AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಗಾಂಧಿ ಬೆಂಗಾವಲು ವಾಹನ ಸರಣಿ ಅಪಘಾತ! ಹಲವರಿಗೆ ಗಾಯ, 5 ವಾಹನಗಳು ಹಾಗೂ ಒಂದು ಆ್ಯಂಬುಲೆನ್ಸ್ ಜಖಂ

ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇನಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನಗಳು ಸರಣಿ ಅಪಘಾತಕ್ಕೀಡಾಗಿವೆ. ಸುಲ್ತಾನ್‌ಪುರ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ನಡೆದ ಈ ಘಟನೆಯಲ್ಲಿ 5 ವಾಹನಗಳು ಜಖಂಗೊಂಡಿದ್ದು, ಹಲವು ಕಾರ್ಯಕರ್ತರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ರಾಹುಲ್ ಗಾಂಧಿ ಅವರು ಸುರಕ್ಷಿತವಾಗಿದ್ದಾರೆ.

ರಾಹುಲ್ ಗಾಂಧಿ ಬೆಂಗಾವಲು ವಾಹನ ಸರಣಿ ಅಪಘಾತ! ಹಲವರಿಗೆ ಗಾಯ, 5 ವಾಹನಗಳು ಹಾಗೂ ಒಂದು ಆ್ಯಂಬುಲೆನ್ಸ್ ಜಖಂ
ರಾಹುಲ್ ಗಾಂಧಿ ಬೆಂಗಾಲು ವಾಹನಗಳ ಅಪಘಾತ
ಭಾವನಾ ಹೆಗಡೆ
|

Updated on: Oct 26, 2026 | 11:18 AM

Share

ಮುಖ್ಯಾಂಶಗಳು

  • ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇನಲ್ಲಿ ರಾಹುಲ್ ಗಾಂಧಿ ಬೆಂಗಾವಲು ವಾಹನಗಳ ಸರಣಿ ಅಪಘಾತ.
  • ದಿಢೀರ್ ಬ್ರೇಕ್‌ನಿಂದ 5 ವಾಹನಗಳು ಡಿಕ್ಕಿ, ಕಾರ್ಯಕರ್ತರಿಗೆ ಗಾಯ.
  • ವಿಪಕ್ಷ ನಾಯಕ ರಾಹುಲ್ ಗಾಂಧಿ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಸುರಕ್ಷಿತ.

ಸುಲ್ತಾನ್‌ಪುರ, ಅಕ್ಟೋಬರ್ 26: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನ (ಕಾನ್ವಾಯ್) ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇನಲ್ಲಿ ಸರಣಿ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ಹಲಿಯಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲೋಮೀಟರ್ ಸಂಖ್ಯೆ 91ರ ಬಳಿ ಈ ಭೀಕರ ಅವಘಡ ಸಂಭವಿಸಿದೆ.

ಅಪಘಾತವಾಗಿದ್ದು ಹೇಗೆ?

ದೆಹಲಿಯಿಂದ ಲಖನೌ ತಲುಪಿದ್ದ ರಾಹುಲ್ ಗಾಂಧಿ ಅವರು ಅಲ್ಲಿಂದ ಸುಲ್ತಾನ್‌ಪುರದ ಎಂಪಿ-ಎಮ್‌ಎಲ್‌ಎ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ರಸ್ತೆ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇನಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾನ್ವಾಯ್‌ನ ಮುಂಭಾಗದ ವಾಹನವು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದೆ. ಪರಿಣಾಮ ಹಿಂದಿನಿಂದ ಬರುತ್ತಿದ್ದ ವಾಹನಗಳು ನಿಯಂತ್ರಣ ತಪ್ಪಿ ಒಂದಕ್ಕೊಂದು ಬಲವಾಗಿ ಡಿಕ್ಕಿಯಾಗಿವೆ.

ರಾಹುಲ್ ಗಾಂಧಿ ಸೇಫ್

ಈ ಸರಣಿ ಡಿಕ್ಕಿಯಲ್ಲಿ ಕಾನ್ವಾಯ್‌ನಲ್ಲಿದ್ದ ಒಟ್ಟು 5 ವಾಹನಗಳು ಹಾಗೂ ಒಂದು ಆಂಬ್ಯುಲೆನ್ಸ್ ತೀವ್ರವಾಗಿ ಜಖಂಗೊಂಡಿವೆ. ಅಪಘಾತದ ತೀವ್ರತೆಗೆ ವಾಹನಗಳಲ್ಲಿದ್ದ ಕೆಲವು ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಯಾವುದೇ ಗಾಯಗಳಿಲ್ಲದೆ ಸಂಪೂರ್ಣ ಸುರಕ್ಷಿತವಾಗಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಎಕ್ಸ್‌ಪ್ರೆಸ್‌ವೇನಲ್ಲಿ ಕೆಲಕಾಲ ಗೊಂದಲ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಸ್ಥಳದಲ್ಲಿದ್ದ ಸಿಬ್ಬಂದಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆಯ ವ್ಯವಸ್ಥೆ ಮಾಡಿದರು. ಘಟನೆಯ ನಂತರ ರಾಹುಲ್ ಗಾಂಧಿ ಅವರು ಸುರಕ್ಷಿತವಾಗಿ ತಮ್ಮ ಗಮ್ಯಸ್ಥಾನದತ್ತ ಪ್ರಯಾಣ ಬೆಳೆಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ಕುಮಾರಿ ವೇಸ್ಟ್​ ಪೀಸ್ ಎಂದ ಸೌಂದರ್ಯಾ ಶೆಟ್ಟಿ; ನಡೆಯಿತು ದೊಡ್ಡ ಜಗಳ
ಕುಮಾರಿ ವೇಸ್ಟ್​ ಪೀಸ್ ಎಂದ ಸೌಂದರ್ಯಾ ಶೆಟ್ಟಿ; ನಡೆಯಿತು ದೊಡ್ಡ ಜಗಳ
ಸೀಗೆ ಹುಣ್ಣಿಮೆ: ಕೊಪ್ಪಳ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಮಹಾಪೂರ, ಜನಸಾಗರ
ಸೀಗೆ ಹುಣ್ಣಿಮೆ: ಕೊಪ್ಪಳ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಮಹಾಪೂರ, ಜನಸಾಗರ
ಇಂದು ಸೀಗೆ ಹುಣ್ಣಿಮೆ; ಈ ರಾಶಿಯವರಿಗೆ ಶುಭ ದಿನ
ಇಂದು ಸೀಗೆ ಹುಣ್ಣಿಮೆ; ಈ ರಾಶಿಯವರಿಗೆ ಶುಭ ದಿನ
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ
ಕಾಮಗಾರಿ ವೀಕ್ಷಣೆಗೆ ಬಂದಿದ್ದ ಶಾಸಕ ವಿಠ್ಠಲ್ ಹಲಗೇಕರ್​​​ಗೆ ಜನರಿಂದ ಕ್ಲಾಸ್
ಕಾಮಗಾರಿ ವೀಕ್ಷಣೆಗೆ ಬಂದಿದ್ದ ಶಾಸಕ ವಿಠ್ಠಲ್ ಹಲಗೇಕರ್​​​ಗೆ ಜನರಿಂದ ಕ್ಲಾಸ್
‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಸಾಯಿಕುಮಾರ್ ಮಾತು: ನಟ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಸಾಯಿಕುಮಾರ್ ಮಾತು: ನಟ ಹೇಳಿದ್ದೇನು?
‘ಪ್ರೇಮದ ಊರಲಿ’ ಎಫೆಕ್ಟ್: ಚಿತ್ರೀಕರಣ ನಡೆದ ಸೀಗೆಗುಡ್ಡದಲ್ಲಿ ಜನಸಾಗರ
‘ಪ್ರೇಮದ ಊರಲಿ’ ಎಫೆಕ್ಟ್: ಚಿತ್ರೀಕರಣ ನಡೆದ ಸೀಗೆಗುಡ್ಡದಲ್ಲಿ ಜನಸಾಗರ
ವಾರಾಣಸಿಯ ನಮೋ ಘಾಟ್‌ನಲ್ಲಿ ಪ್ರಧಾನಿ ಮೋದಿಯ ಮನಸೆಳೆದ ಏರ್ ಶೋ
ವಾರಾಣಸಿಯ ನಮೋ ಘಾಟ್‌ನಲ್ಲಿ ಪ್ರಧಾನಿ ಮೋದಿಯ ಮನಸೆಳೆದ ಏರ್ ಶೋ
ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಿದ ಸಿದ್ದರಾಮಯ್ಯ
ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಿದ ಸಿದ್ದರಾಮಯ್ಯ
ಗಗನ್​​ಗೆ ಕೌಂಟರ್ ಕೊಟ್ಟ ಆಸಿಯಾ, ಸೋನಿಕಾ ಇಂದ ಆಸಿಯಾಗೆ ಟಾಂಗ್​​: ವಿಡಿಯೋ
ಗಗನ್​​ಗೆ ಕೌಂಟರ್ ಕೊಟ್ಟ ಆಸಿಯಾ, ಸೋನಿಕಾ ಇಂದ ಆಸಿಯಾಗೆ ಟಾಂಗ್​​: ವಿಡಿಯೋ