ಬಿತ್ತನೆ ಬೀಜಕ್ಕೆ ಮುಗಿಬಿದ್ದ ರೈತರಿಗೆ ಲಾಠಿ ಏಟು; ಪೊಲೀಸರ ವಿರುದ್ದ ಆಕ್ರೋಶ ಹೊರಹಾಕಿದ ರೈತರು: ಬಳ್ಳಾರಿಯಲ್ಲಿ ನಡೆದಿದ್ದೇನು?
Police Lathicharge on Chilli Farmers: ಬಳ್ಳಾರಿ ನಗರದ ತೋಟಗಾರಿಕೆ ಇಲಾಖೆಯಲ್ಲಿ ಘಟನೆ ನಡೆದಿದ್ದು, ಬೆಳಗ್ಗೆಯಿಂದ ನೂರಾರು ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದರು. ಸರತಿ ಸಾಲಿನಲ್ಲಿ ನಿಂತಿರುವ ವೇಳೆ ರೈತರ ನೂಕುನುಗ್ಗಲು ಹೆಚ್ಚಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಚಾರ್ಜ್ ನಡೆದಿದೆ.
ಬಳ್ಳಾರಿ: ಮಕ್ಕಳು ಮರಿ ಅನ್ನದೆ, ಹೆಂಗಸರು ಗಂಡಸರು ಅನ್ನದೇ ಸರ್ಕಾರ ಕೊಡುವ ಬಿತ್ತನೆಯ ಬೀಜಕ್ಕೆ ಬೆಳಗ್ಗೆಯಿಂದ ಕಾದುಕುಳಿತಿದ್ದ ನೂರಾರು ರೈತಾಪಿ ವರ್ಗದ ಜನರ ಮೇಲೆ ಪೊಲೀಸರು ಲಘು ಲಾಠಿಚಾರ್ಜ್ ಮಾಡಿದ್ದಾರೆ. ಮೆಣಸಿನಕಾಯಿ ಬಿತ್ತನೆ ಬೀಜಕ್ಕೆ ಮುಗಿಬಿದ್ದ ರೈತರಿಗೆ ಲಾಠಿ ಏಟು ನೀಡಿದ್ದಾರೆ. ಲಾಠಿ ಏಟು ತಿಂದ ರೈತರು ಪೊಲೀಸರ ವಿರುದ್ದ ತಮ್ಮ ಆಕ್ರೋಶ, ಅಸಮಾಧಾನ ಹೊರಹಾಕಿದ್ದಾರೆ.
ಬಳ್ಳಾರಿ ನಗರದ ತೋಟಗಾರಿಕೆ ಇಲಾಖೆಯಲ್ಲಿ ಘಟನೆ ನಡೆದಿದ್ದು, ಬೆಳಗ್ಗೆಯಿಂದ ನೂರಾರು ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದರು. ಸರತಿ ಸಾಲಿನಲ್ಲಿ ನಿಂತಿರುವ ವೇಳೆ ರೈತರ ನೂಕುನುಗ್ಗಲು ಹೆಚ್ಚಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಚಾರ್ಜ್ ನಡೆದಿದೆ.
ತಹಸೀಲ್ದಾರ್ ಕಚೇರಿ ರೈತ ಸಂಪರ್ಕ ಕೇಂದ್ರ ಆವರಣದಲ್ಲಿ ಬೆಳಗ್ಗಯಿಂದಲೇ ಕಾದುಕುಳಿತಿದ್ದ ನೂರಾರು ರೈತರು
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತಲೂ ಅಧಿಕ ಮಳೆ ಶುರು ಆಗಿರೋದರಿಂದಲೇ ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಬಿತ್ತನೆ ಕಾರ್ಯ ಚುರುಕಾಗಿದೆ. ನಾನಾ ತಳಿಯ ಬಿತ್ತನೆ ಬೀಜ ಖರೀದಿಗಾಗಿ ಉಭಯ ಜಿಲ್ಲೆಗಳ (Bellary Vijayanagara Chilli Farmers) ರೈತ ಸಂಪರ್ಕ ಕೇಂದ್ರಗಳ ಎದುರು ರೈತರು ಬೆಳಗ್ಗೆಯಿಂದಲೇ ಜಮಾಯಿಸಿದ್ದರು. ಮೆಣಸಿನಕಾಯಿ ಬಿತ್ತನೆಯ ಬೀಜ (Chilli seeds) ಖರೀದಿಸಲು ಹೆಂಗಸರು, ಮಕ್ಕಳು ಅನ್ನದೇ ರೈತಾಪಿ ಜನ ಮುಗಿಬಿದ್ದಿದ್ದಾರೆ.
ಇಂದು ಅರ್ಧ ಅನ್ಲಾಕ್ ಜಾರಿಗೊಂಡಿದ್ದರಿಂದ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ರೈತ ಸಂಪರ್ಕ ಕೇಂದ್ರಗಳು ಆರಂಭವಾದ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರದ (Raitha Samparka Kendra) ಎದುರು ಬೆಳ್ಳಂಬೆಳಿಗ್ಗೆಯಿಂದಲೇ ನೂರಾರು ರೈತರು ಮೆಣಸಿನಕಾಯಿ ಬೀಜ ಖರೀದಿಗಾಗಿ ಕಿಕ್ಕಿರಿದು ಸೇರಿದರು.
ಇದನ್ನೂ ಓದಿ: ಮುಂಗಾರು ಜೋರು, ಅನ್ಲಾಕ್ ಜಾರಿ, ಗರಿಗೆದರಿದ ರೈತ ಚಟುವಟಿಕೆ, ಬಿತ್ತನೆಬೀಜ ಖರೀದಿಗೆ ಕಿಕ್ಕಿರಿದು ಜಮಾಯ್ಸಿದ ರೈತರು!
(Police Lathicharge on Chilli Farmers at raitha samparka kendra in bellary)
Published On - 4:18 pm, Mon, 14 June 21