ಬ್ರೆಜಿಲ್ ಮಾಡೆಲ್ ಫೋಟೊ ಬಳಸಿ ಹರ್ಯಾಣದಲ್ಲಿ 22 ಹೆಸರುಗಳಲ್ಲಿ ನಡೆದಿತ್ತು ಮತದಾನ: ರಾಹುಲ್ ಗಾಂಧಿ
ಕರ್ನಾಟಕದ ಆಳಂದ, ಮಹಾದೇವಪುರದಂತೆ ಹರಿಯಾಣದಲ್ಲಿ ಕೂಡ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಒಂದೇ ವ್ಯಕ್ತಿ ಹಲವು ಕಡೆ ಮತದಾನ ಮಾಡಿರುವ ನಿದರ್ಶನಗಳಿವೆ. ಅದರಲ್ಲೂ ಬ್ರೆಜಿಲ್ ಮಾಡೆಲ್ ಫೋಟೊ ಬಳಸಿ 10 ಬೂತ್ಗಳಲ್ಲಿ 22 ಹೆಸರಿನಲ್ಲಿ ಮತದಾನ ನಡೆದಿತ್ತು ಎಂದು ಹೇಳಿದ್ದಾರೆ. ಹರ್ಯಾಣದಲ್ಲ 25 ಲಕ್ಷ ಮತಗಳ್ಳತನವಾಗಿದೆ ಎಂದು ದೂರಿದ್ದಾರೆ.

ನವದೆಹಲಿ, ನವೆಂಬರ್ 05: ಕರ್ನಾಟಕದ ಆಳಂದ, ಮಹಾದೇವಪುರದಂತೆ ಹರಿಯಾಣದಲ್ಲಿ ಕೂಡ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಹೇಳಿದ್ದಾರೆ. ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಒಂದೇ ವ್ಯಕ್ತಿ ಹಲವು ಕಡೆ ಮತದಾನ ಮಾಡಿರುವ ನಿದರ್ಶನಗಳಿವೆ. ಅದರಲ್ಲೂ ಬ್ರೆಜಿಲ್ ಮಾಡೆಲ್ ಫೋಟೊ ಬಳಸಿ 10 ಬೂತ್ಗಳಲ್ಲಿ 22 ಹೆಸರಿನಲ್ಲಿ ಮತದಾನ ನಡೆದಿತ್ತು ಎಂದು ಹೇಳಿದ್ದಾರೆ. ಹರ್ಯಾಣದಲ್ಲ 25 ಲಕ್ಷ ನಕಲಿ ಮತದಾರರಿದ್ದಾರೆ ಎಂದು ದೂರಿದ್ದಾರೆ.
ಹಲವು ರಾಜ್ಯಗಳಲ್ಲಿ ಮತ ಕಳ್ಳತನದ ದೂರುಗಳು ನಮಗೆ ಬಂದಿವೆ, ಹರಿಯಾಣದ ಎಕ್ಸಿಟ್ ಪೋಲ್ನಲ್ಲಿ ಕಾಂಗ್ರೆಸ್ ಗೆಲ್ಲುವ ಮುನ್ಸೂಚನೆ ನೀಡಲಾಗಿತ್ತು. ಅಂಚೆ ಮತಪತ್ರಗಳಲ್ಲಿ ಕೂಡ ಕಾಂಗ್ರೆಸ್ ಮುಂದಿತ್ತು. ಆದರೆ ಕೊನೆಯಲ್ಲಿ ಫಲಿತಾಂಶ ಮಾತ್ರ ಉಲ್ಟಾ ಆಗಿತ್ತು ಎಂದರು.
ರಾಹುಲ್ ಗಾಂಧಿ ಇಡೀ ರಾಜ್ಯದಲ್ಲಿ ಜನಾದೇಶವನ್ನು ಕದ್ದಿದ್ದಾರೆ, ಕರ್ನಾಟಕದ ನಂತರ ಈಗ ಹರಿಯಾಣದಲ್ಲಿ ಮತ ಕಳ್ಳತನ ಪತ್ತೆಯಾಗಿದೆ, ಆರಂಭದಲ್ಲಿ ನಾವು ಅದನ್ನು ನಂಬಿರಲಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಗೆಲುವು ಸೋಲಾಗಿ ಬದಲಾಯಿತು. ಹರಿಯಾಣದ ಎಲ್ಲರೂ ಇದನ್ನು ಕಾಂಗ್ರೆಸ್ ಗೆಲುವು ಎಂದು ಕರೆಯುತ್ತಿದ್ದರು. ದೇಶದ ಯುವಕರ ಭವಿಷ್ಯವನ್ನು ಕದ್ದಿದ್ದಾರೆ ಎಂದರು.
ಮತ್ತಷ್ಟು ಓದಿ: ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ಆರೋಪ: ಅಂಕಿಅಂಶ ಸಮೇತ ರಾಹುಲ್ ಗಾಂಧಿ ಆರೋಪಕ್ಕೆ ಚುನಾವಣಾ ಆಯೋಗ ತೀರುಗೇಟು
ಇದಕ್ಕೂ ಮೊದಲು, ಸೆಪ್ಟೆಂಬರ್ 17 ರಂದು ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು. ಕರ್ನಾಟಕದ ಮಹಾದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಪ್ರಯತ್ನಿಸಿದ ಜನರ ತಾಂತ್ರಿಕ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸುವ ಮೂಲಕ ಸಿಇಸಿ ಭಾರತೀಯ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿರುವವರನ್ನು ರಕ್ಷಿಸುತ್ತಿದೆ ಎಂದು ಅವರು ಆರೋಪಿಸಿದ್ದರು. ಚುನಾವಣಾ ಆಯೋಗ (ಇಸಿ) ಕಾಂಗ್ರೆಸ್ ನಾಯಕನ ಆರೋಪಗಳನ್ನು ಸುಳ್ಳು ಮತ್ತು ಆಧಾರರಹಿತ ಎಂದು ತಳ್ಳಿಹಾಕಿತ್ತು.
#WATCH | Delhi: Lok Sabha LoP Rahul Gandhi says, “…We have crystal clear proof that 25 lakh voters (in Haryana) are fake, that they either don’t exist or they are duplicate or are designed in a way for anybody to vote…1 in 8 voters in Haryana are fake, that’s 12.5%…” pic.twitter.com/Tlo5wsTZyY
— ANI (@ANI) November 5, 2025
ರಾಜ್ಯದಲ್ಲಿ 5 ಲಕ್ಷ 21 ಸಾವಿರ 619 ನಕಲಿ ಮತಗಳಿವೆ ಎಂದು ರಾಹುಲ್ ಹೇಳಿದರು. ಬ್ರೆಜಿಲ್‌ನ ಒಬ್ಬ ಮತದಾರರು 22 ಸ್ಥಳಗಳಲ್ಲಿ ಹೇಗೆ ಮತ ಚಲಾಯಿಸಿದ್ದಾರೆ ಎಂದು ರಾಹುಲ್ ಪ್ರಶ್ನೆ ಎತ್ತಿದ್ದಾರೆ. ಹರಿಯಾಣದಲ್ಲಿ, ಪ್ರತಿ 8 ರಲ್ಲಿ ಒಬ್ಬ ಮತದಾರರು ನಕಲಿ ಎಂದು ಅವರು ಹೇಳಿದರು. ಈ ಮತ ಕಳ್ಳತನ ಬೂತ್ ಮಟ್ಟದಲ್ಲಿ ನಡೆದಿಲ್ಲ ಎಂದು ಅವರು ಹೇಳಿದರು.
ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:52 pm, Wed, 5 November 25




