ಲಡಾಖ್ ಮತ್ತು ಉತ್ತರಾಖಂಡ್ ಗಡಿಗಳಲ್ಲಿ ಚೀನಾ ಸೇನಾ ಪಡೆಯ ನಿಯೋಜನೆ ಪ್ರಮಾಣ ಹೆಚ್ಚುತ್ತಿದೆ. ಪೂರ್ವ ಮತ್ತು ಉತ್ತರ ಲಡಾಖ್ನಲ್ಲಿ ಚೀನಾದ ಸೈನಿಕರ ಸಂಖ್ಯೆ ಹೆಚ್ಚುತ್ತಿದ್ದು, ಅವರನ್ನು ಎದುರಿಸಲು ಭಾರತ ಕೂಡ ಎಲ್ಲ ರೀತಿಯ ಸಿದ್ಧತೆಯಲ್ಲಿ ತೊಡಗಿದೆ. ನಿನ್ನೆ ಈ ಬಗ್ಗೆ ಮಾತನಾಡಿದ್ದ ಸೇನಾ ಮುಖ್ಯಸ್ಥ ನರವಾನೆ ಕೂಡ, ತಾವು ಯಾವುದೇ ಸಂದರ್ಭ ಬಂದರೂ ಎದುರಿಸಲು ಸಜ್ಜಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರ, ಪ್ರಧಾನಿ ಮೋದಿಯನ್ನು ವ್ಯಂಗ್ಯಮಾಡಿದ್ದಾರೆ.
ಚೀನಾ+ಪಾಕಿಸ್ತಾನ+ಮಿ.56 ಇಂಚ್ -ಇವಿಷ್ಟೂ ಕೂಡಿಸಿದರೆ ಬರುವ ಉತ್ತರ ‘ಭಾರತದಲ್ಲಿ ಚೀನಾ ಯೋಧರ ಆಕ್ರಮಣ ಹೆಚ್ಚಳ’ ಎಂಬ ಉತ್ತರ ಬರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. (“China plus Pakistan plus ‘Mr 56 inch’ is equal to Increasing Chinese occupation of India’s land). ಚೀನಾ ಸೇನಾ ಪಡೆ ಲಡಾಖ್ನಲ್ಲಿ ನೀಡುತ್ತಿರುವ ಉಪಟಳದ ವಿಚಾರ ಇಟ್ಟುಕೊಂಡು ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಿಡಿಕಾರುತ್ತಿರುವುದು ಇದೇ ಮೊದಲೇನೂ ಇಲ್ಲ. ಹಿಂದೆ ಚೀನಾ ಸೈನಿಕರ ದಾಳಿಗೆ ಭಾರತದ ಸುಮಾರು 20 ಯೋಧರು ಮಡಿದಾಗಲೂ ಕಾಂಗ್ರೆಸ್ನ ರಾಹುಲ್ ಗಾಂಧಿ ಸೇರಿ ಹಲವು ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು.
चीन + पाकिस्तान + Mr 56”
=
भारत भूमि पर बढ़ता चीनी क़ब्ज़ा।#Ladakh #Uttarakhand pic.twitter.com/7rel1NFE6M— Rahul Gandhi (@RahulGandhi) October 3, 2021
ಉತ್ತರಾಖಂಡ್ನಲ್ಲಿ ಗಡಿ ದಾಟಿದ ಚೀನಾ?
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಸೈನಿಕರು ಆಗಸ್ಟ್ 30ರಂದು ಉತ್ತರಾಖಂಡ್ನ ಬಾರಾಹೋಟಿ ವಲಯದಲ್ಲಿ ಇರುವ ಗಡಿ ವಾಸ್ತವಿಕ ನಿಯಂತ್ರಣಾ ರೇಖೆ (ಎಲ್ಎಸಿ)ಯನ್ನು ದಾಟಿ ಬಂದಿದ್ದರು. ನಂತರ ಅಲ್ಲಿ ಕೆಲ ಕಾಲ ಇದ್ದು ವಾಪಸ್ ಹೋಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಹಾಗಂತ ಭಾರತೀಯ ಸೇನೆಯಿಂದಾಗಲಿ, ಸರ್ಕಾರದಿಂದಾಗಲೀ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇನ್ನು ಪೂರ್ವ ಲಡಾಖ್ನಲ್ಲಿ ಕಳೆದ ವರ್ಷ ಮೇ 5ರಿಂದಲೂ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಕಳೆದ ಜೂನ್ನಲ್ಲಿ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ದಾಳಿಗೆ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಅಂದಿನಿಂದಲೂ ಅಲ್ಲಿ ಆಗಾಗ ಉದ್ವಿಗ್ನ ಪರಿಸ್ಥಿತಿ ಉಂಟಾಗುತ್ತಿದೆ. ಎರಡೂ ದೇಶಗಳು ತಮ್ಮ ಮಿಲಿಟರಿ ಪ್ರಾಬಲ್ಯ ಹೆಚ್ಚಿಸುತ್ತಿವೆ. ಅದರಾಚೆ ಹಲವು ಸುತ್ತಿನ ರಾಜತಾಂತ್ರಿಕ, ಮಿಲಿಟರಿ ಹಂತದ ಮಾತುಕತೆಗಳೂ ಭಾರತ-ಚೀನಾ ಮಧ್ಯೆ ನಡೆದಿದೆ. ಆದರೆ ಚೀನಾ ಮತ್ತೆಮತ್ತೆ ಅಲ್ಲಿ ತನ್ನ ಉಪಟಳ ಮುಂದುವರಿಸಿದೆ.
ಇದನ್ನೂ ಓದಿ: ಪೊಲೀಸ್ ಗೆಟಪ್ನಲ್ಲಿ ಬ್ಯಾಡ್ ಮ್ಯಾನರ್ಸ್ ತೋರಿಸಲು ಬಂದ ಅಭಿಷೇಕ್ ಅಂಬರೀಷ್; ಇಲ್ಲಿದೆ ಸ್ಯಾಂಪಲ್
ಶೇಂಗಾ ಬಿತ್ತನೆ ಬೀಜಕ್ಕಾಗಿ ಪರದಾಟ; ರೈತ ಸಂಪರ್ಕ ಕೇಂದ್ರದ ಮುಂದೆ 3 ದಿನಗಳಿಂದ ಕಾದರೂ ರೈತರಿಗೆ ನಿರಾಸೆ