ವಿರುದ್ಧ ವಂಚನೆ ಮತ್ತು ನಕಲಿ ದಾಖಲೆಗಾಗಿ ಒಟ್ಟು ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಎರಡು ವರ್ಷಗಳ ಹಿಂದೆ ಪ್ರಕರಣದ ದೂರು ದಾಖಲಾಗಿತ್ತು. ಆದಾಗ್ಯೂ, ಪ್ರಕರಣದ ಎಫ್‌ಐಆರ್ ಅನ್ನು ಭಾನುವಾರ ಮಾತ್ರ ಪಾಲ್ಘರ್‌ನಲ್ಲಿ ಕೆಲ್ವಾ ಪೊಲೀಸರು ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ ಪ್ರಕರಣದ ಸಂತ್ರಸ್ತರಾದ ಉತ್ಕರ್ಶ್ ತಾರೆ ಮತ್ತು ಆದರ್ಶ್ ಕೇಣಿ ಅವರು 2018 ರಲ್ಲಿ ಗೋಸಾವಿಯೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಅವರಿಗೆ ಮಲೇಷ್ಯಾದ ಕೌಲಾಲಂಪುರ್ ಹೋಟೆಲ್‌ಗಳಲ್ಲಿ ಉದ್ಯೋಗ ನೀಡುವ ನೆಪದಲ್ಲಿ 1.65 ಲಕ್ಷ ರೂಪಾಯಿಗಳನ್ನು ವಂಚಿಸಿದ್ದಾರೆ.

ದೂರಿನ ಪ್ರಕಾರ ಗೋಸಾವಿ ಜನರಿಂದ ಹಣ ಪಡೆದ ನಂತರ ನಕಲಿ ಪ್ರವಾಸಿ ವೀಸಾಗಳನ್ನು ಮತ್ತು ವಿಮಾನ ಟಿಕೆಟ್ ಗಳನ್ನು ಹಸ್ತಾಂತರಿಸಿದ್ದಾರೆ. ಆ ಜನರು ವಿಮಾನ ನಿಲ್ದಾಣದಿಂದ ವಿಮಾನವನ್ನು ಹತ್ತಲು ಹೋದಾಗ, ಅವರ ದಾಖಲೆಗಳು ಮತ್ತು ಟಿಕೆಟ್ ಗಳನ್ನು ಪರಿಶೀಲಿಸಿದ ನಂತರ  ಸಿಐಎಸ್ಎಫ್ ಅಧಿಕಾರಿಗಳು ಹಿಂತಿರುಗಿಸಿದರು. ನಂತರ ಇಬ್ಬರೂ ಕೆಲ್ವಾ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಮೂರು ವರ್ಷಗಳ ನಂತರವೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಅಥವಾ ಯಾವುದೇ ಕ್ರಿಮಿನಲ್ ಅಪರಾಧ ದಾಖಲಿಸಲಿಲ್ಲ.

ನಾವು ಭಾನುವಾರ ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ನಮ್ಮ ತನಿಖೆ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೋಸಾವಿ ಅವರ ಹೆಸರು ಆರ್ಯನ್ ಖಾನ್ ಜೊತೆಗಿನ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾಗ ಮುನ್ನೆಲೆಗೆ ಬಂದಿದ್ದು ಮತ್ತು ಆತ ಎನ್‌ಸಿಬಿ ಅಧಿಕಾರಿ ಎಂದು ನಂಬಲಾಗಿತ್ತು. ಆದರೆ ಆತ ಎನ್​​ಸಿಬಿ ಅಧಿಕಾರಿ ಅಲ್ಲ ಎಂದು ಪ್ರಸ್ತುತ ಸಂಸ್ಥೆ ಸ್ಪಷ್ಟನೆ ನೀಡಿತ್ತು. ಆದಾಗ್ಯೂ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಪತ್ರಿಕಾಗೋಷ್ಠಿ ನಡೆಸಿ ಗೋಸಾವಿಗೆ ಕ್ರಿಮಿನಲ್ ಇತಿಹಾಸವಿದೆ ಎಂದು ಆರೋಪಿಸಿದ ನಂತರ ಮತ್ತೆ ಸುದ್ದಿಯಾದರು.

ಖಾಸಗಿ ಪತ್ತೇದಾರಿ ಮತ್ತು ಪ್ಲೇಸ್ ಮೆಂಟ್ ಏಜೆನ್ಸಿಯ ಮಾಲೀಕರಾದ ಗೋಸಾವಿ ಕ್ರೂಸ್ ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ 10 ಸ್ವತಂತ್ರ ಸಾಕ್ಷಿಗಳಲ್ಲೊಬ್ಬರು ಎಂದು ಎನ್​ಸಿಬಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಆರ್ಯನ್ ಖಾನ್ ಜತೆ ಸೆಲ್ಫಿ ಕ್ಲಿಕ್ಕಿಸಿದ ‘ಡಿಟೆಕ್ಟಿವ್’ ಕಿರಣ್ ಗೋಸಾವಿಗೆ ಪುಣೆ ಪೊಲೀಸರಿಂದ ಲುಕೌಟ್ ನೋಟಿಸ್

Follow us on

Related Stories

Most Read Stories

Click on your DTH Provider to Add TV9 Kannada