AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಗಡಿ ಸಮೀಪದ ಜಮ್ಮುವಿನ ಗ್ರಾಮದಲ್ಲಿ ಡ್ರೋನ್ ಬೀಳಿಸಿದ ಪೊಟ್ಟಣ ಪೊಲೀಸ್ ವಶಕ್ಕೆ

ಕಳೆದ ಒಂದೂವರೆ ವರ್ಷಗಳಲ್ಲಿ ಡ್ರೋನ್‌ಗಳನ್ನು ಬಳಸಿ ಎಸೆಯಲಾದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳಲ್ಲಿ 16 ಎಕೆ 47 ರೈಫಲ್‌ಗಳು, ಮೂರು ಎಂ 4 ಯುಎಸ್ ನಿರ್ಮಿತ ರೈಫಲ್‌ಗಳು, 34 ಪಿಸ್ತೂಲ್‌ಗಳು, 15 ಗ್ರೆನೇಡ್‌ಗಳು ಮತ್ತು 18 ಐಇಡಿಗಳು ಸೇರಿವೆ.

ಪಾಕಿಸ್ತಾನದ ಗಡಿ ಸಮೀಪದ ಜಮ್ಮುವಿನ ಗ್ರಾಮದಲ್ಲಿ ಡ್ರೋನ್ ಬೀಳಿಸಿದ ಪೊಟ್ಟಣ ಪೊಲೀಸ್ ವಶಕ್ಕೆ
ಡ್ರೋನ್ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on: Oct 03, 2021 | 5:13 PM

Share

ಶ್ರೀನಗರ: ಅಂತರರಾಷ್ಟ್ರೀಯ ಗಡಿಯ ಸಮೀಪದ ಜಮ್ಮು ಜಿಲ್ಲೆಯ ಅಲ್ಮೋರ್ ಮಂಡಲ್ (Almore Mandal ) ಗ್ರಾಮದಲ್ಲಿ ಶನಿವಾರ ರಾತ್ರಿ ಪೊಲೀಸರು ಒಂದು ಪ್ಯಾಕೆಟ್ ವಶಪಡಿಸಿಕೊಂಡಿದ್ದಾರೆ. ಪಾಕಿಸ್ತಾನದ ಕಡೆಯಿಂದ ಹಾರಿಹೋದ ಡ್ರೋನ್‌ನಿಂದ ಹಳದಿ ಪಾಲಿಥಿನ್ ಚೀಲದಲ್ಲಿ ಸುತ್ತಿದ ಪ್ಯಾಕೆಟ್ ಅನ್ನು ಕೆಳಗೆ ಬೀಳಿಸಲಾಯಿತು ಎಂದು ವರದಿಯಾಗಿದೆ. ಹಾರುವ ವಸ್ತುವಿನ ಶಬ್ದವನ್ನು ಕೇಳಿ ಎಚ್ಚೆತ್ತ ಗ್ರಾಮಸ್ಥರು ಸ್ಥಳೀಯ ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಈ ವರ್ಷದ ಜೂನ್ ನಲ್ಲಿ ಜಮ್ಮುವಿನ ವಾಯುಪಡೆ ನಿಲ್ದಾಣದ ಮೇಲೆ ದಾಳಿ ನಡೆದ ನಂತರ ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಹಾರಾಟ ಹೆಚ್ಚಾಗಿದೆ. ಜೂನ್ 26-27 ರ ಮಧ್ಯರಾತ್ರಿ ಎರಡು ಸ್ಫೋಟಗಳು ನಿಲ್ದಾಣದ ಹೈ ಸೆಕ್ಯುರಿಟಿ ಟೆಕ್ನಿಕಲ್ ಏರಿಯಾವನ್ನು ಬೆಚ್ಚಿಬೀಳಿಸಿವೆ. ಇಬ್ಬರು ಭಾರತೀಯ ವಾಯುಪಡೆಯ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪದೇ ಪದೇ ಯುಎವಿ ವೀಕ್ಷಣೆಗಳ ಹಿನ್ನೆಲೆಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು (ಎಂಎಚ್‌ಎ) ಡ್ರೋನ್‌ಗಳು, ಪ್ಯಾರಾಗ್ಲೈಡರ್‌ಗಳು, ಮೈಕ್ರೋಲೈಟ್ ವಿಮಾನಗಳು, ಹಾಟ್- ನಂತಹ ಉಪ-ಸಾಂಪ್ರದಾಯಿಕ ವೈಮಾನಿಕ ವೇದಿಕೆಗಳಿಂದ ಬೆದರಿಕೆಗಳನ್ನು ನಿರ್ವಹಿಸಲು ರೂಪಿಸಲಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿದೆ.

ಕಳೆದ ಒಂದೂವರೆ ವರ್ಷಗಳಲ್ಲಿ ಡ್ರೋನ್‌ಗಳನ್ನು ಬಳಸಿ ಎಸೆಯಲಾದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳಲ್ಲಿ 16 ಎಕೆ 47 ರೈಫಲ್‌ಗಳು, ಮೂರು ಎಂ 4 ಯುಎಸ್ ನಿರ್ಮಿತ ರೈಫಲ್‌ಗಳು, 34 ಪಿಸ್ತೂಲ್‌ಗಳು, 15 ಗ್ರೆನೇಡ್‌ಗಳು ಮತ್ತು 18 ಐಇಡಿಗಳು ಸೇರಿವೆ.

ಒಂದು ಅಥವಾ ಎರಡು ಡ್ರೋನ್ ಕರೆನ್ಸಿ ನೋಟುಗಳನ್ನು ಕೂಡ ಚೆಲ್ಲಿತ್ತು.ಇದುವರೆಗೆ ಅವರು 4 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. “ನಾವು ಸುಮಾರು 25-30 ಡ್ರೋನ್ ಗಳಿಂದ ಪೇಲೋಡ್‌ಗಳನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಅನೇಕ ಜನರನ್ನು ಬಂಧಿಸಿದ್ದೇವೆ” ಎಂದು ಪೊಲೀಸರು ಹೇಳಿದರು, ಅವರ ವಿಚಾರಣೆಯಲ್ಲಿ ಜೈಶ್-ಇ-ಮೊಹಮ್ಮದ್ ಮತ್ತು ಲಷ್ಕರ್-ಇ-ತೊಯ್ಬಾದ ಸದಸ್ಯರು ಎಂದು ತಿಳಿದುಬಂದಿದೆ. ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆಗೆ ಈ ವಿಧಾನವನ್ನು ಬಳಸುತ್ತಿದ್ದರು.

ಇದನ್ನೂ ಓದಿ: West Bengal By-election Results: ಭವಾನಿಪುರ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ಗೆಲುವು

ಇದನ್ನೂ ಓದಿ: ಡ್ರಗ್ಸ್​ ಕೇಸ್​: ಎನ್​ಸಿಬಿ ಕಚೇರಿಯಲ್ಲಿ ಗಪ್​ಚುಪ್​ ಆಗಿ ಕುಳಿತ ಶಾರುಖ್​ ಪುತ್ರ ಆರ್ಯನ್​ ಖಾನ್​; ಇಲ್ಲಿದೆ ವಿಡಿಯೋ

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?