ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್ ಆರೋಗ್ಯ ಸ್ಥಿತಿ ಗಂಭೀರ; ಲಖನೌ ಆಸ್ಪತ್ರೆಗೆ ದಾಖಲು
ಮಹಾಂತ ನೃತ್ಯ ಗೋಪಾಲದಾಸ್ ಅವರಿಗೆ 2020ರ ಆಗಸ್ಟ್ನಲ್ಲಿ ಕೊವಿಡ್ 19 ಸೋಂಕು ತಗುಲಿತ್ತು. ಆಗ ಮೇದಾಂತ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಲಖನೌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಬೆಳಗ್ಗೆ ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದ್ದು ಕೂಡಲೇ ಉತ್ತರಾಧಿಕಾರಿ ಕಮಲ ನಯನದಾಸ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿದೆ. ಗೋಪಾಲದಾಸ್ಗೆ ಸೂಕ್ತ ಚಿಕಿತ್ಸೆ ನೀಡಲು ಯೋಗಿ ಆದಿತ್ಯನಾತ್ ಸಂಬಂಧಪಟ್ಟ ವೈದ್ಯರಿಗೆ ಸೂಚಿಸಿದ್ದಾರೆ.
ಮಹಾಂತ ನೃತ್ಯ ಗೋಪಾಲದಾಸ್ ಅವರು ಕೆಮ್ಮು, ಅತಿಯಾದ ಮೂರ್ತ ವಿಸರ್ಜನೆ ಸಮಸ್ಯೆ ಮತ್ತು ಆಕ್ಸಿಜನ್ ಕೊರತೆಯಿಂದ ಬಳಲುತ್ತಿದ್ದಾರೆ. ಇಂದು ಮುಂಜಾನೆಯಿಂದಲೇ ಅವರ ಆರೋಗ್ಯ ಕ್ಷೀಣಿಸಲು ಪ್ರಾರಂಭವಾದಾಗ ಅಯೋಧ್ಯೆಯ ವೈದ್ಯರ ತಂಡ ಬಂದು ನೋಡತೊಡಗಿದ್ದರು. ಸಾಧ್ಯವಾದಷ್ಟು ಚಿಕಿತ್ಸೆ ಮಾಡಿದ್ದರು. ಆದರೆ ಆರೋಗ್ಯ ಮತ್ತಷ್ಟು ಹದಗೆಡುತ್ತಿದ್ದಂತೆ ಲಖನೌಗೆ ಕರೆದುಕೊಂಡು ಹೋಗಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಕೊರೊನಾ ಸೋಂಕಿಗೆ ಒಳಗಾಗಿದ್ದರು ಮಹಾಂತ ನೃತ್ಯ ಗೋಪಾಲದಾಸ್ ಅವರಿಗೆ 2020ರ ಆಗಸ್ಟ್ನಲ್ಲಿ ಕೊವಿಡ್ 19 ಸೋಂಕು ತಗುಲಿತ್ತು. ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ್ದ ಶ್ರೀರಾಮಮಂದಿರ ಭೂಮಿಪೂಜೆಯಲ್ಲಿ ಅವರು ಪಾಲ್ಗೊಂಡಿದ್ದರು. ಅದಾದ ಎಂಟು ದಿನಕ್ಕೆ ಅವರಲ್ಲಿ ಕೊವಿಡ್ 19 ಸೋಂಕು ದೃಢಪಟ್ಟಿತ್ತು. ಆಗ ಅವರನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆಗಸ್ಟ್ 5ರ ಪೂಜೆಯಂದು ಮಾತನಾಡಿದ್ದ ಮಹಾಂತ ನೃತ್ಯ ಅವರು, ಶ್ರೀರಾಮಮಂದಿರ ನಿರ್ಮಾಣ ಆದಷ್ಟು ಬೇಗ ಆಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಶಾರುಖ್ ಖಾನ್ಗೆ ಹೆಚ್ಚಿದ ಸಂಕಷ್ಟ; ಡ್ರಗ್ಸ್ ಕೇಸ್ನಲ್ಲಿ ಆರ್ಯನ್ ಖಾನ್ ಅರೆಸ್ಟ್
ಪೊಲೀಸ್ ಗೆಟಪ್ನಲ್ಲಿ ಬ್ಯಾಡ್ ಮ್ಯಾನರ್ಸ್ ತೋರಿಸಲು ಬಂದ ಅಭಿಷೇಕ್ ಅಂಬರೀಷ್; ಇಲ್ಲಿದೆ ಸ್ಯಾಂಪಲ್