ನವಜೋತ್ ಸಿದ್ಧು ಮತ್ತು ಪ್ರಿಯಾಂಕಾ ನಡುವೆ ಮಾತುಕತೆ ನಡೆದ ನಂತರ ವರಸೆ ಬದಲಿಸಿದ ರಾಹುಲ್ ಪಂಜಾಬಿನ ನಾಯಕನನ್ನು ಮನೆಗೆ ಕರೆಸಿಕೊಂಡರು!

ಬುಧವಾರದ ಸಭೆಗಳಲ್ಲಿ ಗಾಂಧಿಗಳು, ಅಮರಿಂದರ್ ಸಿಂಗ್ ವಿರುದ್ಧ ಪ್ರತಿದಿನ ಕಿಡಿಕಾರುತ್ತಿರುವ ಸಿದ್ಧು ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಿದ್ದಾರೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ನವಜೋತ್ ಸಿದ್ಧು ಮತ್ತು ಪ್ರಿಯಾಂಕಾ ನಡುವೆ ಮಾತುಕತೆ ನಡೆದ ನಂತರ ವರಸೆ ಬದಲಿಸಿದ ರಾಹುಲ್ ಪಂಜಾಬಿನ ನಾಯಕನನ್ನು ಮನೆಗೆ ಕರೆಸಿಕೊಂಡರು!
ನವಜೋತ್ ಸಿಂಗ್ ಸಿದ್ಧು ಮತ್ತು ರಾಹುಲ್ ಗಾಂಧಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jun 30, 2021 | 10:37 PM

ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಅವರಿಗೆ ಸಾರ್ವಜನಿಕವಾಗಿ ಸುಳ್ಳು ಹೇಳುವ ಅವಶ್ಯಕತೆ ಯಾಕೆ ಎದುರಾಗುತ್ತದೆ ಅಂತ ಅವರೇ ಹೇಳಬೇಕು. ಕೇವಲ ಒಂದು ದಿನದ ಹಿಂದೆಯಷ್ಟೇ ಪಂಜಾಬಿನಲ್ಲಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ವಿರುದ್ಧ ಸಮರ ಸಾರಿ ರಾಜ್ಯ ಕಾಂಗ್ರೆಸ್​ನಲ್ಲಿ ತಲ್ಲಣ ಹುಟ್ಟಿಸಿರುವ ನವಜೋತ್ ಸಿಂಗ್ ಸಿದ್ಧು ಅವರ ಜೊತೆ ಯಾವುದೇ ಮೀಟಿಂಗ್ ಫಿಕ್ಸ್ ಆಗಿಲ್ಲ ಎಂದು ಹೇಳಿದ್ದ ಅವರು ಇಂದು (ಬುಧವಾರ) ಅದೇ ನಾಯಕನೊಂದಿಗೆ ತಮ್ಮ ನಿವಾಸದಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಇಂದು ಬೆಳಗ್ಗೆ ಸಿದ್ಧು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ 4-ತಾಸುಗಳ ಸುದೀರ್ಘ ಮಾತುಕತೆ ನಡೆಸಿ ಅದರ ಬಗ್ಗೆ ಟ್ವೀಟ್​ ಸಹ ಮಾಡಿದ್ದರು. ಅವರೊಂದಿಗೆ ನಡೆದ ಮಾತುಕತೆಯ ವಿವರವನ್ನು ಸಿದ್ಧು ಮಾಧ್ಯಮದವರರೊಂದಿಗೆ ಹೇಳಿಕೊಳ್ಳಲಿಲ್ಲ.

ರಾಹುಲ್ ಅವರೊಂದಿಗೆ ಉತ್ತಮ ಭಾಂಧವ್ಯ ಇಟ್ಟುಕೊಂಡಿರುವ 57-ವರ್ಷ ವಯಸ್ಸಿನ ಸಿದ್ಧು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗಾಂಧಿಗಳನ್ನು ಬೇಟಿಯಾಗುವ ಹಟ ಮಾಡುತ್ತಿದ್ದರು. ಮಂಗಳವಾರ ಅವರು ಗಾಂಧಿಗಳನ್ನು ಭೇಟಿಯಾಗಲು ದೆಹಲಿಗೆ ಹೋಗುತ್ತಿರುವುದಾಗಿ ಹೇಳಿದ ನಂತರ ಪ್ರತಿಕ್ರಿಯಿಸಿದ್ದ ರಾಹುಲ್, ಸಿದ್ಧು ಜೊತೆ ಮೀಟಿಂಗ್ ನಿಗದಿಯಾಗಿಲ್ಲ ಎಂದು ಹೇಳಿದ್ದರು.

ಪಂಜಾಬ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ಬೆಂಬಲ ಮುಂದುವರಿಸುವುದಾಗಿ ಹೇಳಿರುವ ಕಾಂಗ್ರೆಸ್, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುವುದು ಎಂದು ಹೇಳಿದೆ. ಆದರೆ ಕಳೆದ ವಾರ ಅಮರಿಂದರ್ ಸಿಂಗ್ ಹೈಕಮಾಂಡನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದರೂ ಗಾಂಧಿಗಳು ಅವರಿಗೆ ಭೇಟಿಯ ಅವಕಾಶ ಕಲ್ಪಿಸಿರಲಿಲ್ಲ. ಅಮರಿಂದರ್ ಅವರನ್ನು ಗಾಂಧಿಗಳು ಕಡೆಗಣಿಸುತ್ತಿದ್ದಾರೆ ಎಂದು ರಾಜಕೀಯ ವಲಯಗಳಲ್ಲಿ ಚರ್ಚೆಯಾಗುತ್ತಿದೆ.

ಬುಧವಾರದ ಸಭೆಗಳಲ್ಲಿ ಗಾಂಧಿಗಳು, ಅಮರಿಂದರ್ ಸಿಂಗ್ ವಿರುದ್ಧ ಪ್ರತಿದಿನ ಕಿಡಿಕಾರುತ್ತಿರುವ ಸಿದ್ಧು ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಿದ್ದಾರೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಸಿದ್ಧು ಮತ್ತು ಪ್ರಿಯಾಂಕಾ ನಡುವೆ ನಡೆದ ಸಭೆ ಇಬ್ಬರು ಪ್ರಮುಖ ನಾಯಕರ ನಡುವೆ ಜಾರಿಯಲ್ಲಿರುವ ಕಾದಾಟವನ್ನು ಕೊನೆಗಾಣಿಸಿಬಹುದು ಎಂದು ಹೇಳಲಾಗುತ್ತಿದೆ. ಎರಡು ವರ್ಷಗಳ ಹಿಂದೆ ರಾಜಸ್ತಾನದಲ್ಲಿ ಇಂಥದ್ದೇ ಪರಿಸ್ಥಿತಿ ತಲೆದೋರಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ನಡುವೆ ಭಾರೀ ಸ್ವರೂಪದ ವಿರಸ ಉಂಟಾಗಿ ಪಕ್ಷ ಒಡೆಯುವ ಪರಿಸ್ಥಿತಿ ಎದುರಾದಾಗಲೂ ಪ್ರಿಯಾಂಕಾ ಅವರೇ ಪರಿಸ್ಥಿತಿಯನ್ನು ತಿಳಿಯಾಗಿಸಿದ್ದರು.

2017 ರ ಪಂಜಾಬ್ ವಿಧಾನ ಸಭೆ ಚುನಾವಣೆಗೆ ಮೊದಲು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಸಿದ್ಧು ಅವರು ಮತ್ತೆ ಪಕ್ಷ ಬದಲಾಯಿಸಲಿದ್ದಾರೆ ಅಂತ ಮೇ ತಿಂಗಳಲ್ಲಿ ವರದಿಯಾಗಿತ್ತು. ಇದನ್ನು ಹೇಳಿದ್ದು ಖುದ್ದು ಅಮರಿಂದರ್ ಅವರೇ ಎನ್ನುವುದು ಗಮಾನರ್ಹ. ಸ್ಥಳೀಯ ಚ್ಯಾನೆಲ್​ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮುಖ್ಯಮಂತ್ರಿಗಳು, ಸಿದ್ಧು ಅವರು ಅರವಿಂದ್ ಕೇಜ್ರಿವಾಲ್ ಜೊತೆ ಮಾತುಕತೆ ನಡೆಸಿದ್ದು ಇಷ್ಟರಲ್ಲೇ ಆಪ್ ಪಕ್ಷ ಸೇರಲಿದ್ದಾರೆ ಎಂದು ಹೇಳಿದ್ದರು.

ಇದನ್ನು ಕೇಳಿ ಕೋಪೋದ್ರಿಕ್ತರಾಗಿದ್ದ ಸಿದ್ಧು ತಮ್ಮ ವಿರುದ್ಧ ಮಾಡಿದ ಆರೋಪಗಳನ್ನು ಸಾಬೀತು ಮಾಡುವಂತೆ ಸವಾಲೆಸೆದಿದ್ದರು.

ಸರ್ಕಾರದಲ್ಲಿ ಒಂದು ನಿರ್ಣಾಯಕ ಪಾತ್ರ ನಿರ್ವಹಿಸುವ ಉದ್ದೇಶದೊಂದಿಗೆ ಕಾಂಗ್ರೆಸ್ ಸೇರಿದ ಸಿದ್ಧು, ಅಮರಿಂದರ್ ಅವರನ್ನು ತಮ್ಮ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ನಿರಾಕರಿಸಿದಾಗ ಅವರ ವಿರುದ್ಧ ಬಂಡಾಯವೆದ್ದರು. ಪಕ್ಷದಲ್ಲಿ ಇನ್ನು ತಾನು ಅಲಂಕಾರದ ಗೊಂಬೆಯಾಗಿರಲಾರೆ ಅಂತ ಮಾಜಿ ಕ್ರಿಕೆಟರ್ ಸ್ಪಷ್ಟಪಡಿಸಿದ್ದಾರೆ.

ಪಂಜಾಬ ಕಾಂಗ್ರೆಸ್​ ಘಟಕದಲ್ಲಿ ನಡೆಯುತ್ತಿರುವ ಒಳಜಗಳಗಳನ್ನು ಬಗೆಹರಿಸಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಚಿಸಿದ ತ್ರಿ-ಸದಸ್ಯರ ಸಮಿತಿ ನೀಡಿದ ಸಲಹೆಯನ್ನು ಸಹ ಅಮರರಿಂದರ್ ಸಿಂಗ್ ಅವರು ತಿರಸ್ಕರಿಸಿದ್ದಾರೆ.

ಸಮಿತಿಯು ಮುಂದಿನ ವರ್ಷ ಚುನಾವಣೆ ನಡೆಯಲಿರುವ ಪಂಜಾಬ್​ನಲ್ಲಿ ಸಿದ್ಧು ಅವರಿಗೆ ಪಕ್ಷದ ರಚನೆಯಲ್ಲಿ ಪಾತ್ರ ನೀಡಲಾಗುವುದು ಮತ್ತು ಮುಖ್ಯಮಂತ್ರಿಗಳು, ಚುನಾವಣಾ ಪ್ರಣಾಳಿಕೆಯಲ್ಲಿ ಮಾಡಿದ ಭರವಸೆಗಳನ್ನು ಈಡೇರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಮಿತಿ ಸಲಹೆ ನೀಡಿತ್ತು. ವಿದ್ಯುಚ್ಛಕ್ತಿ ಬಿಲ್ ಕಡಿಮೆ ಮಾಡುವ, ಮರಳು ಮಾಫಿಯಾ ಮತ್ತು ಸಾರಿಗೆ ಮಾಫಿಯಾ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಅಮರಿಂದರ್ ಸಿಂಗ್ ಅವರಿಗೆ ಸಮಿತಿ ಹೇಳಿತ್ತು.

ಅನುಕಂಪದ ಆಧಾರದಲ್ಲಿ, ಇಬ್ಬರು ಕಾಂಗ್ರೆಸ್ ಶಾಸಕರ ಮಕ್ಕಳಿಗೆ ಸರ್ಕಾರಿ ನೌಕರಿ ನೀಡಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಸಿದ್ಧು ಅದನ್ನೂ ಒಂದು ಅಸ್ತ್ರವಾಗಿಸಿಕೊಂಡು ಅಮರಿಂದರ್​ ವಿರುದ್ಧ ದಾಳಿ ನಡೆಸುತ್ತಿದ್ದಾರೆ. 2017 ಚುನಾವಣೆಗೆ ಮೊದಲು ಜನರಿಗೆ ನೀಡಿದ ಭರವಸೆಗಳನ್ನು ಸರ್ಕಾರ ಈಡೇರಿಸಸುವಲ್ಲಿ ವಿಫಲವಾಗಿದೆ ಎಂದು ಬಹಿರಂಗವಾಗಿ ಟೀಕಿಸುತ್ತಿರುವ ಅವರು ಗುರು ಗ್ರಂಥ್ ಸಾಹಿಬ್ ಅಪವಿತ್ರಗೊಳಿಸಿದ ಹಿನ್ನೆಲೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದ ಪ್ರಕರಣದಲ್ಲಿ ಸರ್ಕಾರದ ನಿಷ್ಕ್ರಿಯತೆಯನ್ನು ಬಲವಾಗಿ ಖಂಡಿಸುತ್ತಿದ್ದಾರೆ.

ಇದನ್ನೂ ಓದಿ: ಪಂಜಾಬ್​​ನಲ್ಲಿ ಕಾಂಗ್ರೆಸ್ ಬಿಕ್ಕಟ್ಟು: ಸಭೆಗೆ ರಾಹುಲ್ ನಿರಾಕರಿಸಿದ ನಂತರ ಪ್ರಿಯಾಂಕಾರನ್ನು ಭೇಟಿಯಾದ ನವಜೋತ್ ಸಿಂಗ್ ಸಿಧು

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ