ಶೇಂಗಾ ಬಿತ್ತನೆ ಬೀಜಕ್ಕಾಗಿ ಪರದಾಟ; ರೈತ ಸಂಪರ್ಕ ಕೇಂದ್ರದ ಮುಂದೆ 3 ದಿನಗಳಿಂದ ಕಾದರೂ ರೈತರಿಗೆ ನಿರಾಸೆ

ರೈತರು ಜಮೀನಿನಲ್ಲಿ ಕೆಲಸ ಕಾರ್ಯಗಳನ್ನು ಬಿಟ್ಟು ರೈತ ಸಂಪರ್ಕ ಕೇಂದ್ರ ಮುಂದೆಯೇ ನಿಲ್ಲುವಂತ ಪರಸ್ಥಿತಿ ಎದುರಾಗಿದೆ. ಬೆಳಗ್ಗೆ 5 ಗಂಟೆಗೆ ರೈತ ಸಂಪರ್ಕ ಕೇಂದ್ರಕ್ಕೆ ಬಂದು ಕ್ಯೂ ನಿಲ್ಲುತ್ತಿರುವ ರೈತರು ಸಂಜೆ ಆದರೂ, ಬೀಜ ಸಿಗದೆ ವಾಪಸ್ ಹೋಗ್ತಾಯಿದ್ದಾರೆ. ಕ್ಯೂ ನಿಲ್ಲಲು ಕುಟುಂಬದ ಇಬ್ಬರಿಂದ ಮೂವರು ಬರುವಂತಾಗಿದೆ.

ಶೇಂಗಾ ಬಿತ್ತನೆ ಬೀಜಕ್ಕಾಗಿ ಪರದಾಟ; ರೈತ ಸಂಪರ್ಕ ಕೇಂದ್ರದ ಮುಂದೆ 3 ದಿನಗಳಿಂದ ಕಾದರೂ ರೈತರಿಗೆ ನಿರಾಸೆ
ಶೇಂಗಾ ಬೀಜ ಖರೀದಿಗಾಗಿ ಸಾಲುಗಟ್ಟಿ ನಿಂತ ರೈತರು
Follow us
TV9 Web
| Updated By: preethi shettigar

Updated on: Oct 03, 2021 | 3:21 PM

ಯಾದಗಿರಿ: ಜಿಲ್ಲೆಯ ರೈತರು ಮುಂಗಾರು ಬೆಳೆ ರಾಶಿ ಬಳಿಕ ಈಗ ಹಿಂಗಾರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ರೈತರು ಹಿಂಗಾರು ಬೆಳೆಯಾಗಿ ಶೇಂಗಾ ಬೆಳೆಯನ್ನೇ ಬೆಳೆಯುತ್ತಾರೆ. ಇದೆ ಕಾರಣದಿಂದ ಜಿಲ್ಲಾ ಕೇಂದ್ರಕ್ಕೆ ಬಂದು ಶೇಂಗಾ ಬೀಜವನ್ನು ಪಡೆಯುವುದಕ್ಕೆ ಮುಂದಾಗಿದ್ದಾರೆ. ಆದರೆ ಶೇಂಗಾ ಬೀಜಗಳನ್ನು ಪಡೆಯಲು ರೈತರು ಹರಸಾಹಸ ಪಡುವಂತಾಗಿದೆ. ಮೂರು ದಿನಗಳಿಂದ ರೈತ ಸಂಪರ್ಕ ಕೇಂದ್ರ ಮುಂದೆ ಕ್ಯೂ ನಿಂತರೂ ಶೇಂಗಾ ಬೀಜ ಮಾತ್ರ ಸಿಗುತ್ತಿಲ್ಲ. ಇದು ಸಹಜವಾಗಿಯೇ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಯಾದಗಿರಿ ಜಿಲ್ಲೆಯ ರೈತರು ಮುಂಗಾರು ಬೆಳೆಯ ರಾಶಿ ಮಾಡಿಕೊಂಡು ಈಗ ಹಿಂಗಾರು ಬಿತ್ತನೆ ಶುರು ಮಾಡಿದ್ದಾರೆ. ಯಾದಗಿರಿ ಹಾಗೂ ಗುರುಮಠಕಲ್ ತಾಲೂಕಿನ ಬಹುತೇಕ ರೈತರು ಹಿಂಗಾರು ಬೆಳೆಯಾಗಿ ಶೇಂಗಾ ಬೆಳೆಯನ್ನೇ ಬೆಳೆಯುತ್ತಾರೆ. ಹೀಗಾಗಿ ನಿತ್ಯ ರೈತರು ಯಾದಗಿರಿ ಜಿಲ್ಲಾ ಕೇಂದ್ರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸುವ ಕೆಲಸವನ್ನ ಮಾಡ್ತಾಯಿದ್ದಾರೆ. ಆದರೆ ರೈತರಿಗೆ ಸಕಾಲಕ್ಕೆ ಶೇಂಗಾ ಬೀಜ ಸಿಗದೆ ಇರುವ ಕಾರಣಕ್ಕೆ ರೈತರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ರೈತರು ಜಮೀನಿನಲ್ಲಿ ಕೆಲಸ ಕಾರ್ಯಗಳನ್ನು ಬಿಟ್ಟು ರೈತ ಸಂಪರ್ಕ ಕೇಂದ್ರ ಮುಂದೆಯೇ ನಿಲ್ಲುವಂತ ಪರಸ್ಥಿತಿ ಎದುರಾಗಿದೆ. ಬೆಳಗ್ಗೆ 5 ಗಂಟೆಗೆ ರೈತ ಸಂಪರ್ಕ ಕೇಂದ್ರಕ್ಕೆ ಬಂದು ಕ್ಯೂ ನಿಲ್ಲುತ್ತಿರುವ ರೈತರು ಸಂಜೆ ಆದರೂ, ಬೀಜ ಸಿಗದೆ ವಾಪಸ್ ಹೋಗ್ತಾಯಿದ್ದಾರೆ. ರೈತರು ಕ್ಯೂ ನಿಲ್ಲಲು ಕುಟುಂಬದ ಇಬ್ಬರಿಂದ ಮೂವರು ಬರುವಂತಾಗಿದೆ.

ರಿಯಾಯತಿ ದರದಲ್ಲಿ ಬೀಜ ಸಿಗುತ್ತೆ ಎನ್ನುವ ಕಾರಣಕ್ಕೆ ರೈತರು, ರೈತ ಸಂಪರ್ಕ ಕೇಂದ್ರದಿಂದ ಬೀಜವನ್ನು ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ. ಇನ್ನು ಹೊರಗಡೆ ಬೀಜವನ್ನು ಖರೀದಿ ಮಾಡಬೇಕಾದರೆ ಕ್ವಿಂಟಲ್​ಗೆ 11 ಸಾವಿರ ರೂ. ವರೆಗೆ ಕೊಡಬೇಕು. ಅದೆ ರೈತ ಸಂಪರ್ಕ ಕೇಂದ್ರದಲ್ಲಿ 9 ಸಾವಿರ ರೂ. ಕ್ವಿಂಟಲ್​ಗೆ ಸಿಗುತ್ತದೆ. ಇದೆ ಕಾರಣದಿಂದ 2 ಸಾವಿರು ಹಣ ಉಳಿಯುತ್ತೆ ಎನ್ನುವ ಕಾರಣಕ್ಕೆ ಬೀಜ ಪಡೆಯಲು ಮುಂದಾಗಿದ್ದು, ಶೇಂಗಾ ಬೀಜ ಸಿಗದೆ ಪರದಾಡುತ್ತಿದ್ದಾರೆ ಎಂದು ರೈತ ಗೋವಿಂದ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಹಿಂಗಾರು ಬೆಳೆಯಾಗಿ ಶೇಂಗಾವನ್ನು 30 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆಯಲು ಗುರಿ ಹೊಂದಲಾಗಿದೆ. ಇನ್ನು 30 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಶೇಂಗಾ ಬೆಳೆಯಲು ಸುಮಾರು 12 ಸಾವಿರ ಕ್ವಿಂಟಲ್ ನಷ್ಟು ಶೇಂಗಾ ಬೀಜ ಬೇಕಾಗಿದೆ. ಆದರೆ ರೈತ ಸಂಪರ್ಕ ಕೇಂದ್ರಕ್ಕೆ ಸಕಾಲಕ್ಕೆ ಬೀಜ ಪೂರೈಕೆ ಆಗುತ್ತಿಲ್ಲ. ಹೀಗಾಗಿ ರೈತರು 3 ದಿನದಿಂದ  ಕ್ಯೂ ನಿಲ್ಲುವಂತಾಗಿದೆ.

ರೈತರ ಪ್ರತಿಯೊಂದು ಪಹಾಣಿಯಿಂದ ಒಂದೊಂದು ಕ್ವಿಂಟಲ್ ಮಾತ್ರ ವಿತರಣೆ ಮಾಡಲಾಗುತ್ತಿದೆ. ಆದರೆ ಐದಾರು ಎಕರೆ ಬಿತ್ತನೆ ಮಾಡಬೇಕು ಅಂತ ಅಂದುಕೊಂಡಿದ್ದ ರೈತರಿಗೆ ಬೀಜ ಸಿಗ್ತಾಯಿಲ್ಲ. ಮೂರು ದಿನಗಳಿಂದ ಕ್ಯೂ ನಿಂತರೂ ಕೇವಲ ಒಂದು ಕ್ವಿಂಟಲ್ ಮಾತ್ರ ಸಿಗುತ್ತಾ ಇದೆ. ಇನ್ನು ಒಂದು ಎಕರೆ ಬಿತ್ತನೆ ಮಾಡಬೇಕಾದರೆ ಒಂದು ಕ್ವಿಂಟಾಲ್ ಬೀಜ ಬೇಕು. ಆದರೆ ರೈತ ಸಂಪರ್ಕ ಕೇಂದ್ರದಲ್ಲಿ ಕೇವಲ ಒಂದೇ ಕ್ವಿಂಟಲ್ ನೀಡಿದರೆ ಹೇಗೆ ಬಿತ್ತನೆ ಮಾಡಬೇಕು ಎಂದು ರೈತರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಮುಂಗಾರು ಬೆಳೆಯನ್ನು ರಾಶಿ ಮಾಡಿಕೊಂಡಿರುವ ಅನ್ನದಾತರು, ಹಿಂಗಾರು ಬೆಳೆ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಸಕಾಲಕ್ಕೆ ಬೀಜ ಸಿಗದ ಕಾರಣ ಬಿತ್ತನೆ ದಿನಗಳು ಮುಗಿದು ಹೋಗಬಹುದು ಎನ್ನುವ ಆತಂಕದಲ್ಲಿದ್ದಾರೆ ರೈತರು. ಹೀಗಾಗಿ ಅಧಿಕಾರಿಗಳು ಸರಿಯಾಗಿ ಶೇಂಗಾ ಬೀಜಗಳನ್ನು ಪೂರೈಕೆ ಮಾಡಿ ಬಿತ್ತನೆಗೆ ಅನುಕೂಲ ಮಾಡಿಕೊಡಬೇಕಾಗಿದೆ.

ವರದಿ: ಅಮೀನ್ ಹೊಸುರ್

ಇದನ್ನೂ ಓದಿ:

ಬಿತ್ತನೆ ಬೀಜಕ್ಕೆ ಮುಗಿಬಿದ್ದ ರೈತರಿಗೆ ಲಾಠಿ ಏಟು; ಪೊಲೀಸರ ವಿರುದ್ದ ಆಕ್ರೋಶ ಹೊರಹಾಕಿದ ರೈತರು: ಬಳ್ಳಾರಿಯಲ್ಲಿ ನಡೆದಿದ್ದೇನು?

ಚಾಮರಾಜನಗರದಲ್ಲಿ ಬಿತ್ತನೆ ಬೀಜದ ಸಮಸ್ಯೆ ಇಲ್ಲ ಎಂದ ಕೃಷಿ ಸಚಿವರ ವಿರುದ್ಧ ರೈತರ ಆಕ್ರೋಶ

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ