ಬೆಲೆ ಏರಿಕೆಗೆ ಕಣ್ಣೀರು ಹಾಕಿದ್ದ ವ್ಯಾಪಾರಿಗೆ ರಾಹುಲ್​​ ಗಾಂಧಿ ಆತಿಥ್ಯ

ರಾಹುಲ್ ಗಾಂಧಿ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ದೆಹಲಿಯ ಆಜಾದ್‌ಪುರ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟಗಾರರೊಬ್ಬರು ಟೊಮೆಟೊ ಬೆಲೆ ಏರಿಕೆಯಾಗಿದ್ದು, ಖರೀದಿಸುವಷ್ಟು ಹಣ ನನ್ನಲ್ಲಿ ಇಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ ಎಂಬ ವಿಡಿಯೋವನ್ನು ಹಂಚಿಕೊಂಡಿದ್ದರು.

ಬೆಲೆ ಏರಿಕೆಗೆ ಕಣ್ಣೀರು ಹಾಕಿದ್ದ ವ್ಯಾಪಾರಿಗೆ ರಾಹುಲ್​​ ಗಾಂಧಿ ಆತಿಥ್ಯ
ರಾಹುಲ್​ ಗಾಂಧಿ
Follow us
ಅಕ್ಷಯ್​ ಪಲ್ಲಮಜಲು​​
|

Updated on:Aug 15, 2023 | 5:18 PM

ದೆಹಲಿ, ಆ.15: ಕಾಂಗ್ರೆಸ್​​ ನಾಯಕ ರಾಹುಲ್​​ ಗಾಂಧಿ  ಅವರು ತರಕಾರಿ ವ್ಯಾಪಾರಿಯೊಬ್ಬರಿಗೆ ತಮ್ಮ ನಿವಾಸದಲ್ಲಿ ಆತಿಥ್ಯ ನೀಡಿರುವ ಬಗ್ಗೆ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಈ ತರಕಾರಿ ವ್ಯಾಪಾರಿಯನ್ನು ರಾಮೇಶ್ವರ್​​ ಎಂದು ಗುರುತಿಸಲಾಗಿದೆ.  ರಾಮೇಶ್ವರ್ ಎಂಬ​​ ತರಕಾರಿ ವ್ಯಾಪಾರಿಯ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ರಾಹುಲ್​​ ಗಾಂಧಿ ಅವರು ಕೂಡ ಹಂಚಿಕೊಂಡಿದ್ದರು. ಟೊಮೆಟೊ ಬೆಲೆ ಗಗನಕ್ಕೇರಿದ ಸಮಯದಲ್ಲಿ ಟೊಮೆಟೋ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದ ವಿಡಿಯೋ ಎಲ್ಲ ಕಡೆ ವೈರಲ್​ ಆಗಿತ್ತು.

ಜುಲೈನಲ್ಲಿ ಈ ವೀಡಿಯೋ ವೈರಲ್ ಆಗಿತ್ತು. ಟೊಮೆಟೊ ಬೆಲೆ ಗಗನಕ್ಕೇರುತ್ತಿರುವ ಕುರಿತು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಾನು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಬೇಕು ಎಂದು ಆಸೆ ವ್ಯಕ್ತಪಡಿಸಿದ್ದರು. ಇದೀಗ ರಾಹುಲ್​ ಗಾಂಧಿ, ರಾಮೇಶ್ವರ ಅವರನ್ನು ಭೇಟಿಯಾಗಿರುವ ಫೋಟೋವನ್ನು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದು, ರಾಮೇಶ್ವರ ಒಬ್ಬ ಮುಗ್ದ ಮನಸ್ಸಿನ ವ್ಯಕ್ತಿ, ದೇಶದಲ್ಲಿ ಅದೆಷ್ಟೋ ಇಂತಹ ಉತ್ಸಾಹಭರಿತ ವ್ಯಕ್ತಿಗಳು ಇದ್ದರೆ. ಇಂತಹ ವ್ಯಕ್ತಿಗಳು ಭಾರತದ ಭಾಗ್ಯ ವಿಧಾತಾ ಎಂದು ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ರಾಹುಲ್ ಗಾಂಧಿ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ದೆಹಲಿಯ ಆಜಾದ್‌ಪುರ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟಗಾರರೊಬ್ಬರು ಟೊಮೆಟೊ ಬೆಲೆ ಏರಿಕೆಯಾಗಿದ್ದು, ಖರೀದಿಸುವಷ್ಟು ಹಣ ನನ್ನಲ್ಲಿ ಇಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ ಎಂಬ ವಿಡಿಯೋವನ್ನು ಹಂಚಿಕೊಂಡಿದ್ದರು.

ಮಳೆಯಿಂದ ಟೊಮೆಟೊ ಬೆಲೆ ಹೆಚ್ಚಿದೆ. ಈ ಟೊಮೆಟೊಗಳನ್ನು ನಮ್ಮಂತ ಬಡ ವ್ಯಾಪಾರಿಗಳು ಹೇಗೆ ಖರೀದಿ ಮಾಡುವುದು ಮತ್ತು ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಹೇಗೆ? ಇದರಿಂದ ದಿನಕ್ಕೆ 100-200 ಗಳಿಸುವುದೇ ಕಷ್ಟವಾಗಿದೆ ಎಂದು ರಾಮೇಶ್ವರ ಹೇಳಿದ್ದಾರೆ.

ರಾಹುಲ್​​ ಗಾಂಧಿ ಅವರು ಹಂಚಿಕೊಂಡ ಟ್ವೀಟ್​​ ಇಲ್ಲಿದೆ

ಇದನ್ನೂ ಓದಿ: ರಾಹುಲ್​​​ಗೆ ಯಾವಾಗ ಮದುವೆ ಎಂದ ರೈತ ಮಹಿಳೆಯರ ಬಳಿ ನೀವೇ ಹುಡುಗಿ ಹುಡುಕಿ ಎಂದ ಸೋನಿಯಾ ಗಾಂಧಿ

ರಾಹುಲ್ ಗಾಂಧಿ ಅವರು ಹಂಚಿಕೊಂಡಿದ್ದ ಮತ್ತೊಂದು ಟ್ವೀಟ್​​ನಲ್ಲಿ ದೇಶವನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗುತ್ತಿದೆ. ಒಂದೆಡೆ ಅಧಿಕಾರವನ್ನು ರಕ್ಷಿಸಿದ ಪ್ರಬಲ ವ್ಯಕ್ತಿಗಳಿದ್ದಾರೆ, ಅವರ ಸೂಚನೆಗಳ ಮೇರೆಗೆ ದೇಶದ ನೀತಿಗಳನ್ನು ಮಾಡಲಾಗುತ್ತಿದೆ. ಮತ್ತೊಂದೆಡೆ ಸಾಮಾನ್ಯ ಭಾರತೀಯರು, ಅವರ ವ್ಯಾಪ್ತಿಯಿಂದ ತರಕಾರಿಗಳಂತಹ ಮೂಲಭೂತ ವಸ್ತುಗಳು ಸಹ ದೂರ ಹೋಗುತ್ತಿವೆ. ನಾವು ಶ್ರೀಮಂತ ಮತ್ತು ಬಡವರ ನಡುವಿನ ಅಂತರವನ್ನು ತುಂಬಬೇಕು ಮತ್ತು ಈ ಕಣ್ಣೀರನ್ನು ಒರೆಸಬೇಕು ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:10 pm, Tue, 15 August 23